Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಭಾನುವಾರ ವಿಶೇಷ ಆತ್ಮೀಕ ಚಟುವಟಿಕೆಯಲ್ಲಿ ಭಾಗಿಗಳಾಗಿ

    ಒಂದು ವೇಳೆ ಭಾನುವಾರಾಚರಣೆಯು ಕಡ್ಡಾಯವಾಗಿ ಜಾರಿಗೆ ಬಂದಲ್ಲಿ ನಾವೇನು ಮಾಡಬೇಕೆಂಬ ವಿಷಯದಲ್ಲಿ ಶ್ರೀಮತಿ ವೈಟಮ್ಮನವರು ‘ಲಾಸ್ಟ್ ಡೇ ಈವೆಂಟ್ಸ್’ ಪುಸ್ತಕದ 139ನೇ ಪುಟದಲ್ಲಿ ಹೀಗೆ ತಿಳಿಸಿದ್ದಾರೆ : “ಇಂತಹ ಇಕ್ಕಟ್ಟಿನ ಪರಿಸ್ಥಿತಿ ಬಂದಾಗ ಸೆವೆಂತ್ ಡೇ ಅಡ್ವೆಂಟಿಸ್ಟರು ವಿವೇಕದಿಂದ ನಡೆದುಕೊಳ್ಳಬೇಕು. ಅಂದು ದಿನನಿತ್ಯದ ಸಾಮಾನ್ಯ ಕೆಲಸಗಳನ್ನು ಮಾಡದೆ ಸುವಾರ್ತಾ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ದೇವರು ನನಗೆ ದರ್ಶನದಲ್ಲಿ ತೋರಿಸಿದ್ದಾನೆ.ಕೊಕಾಘ 80.1

    ಭಾನುವಾರಾಚರಣೆಯ ಕಾನೂನಿಗೆ ವಿರುದ್ಧವಾಗಿ ನಡೆದಲ್ಲಿ, ಅದನ್ನು ಜಾರಿಗೆ ತರಬೇಕೆಂದು ನಿರ್ಧರಿಸಿರುವ ಧಾರ್ಮಿಕ ದುರಭಿಮಾನಿಗಳು ತಮ್ಮ ಹಿಂಸೆ ಕಾರ್ಯವನ್ನು ಹೆಚ್ಚಿಸಲು ಕಾರಣವಾಗುತ್ತದೆ. ನಾವು ದೇಶದ ಕಾನೂನು ಉಲ್ಲಂಘಿಸುತ್ತೇವೆಂಬ ಭಾವನೆ ಅವರಲ್ಲಿ ಬರಲು ಅವಕಾಶ ಕೊಡಬಾರದು. ಕೆಲಸ ಮಾಡುವುದು ಅಪರಾಧವೆಂದು ಎಣಿಸಲ್ಪಡುವಾಗ, ವಿವೇಕದಿಂದ ವರ್ತಿಸಿ, ಶಾಂತಿ ಕಾಪಾಡಿಕೊಳ್ಳುವುದಕ್ಕಾಗಿ ಆ ದಿನದಲ್ಲಿ ಆತ್ಮೀಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಯಾರೂ ಸಹ ಮೃಗದ ಗುರುತು ಹೊಂದುವುದಿಲ್ಲ.ಕೊಕಾಘ 80.2

    ಭಾನುವಾರದಲ್ಲಿ ಕರ್ತನ ನಾಮ ಮಹಿಮೆ ಹೊಂದುವಂತೆ ಅನೇಕ ವಿಧವಾದ ಕಾರ್ಯಗಳನ್ನು ಮಾಡಬಹುದು. ಆ ದಿನದಲ್ಲಿ ಮನೆಗಳಲ್ಲಿ ಪ್ರಾರ್ಥನಾ ಕೂಟ ಹಾಗೂ ಸಾರ್ವಜನಿಕ ಕೂಟಗಳನ್ನು ಏರ್ಪಡಿಸಬಹುದು, ಮನೆಗಳನ್ನು ಸಂಧಿಸಬಹುದು. ಲೇಖಕರು ಲೇಖನಗಳನ್ನು ಬರೆಯಲು ಸಮಯ ಉಪಯೋಗಿಸಬಹುದು, ಯಾವಾಗ ಸಾದ್ಯವೋ, ಆಗ ಭಾನುವಾರದಂದು ಧಾರ್ಮಿಕ ಆರಾಧನೆಗಳನ್ನು ನಡೆಸಬಹುದು. ಇಂತಹ ಕೂಟಗಳು ಬಹಳ ಆಸಕ್ತಿಕರವಾಗಿರುವಂತೆ ಮಾಡಬೇಕು, ಆತ್ಮೀಕ ಪುನರುಜ್ಜಿವನ ಕೊಡುವಂತ ಹಾಡುಗಳನ್ನು ಹಾಡಬಹುದು ಮತ್ತು ರಕ್ಷಕನ ಪ್ರೀತಿಯ ಬಗ್ಗೆ ಬಲದಿಂದಲೂ ಹಾಗೂ ಭರವಸದಿಂದಲೂ ಮಾತಾಡಿ (ಟೆಸ್ಟಿಮೊನೀಸ್, ಸಂಪುಟ 9, ಪುಟಗಳು 232, 233, 1909).ಕೊಕಾಘ 80.3

    ವಿದ್ಯಾರ್ಥಿಗಳನ್ನು ಬೇರೆ ಸ್ಥಳಗಳಿಗೆ ಕರೆದುಕೊಂಡು ಹೋಗಿ ಅಲ್ಲಿ ದೈವೀಕ ಕೂಟಗಳನ್ನು ಹಾಗೂ ವೈದ್ಯಕೀಯ ಶಿಬಿರ ನಡೆಸಬಹುದು. ಭಾನುವಾರಾಚರಣೆ ಕಡ್ಡಾಯವಾಗಿರುವುದರಿಂದ ಜನರು ಮನೆಗಳಲ್ಲಿರುತ್ತಾರೆ. ಅವರಿಗೆ ಸತ್ಯ ತಿಳಿಸಲು ಅತ್ಯುತ್ತಮ ಅವಕಾಶ ದೊರೆಯುತ್ತದೆ. ಈ ರೀತಿಯಲ್ಲಿ ಭಾನುವಾರವನ್ನು ಕಳೆಯುವುದು ದೇವರಿಗೆ ಯಾವಾಗಲೂ ಸಮ್ಮತವಾಗಿದೆ (ಘಟ 238, 1909)ಕೊಕಾಘ 80.4