Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸಂಕಟದ ಸಮಯಕ್ಕೆ ಮೊದಲು ನೀತಿವಂತರಲ್ಲಿ ಅನೇಕರು ಕ್ರಿಸ್ತನಲ್ಲಿ ನಿದ್ರೆಹೋಗುವರು

    ಯಾವುದೇ ಷರತ್ತು ಇಲ್ಲದೆ ರೋಗವಾಸಿಯಾಗಬೇಕೆಂದು ಬೇಡಿಕೊಳ್ಳುವುದು ಎಲ್ಲಾ ಸಮಯದಲ್ಲಿಯೂ ಒಳಯದಲ್ಲ... ನಾವು ಯಾರಿಗಾಗಿ ಗುಣವಾಗಬೇಕೆಂದು ಕೇಳಿಕೊಳ್ಳುತ್ತೇವೆಯೋ, ಅವರು ಒಂದು ವೇಳೆ ಬದುಕಿನಲ್ಲಿ ಮುಂದೆ ಬರಲಿರುವ ಕಷ್ಟ ಸಂಕಟಗಳನ್ನು ಎದುರಿಸಲು ಸಮರ್ಥರಾಗಿದ್ದಾರೆಯೇ ಅಥವಾ ಇಲ್ಲವೋ ಎಂಬುದು ದೇವರಿಗೆ ತಿಳಿದಿದೆ. ಆತನು ಆರಂಭಕ್ಕೆ ಮೊದಲೇ ಮುಕ್ತಾಯವನ್ನು ಬಲ್ಲವನು, ಈ ಲೋಕದ ಮೇಲೆ ತೀವ್ರವಾದ ಕಷ್ಟಸಂಕಟ ಶೋಧನೆ ಬರಲಿಕ್ಕೆ ಮೊದಲು ನೀತಿವಂತರಲ್ಲಿ ಅನೇಕರು ಕ್ರಿಸ್ತನಲ್ಲಿ ನಿದ್ರೆ ಹೋಗುವರು (ಕೌನ್ಸೆಲ್ಸ್ ಆನ್ ಹೆಲ್, ಪುಟ 375).ಕೊಕಾಘ 149.4

    ಕ್ರಿಸ್ತನು ಬರುವುದಕ್ಕೆ ಮೊದಲು ಸಂಭವಿಸುವ ಸಂಕಟದ ಸಮಯಕ್ಕೆ ಮೊದಲು ಅನೇಕ ಮಕ್ಕಳೂ ಸಹ ಕ್ರಿಸ್ತನಲ್ಲಿ ನಿದ್ರೆ ಹೋಗುವರೆಂದು ದೇವರು ಶ್ರೀಮತಿ ವೈಟಮ್ಮನವರಿಗೆ ತಿಳಿಸಿದ್ದಾನೆ. ನಮ್ಮ ಮಕ್ಕಳನ್ನು ನಾವು ಪರಲೋಕದಲ್ಲಿ ತಿರುಗಿ ನೋಡುವೆವು ಹಾಗೂ ಅವರನ್ನು ಗುರುತಿಸುವೆವು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 2, 259).ಕೊಕಾಘ 149.5