Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಎಲ್ಲಾ ವಿಧವಾದ ಜಗಳ ಭಿನ್ನಾಭಿಪ್ರಾಯಗಳನ್ನು ಬಿಡಬೇಕು

    ಕ್ರಿಸ್ತನ ಸೇವೆ ಮಾಡುವವರು ಆತನಲ್ಲಿ ನೆಲೆಗೊಂಡಿದ್ದು ಎಲ್ಲಾ ಸ್ವಾರ್ಥವನ್ನು ಬಿಟ್ಟಾಗ, ನಾನು ಇತರರಿಗಿಂತ ಶ್ರೇಷ್ಠವೆಂಬ ವಿಷಯದಲ್ಲಿ ಯಾವುದೇ ಜಗಳ, ಕಲಹ, ಪ್ರತಿಸರ್ಧೆ ಇಲ್ಲದ, ಐಕ್ಯತೆಯಿರುವಾಗ, ಅವರು ತಮ್ಮನ್ನು ಪವಿತ್ರಾತ್ಮನಲ್ಲಿ ಆತನ ಸೇವೆಗೆ ಪ್ರತಿಷ್ಠಿಸಿಕೊಂಡು ಪರಸ್ಪರ ಪ್ರೀತಿ ಕಂಡು ಬರುವಾಗ, ಅವರಲ್ಲಿ ಪರಿಶುದ್ಧಾತ್ಮನ ಕೃಪೆಯ ಮಳೆಯು ಖಂಡಿತವಾಗಿ ಸುರಿಯಲಿದೆ. ದೇವರ ವಾಗ್ದಾನದಲ್ಲಿ ಒಂದು ಸೊನ್ನೆಯಾದರೂ ಅಥವಾ ಒಂದು ಗುಡುಸಾದರೂ ಎಂದೂ ವಿಫಲವಾಗುವುದಿಲ್ಲ. ಆದರೆ ಇತರರ ಸೇವೆಯನ್ನು ತಿರಸ್ಕರಿಸಿ ತಾವು ಶ್ರೇಷ್ಠರೆಂದು ಯಾರಾದರೂ ಎಣಿಸಿಕೊಂಡಾಗ ದೇವರು ಅವರನ್ನು ಆಶೀರ್ವದಿಸುವುದಿಲ್ಲ (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 1, ಪುಟ 175, 1896).ಕೊಕಾಘ 110.2

    ಕರ್ತನ ಮಹಾದಿನದಲ್ಲಿ ನಾವು ಕ್ರಿಸ್ತನು ನಮ್ಮ ಆಶಯವೂ ನಮ್ಮ ಬುರುಜೂ ಆಗಿ ಆತನಲ್ಲಿ ಆತುಕೊಳ್ಳಬೇಕಾದಲ್ಲಿ, ನಮ್ಮೆಲ್ಲಾ ದ್ವೇಷ, ಅಸೂಯೆ ಹಾಗೂ ನಾವು ಶ್ರೇಷ್ಠರೆಂಬ ಭಾವನೆ ಬಿಡಬೇಕು. ಈ ಕೆಟ್ಟಗುಣಗಳು ನಮ್ಮ ಜೀವನದಲ್ಲಿ ತಿರುಗಿ ಚಿಗುರದಂತೆ, ಅಪರಿಶುದ್ಧವಾದ ಇವುಗಳನ್ನು ಬುಡಸಮೇತ ನಾವು ನಿರ್ಮೂಲ ಮಾಡಬೇಕು. ನಾವು ಸಂಪೂರ್ಣವಾಗಿ ಕರ್ತನ ಪಕ್ಷದಲ್ಲಿರಬೇಕು (ದಿಸ್ ಡೇ ವಿತ್‌ಗಾಡ್, ಪುಟ 258, 1903).ಕೊಕಾಘ 110.3

    ಕ್ರೈಸ್ತರು ತಮ್ಮೆಲ್ಲಾ ಜಗಳ, ಕಲಹ, ಭಿನ್ನಾಭಿಪ್ರಾಯಗಳನ್ನು ಬಿಟ್ಟು, ನಾಶವಾಗುತ್ತಿರುವವರನ್ನು ರಕ್ಷಿಸಲು ತಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿಕೊಡಬೇಕು. ಅವರು ನಂಬಿಕೆಯಿಂದ ದೇವರು ವಾಗ್ದಾನ ಮಾಡಿದ ಆಶೀರ್ವಾದಕ್ಕಾಗಿ ಬೇಡಿಕೊಳ್ಳಬೇಕು. ಅದು ಖಂಡಿತವಾಗಿಯೂ ಕೊಡಲ್ಪಡುತ್ತದೆ (ಟೆಸ್ಟಿಮೊನೀಸ್, ಸಂಪುಟ 8, ಪುಟ 21, 1904).ಕೊಕಾಘ 110.4