Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ವಿರೋಧತೆಯಿಂದ ಸತ್ಯದ ಸೌಂದರ್ಯವು ಕಂಡುಬರುತ್ತದೆ

    ಲೋಕ ಮತ್ತು ಸಭೆಯು ಒಂದಾಗಿ ದೇವರಾಜ್ಞೆಗಳನ್ನು ನಿರರ್ಥಕ ಮಾಡಲು ಪ್ರಯತ್ನಿಸುವಾಗ, ಕರ್ತನಿಗೆ ವಿಧೇಯರಾಗುವವರ ಉತ್ಸಾಹ ಹೆಚ್ಚಾಗುತ್ತದೆ. ದೇವರಾಜ್ಞೆಗಳ ವಿರುದ್ಧವಾಗಿ ಬರುವ ಪ್ರತಿಯೊಂದು ಆಕ್ಷೇಪಣೆಯು ಸತ್ಯದ ಏಳಿಗೆಗೆ ಮಾರ್ಗಮಾಡಿಕೊಡುವುದು ಹಾಗೂ ಜನರ ಮುಂದೆ ಅದರ ಮಹತ್ವವನ್ನು ತಿಳಿಸಲು ಸಹಾಯಕವಾಗುವುದು.ಕೊಕಾಘ 80.5

    ಭಾನುವಾರಾಚರಣೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ಪ್ರಯತ್ನಿಸುವ ಈ ಸಮಯದಲ್ಲಿ ಸುಳ್ಳಾದ ಭಾನುವಾರದ ಸಬ್ಬತ್ತಿಗೆ ಬದಲಾಗಿ ಶನಿವಾರದ ನಿಜ ಸಬ್ಬತ್ತನ್ನು ಜಗತ್ತಿಗೆ ತಿಳಿಸುವ ಉತ್ತಮ ಅವಕಾಶ ದೊರೆಯುತ್ತದೆ. ದೇವರು ಸರ್ವಜ್ಞಾನಿಯಾಗಿದ್ದಾನೆ. ಭಾನುವಾರದ ವಿಷಯವು ಪ್ರಾಮುಖ್ಯವಾಗುವಂತೆ ಆತನು ತಾನೇ ಅನುಮತಿ ನೀಡಿದ್ದಾನೆ. ಇದರಿಂದ ನಾಲ್ಕನೆ ಆಜ್ಞೆಯಾದ ಸಬ್ಬತ್ತನ್ನು ವಿಧಾನ ಸಭೆ, ವಿಧಾನ ಪರಿಷತ್ತು, ಲೋಕ ಸಭೆಗಳಲ್ಲಿ ಸದಸ್ಯರ ಮುಂದೆ ತಿಳಿಸಬಹುದಾಗಿದೆ. ಈ ರೀತಿಯಾಗಿ ದೇಶದ ಪ್ರಮುಖ ನಾಯಕರು ಮತ್ತು ಅಧಿಕಾರಿಗಳು ನಿಜವಾದ ಸಬ್ಬತ್ತು ಹಾಗೂ ದೇವರ ವಾಕ್ಯದ ಸಾಕ್ಷಿಯ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದು.ಕೊಕಾಘ 80.6