Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಪರಲೋಕವು ಒಂದು ವಾಸ್ತವವಾದ ಹಾಗೂ ಯಥಾರ್ಥವಾದ ಸ್ಥಳ

    ಪರಲೋಕದಲ್ಲಿ ನಮಗೋಸ್ಕರ ವಾದ ಮಾಡುವ ಒಬ್ಬ ಆತ್ಮೀಯ ಸ್ನೇಹಿತನಿದ್ದಾನೆಂದು ತಿಳಿಯುವುದು ಶಿಷ್ಯರಿಗೆ ಎಂತಹ ಹರ್ಷದ ಸಂಗತಿಯಲ್ಲವೇ! ಕ್ರಿಸ್ತನು ಐನೂರಕ್ಕಿಂತಲೂ ಹೆಚ್ಚು ಜನರ ಮುಂದೆ ಎಲ್ಲರೂ ನೋಡುವಂತೆ ಶರೀರಧಾರಿಯಾಗಿ ಪರಲೋಕಕ್ಕೆ ಏರಿ ಹೋದದ್ದು ಅದರ ಬಗ್ಗೆ ಇದ್ದ ಎಲ್ಲಾ ಅಭಿಪ್ರಾಯಗಳು ಹಾಗೂ ಆಲೋಚನೆಗಳನ್ನು ಬದಲಾಯಿಸಿತು. ಪರಲೋಕವೆಂದರೆ, ಜೀವಿಗಳು ವಾಸಿಸುವ ಅಪಾರವಾದ ಶೂನ್ಯ ಪ್ರದೇಶದಿಂದ ಕೂಡಿರುವ ಸ್ಥಳವೆಂದು ಶಿಷ್ಯರು ಹಿಂದೆ ತಿಳಿದುಕೊಂಡಿದ್ದರು. ಆದರೆ ಈಗ ಎಲ್ಲದಕ್ಕಿಂತಲೂ ತಾವು ಪ್ರೀತಿಸಿ, ಗೌರವಿಸಿದ, ಪ್ರಯಾಣಿಸಿದ, ಸಂಭಾಷಿಸಿದ ಯೇಸು ಕ್ರಿಸ್ತನ ಮೂಲಕ ತಮ್ಮೊಂದಿಗೆ ಸಂಬಂಧ ಹೊಂದಿದೆಯೆಂದು ಅವರಿಗೆ ಅರಿವಾಯಿತು.ಕೊಕಾಘ 167.6

    ಅದು ಶಿಷ್ಯರಾದ ತಾವು ಯುಗಯುಗಾಂತರಗಳವರೆಗೆ ವಾಸಿಸುವ ವಾಸಸ್ಥಳವೆಂದೂ, ಅಲ್ಲಿ ತಮಗಾಗಿ ರಕ್ಷಕನೂ, ವಿಮೋಚಕನೂ ಆದ ಕ್ರಿಸ್ತನು ಭವನಗಳನ್ನು ಸಿದ್ಧಪಡಿಸುತ್ತಿದ್ದಾನೆಂದು ನಿರೀಕ್ಷೆ ಹೊಂದಿದರು. ಇದನ್ನು ಆತನು ತನ್ನ ಶಿಷ್ಯರಿಗೆ ವಾಗ್ದಾನ ಮಾಡಿದನು.ಕೊಕಾಘ 168.1

    ನೂತನ ಭೂಮಿಯು ಸೃಷ್ಟಿಸಲ್ಪಟ್ಟಿತು. ಆದಾಮ ಹವ್ವಳಿಗೆ ಏದೆನ್ ತೋಟದಲ್ಲಿ ಸಂತೋಷವುಂಟು ಮಾಡುತ್ತಿದ್ದ ಕೆಲಸದಲ್ಲಿ ವಿಮೋಚಿಸಲ್ಪಟ್ಟವರು ನಿರತರಾಗಿರುತ್ತಾರೆ. ಅವರು ಎದೆನ್ ತೋಟದ ನೂತನ ಜೀವನವನ್ನು ಜೀವಿಸುವರು (ಪೇಟ್ರಿಯಾರ್ಕ್ ಅಂಡ್ ಕಿಂಗ್ 730, 731).ಕೊಕಾಘ 168.2

    Larger font
    Smaller font
    Copy
    Print
    Contents