Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಲೋಕದ ಸಂಬಂಧದೊಂದಿಗೆ ಎಚ್ಚರಿಕೆಯಾಗಿರಬೇಕು

    (ಪ್ರಕಟನೆ 18; -3ನೇ ವಚನಗಳನ್ನು ಓದಿರಿ), ಈ ಸಂದೇಶ ಸಾರುತ್ತಿರುವಾಗ, ಸತ್ಯದ ಘೋಷಣೆಯು ತನ್ನ ಬೇರ್ಪಡಿಸುವ ಕಾರ್ಯ ಮಾಡುತ್ತಿರುವಾಗ, ದೇವರ ನಂಬಿಗಸ್ತ ಕಾವಲುಗಾರರಾದ ನಾವು, ನಮ್ಮ ನಿಜ ಸ್ಥಿತಿ ಹೇಗಿದೆ ಎಂದು ಅರಿತುಕೊಳ್ಳಬೇಕು. ನಮ್ಮ ಅತ್ಮೀಕ ವಿವೇಚನಾ ಶಕ್ತಿಯು ಗಲಿಬಿಲಿಗೊಳ್ಳದಂತೆ, ಹಾಗೂ ಲೌಕಿಕ ಆಸಕ್ತಿಯಲ್ಲಿ ಮುಳುಗಿ ಹೋಗದಂತೆ ನಾವು ಪ್ರಾಪಂಚಿಕ ವ್ಯಕ್ತಿಗಳೊಂದಿಗೆ ಸೇರಬಾರದು. ಅದೇ ಸಮಯದಲ್ಲಿ ನಾವು ಫರಿಸಾಯರಂತೆ ನಡೆದುಕೊಂಡು ಅವರಿಂದ ದೂರವಾಗಿರಲೂ ಬಾರದು.ಕೊಕಾಘ 49.4

    ಕಿಸ್ತನ ಎರಡನೇ ಬರೋಣಕ್ಕಾಗಿ ಎಚ್ಚರದಿಂದ ಕಾಯುತ್ತಿರುವವರು ಮನರಂಜನೆಗಾಗಿಯೂ, ಇಂದ್ರಿಯ ಸುಖಕ್ಕಾಗಿಯೂ ಏರ್ಪಡಿಸುವ ಸಂತೋಷ ಕೂಟಗಳಲ್ಲಿ ಭಾಗವಹಿಸಬಾರದು. ‘ಕ್ರಿಸ್ತ ನಂಬಿಕೆಯಿಲ್ಲದವರೊಂದಿಗೆ ವ್ಯಾಪಾರ ವ್ಯವಹಾರದಲ್ಲಿ ಭಾಗಿಗಳಾಗುವುದು ಅಥವಾ ಒಪ್ಪಂದ ಮಾಡಿಕೊಳ್ಳುವುದು ದೇವರ ದೃಷ್ಟಿಯಲ್ಲಿ ಸರಿಯಲ್ಲ’ (ರಿವ್ಯೂ ಅಂಡ್ ಹೆರಾಲ್ಡ್, ಆಗಸ್ಟ್ 4, 1904).ಕೊಕಾಘ 49.5

    ಇತರರೊಂದಿಗೆ ನಾವು ಒಂದು ಹಂತದವರೆಗೆ ಸಂಬಂಧವಿಟ್ಟುಕೊಂಡಿರಬೇಕು ಹಾಗೂ ನಮ್ಮ ನಂಬಿಕೆ ಸಿದ್ಧಾಂತಗಳನ್ನು ಬಿಟ್ಟುಕೊಡಬಾರದು. ಇದರರ್ಥ ನಾವು ಅವರೊಂದಿಗೆ ಉಂಡು, ಕುಡಿಯಬಹುದು ಎಂದಲ್ಲ. ಬದಲಾಗಿ ನಾವು ಎಲ್ಲಾ ವಿಧದಲ್ಲಿಯೂ ಮಿತ ಸಂಯಮಿಗಳಾಗಿದ್ದೇವೆ, ದೇಹಕ್ಕೆ ಆರೋಗ್ಯಕರವಾದದ್ದನ್ನು ಹಿತಮಿತವಾಗಿ ಉಪಯೋಗಿಸುತ್ತೇವೆ ಮತ್ತು ಹಾನಿಕರವಾದದ್ದನ್ನು ಸಂಪೂರ್ಣವಾಗಿ ತ್ಯಜಿಸುತ್ತೇವೆಂದು ಅವರಿಗೆ ಮನವರಿಕೆ ಮಾಡಿಕೊಡಬೇಕು (ಟೆಂಪರೆನ್ಸ್, ಪುಟ 220, 1884).ಕೊಕಾಘ 50.1

    Larger font
    Smaller font
    Copy
    Print
    Contents