Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-8
    ನಗರಗಳು

    ಮೂಲನಗರ ನಿರ್ಮಾಪಕರು

    ದೇವರಿಂದ ಶಾಪ ಪಡೆದುಕೊಂಡ ಕಾಯಿನನು ತನ್ನ ತಂದೆಯ ಮನೆಬಿಟ್ಟು ಬೇರೊಂದು ದೇಶಕ್ಕೆ ಹೋದನು. ವ್ಯವಸಾಯಗಾರನಾದ ಅವನು ನಂತರ ಒಂದು ಪಟ್ಟಣವನ್ನು ಕಟ್ಟಿ ಅದಕ್ಕೆ ತನ್ನ ಹಿರಿಯ ಮಗನಾದ ಹನೋಕನೆಂದು ಹೆಸರಿಟ್ಟನು (ಆದಿಕಾಂಡ 4:17), ಅವನು ಕರ್ತನ ಸನ್ನಿಧಾನದಿಂದ ಹೊರಟು ಹೋಗಿ ಕಳೆದು ಹೋದ ಏದೆನ್ ತೋಟವನ್ನು ತಿರುಗಿ ಕೊಡುತ್ತೇನೆಂದು ಹೇಳಿದ ದೇವರ ವಾಗ್ದಾನವನ್ನು ಉಪೇಕ್ಷಿಸಿದನು. ಅಲ್ಲದೆ ಶಾಪಕ್ಕೊಳಗಾದ ಈ ಭೂಮಿಯಲ್ಲಿ ಸಂತೋಷ ಮತ್ತು ಆಸ್ತಿಪಾಸ್ತಿ ಹುಡುಕಲು ಹೊರಟನು. ಈ ವಿಧವಾಗಿ ಕಾಯಿನನು ಈ ಲೋಕದ ದೇವರಾದ ಹಣವನ್ನು ಆರಾಧಿಸುವ ಅಧಿಕ ಗುಂಪಿನ ಜನರ ನಾಯಕನಾದನು.ಕೊಕಾಘ 63.1

    ನೋಹನ ವಂಶದವರು ಕೆಲವು ಸಮಯದವರೆಗೆ ನಾವೆಯು ನಿಂತ ಆರಾರಟ್ ಪರ್ವತ ಪ್ರದೇಶದಲ್ಲಿ ವಾಸವಾಗಿದ್ದರು. ಆದರೆ ಜನಸಂಖ್ಯೆ ಹೆಚ್ಚಿದಂತೆ ಧರ್ಮಭ್ರಷ್ಟತೆ ಉಂಟಾಗಿ ಅವರಲ್ಲಿ ಒಡುಕುಂಟಾಯಿತು. ತಮ್ಮ ಸೃಷ್ಟಿಕರ್ತನನ್ನು ಮರೆಯಬೇಕೆಂದು ಬಯಸಿದವರು ಮತ್ತು ದೈವಭಕ್ತಿಯುಳ್ಳ ಜನರ ಉದಾಹರಣೆ ಮತ್ತು ಬೋಧನೆಯಿಂದ ಸತತವಾಗಿ ಕಾಟಕ್ಕೆ ಒಳಗಾದವರು ಕೆಲವು ಸಮಯದ ನಂತರ ಸತ್ಯದೇವರನ್ನು ಆರಾಧಿಸುತ್ತಿದ ಜನರಿಂದ ಬೇರೆಯಾಗಿ ದೂರ ಹೋದರು, ಅದರಂತೆ ಅವರು ಯೂಫ್ರೆಟಿಸ್ ನದಿಯ ದಂಡೆಯಲ್ಲಿರುವ ಶೀನಾರ್ ಪ್ರದೇಶಕ್ಕೆ ಪ್ರಯಾಣಿಸಿದರು. ‘ಇಲ್ಲಿ ಅವರು ಒಂದು ನಗರವನ್ನು ಕಟ್ಟಲು ನಿರ್ಧರಿಸಿದರು ಹಾಗೂ ಅದರಲ್ಲಿ ಜಗತ್ತಿನ ಅದ್ಭುತವೆನಿಸುವ ಆಕಾಶಕ್ಕೆ ಮುಟ್ಟುವಂತ ಒಂದು ಅತಿ ಎತ್ತರವಾದ ಗೋಪುರ ಕಟ್ಟಲು ಬಯಸಿದರು (ಆದಿಕಾಂಡ 11:2-4: ಪೇಟ್ರಿಯಾರ್ಕ್ ಅಂಡ್ ಪ್ರಾಫೆಟ್ಸ್, ಪುಟಗಳು 118, 119 (1890).ಕೊಕಾಘ 63.2

    ನಗರಗಳು ಅನೀತಿ, ಪಾಪ, ದುಷ್ಟತನಗಳು ಬೆಳೆಯುವ ಹದವಾದ ಸ್ಥಳವಾಗಿದೆ. ತಮ್ಮ ಮಕ್ಕಳಿಗೆ ಅನೇಕ ಅನುಕೂಲಗಳನ್ನು ಮಾಡಿಕೊಡುತ್ತೇವೆಂದು ತಿಳಿದುಕೊಂಡ ಅನೇಕ ತಂದೆತಾಯಿಯರು ನಗರಗಳಲ್ಲಿ ವಾಸಿಸುತ್ತಾರೆ. ಅಂತವರಿಗೆ ನಿರಾಶೆ ಉಂಟಾಗುವುದು ಮಾತ್ರವಲ್ಲದೆ, ಅವರು ತಮ್ಮ ಭಯಂಕರವಾದ ತಪ್ಪಿಗೆ ಪಶ್ಚಾತ್ತಾಪ ಪಡುವಷ್ಟರಲ್ಲಿ ಕಾಲ ಬಹಳವಾಗಿ ಮಿಂಚಿ ಹೋಗಿರುತ್ತದೆ. ಇಂದಿನ ನಗರಗಳು ಶೀಘ್ರವಾಗಿ ಸೊದೋಮ್, ಗೊಮೊರಾ ಪಟ್ಟಣಗಳಾಗುತ್ತಿವೆ. ಹೆಚ್ಚಿನ ವಿರಾಮವು ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತದೆ. ರೋಮಾಂಚನ ಹುಟ್ಟಿಸುವಂತ ನಾಟಕ ಮಂದಿರಗಳು, ಕುದುರೆ ಓಡುವ ಸರ್ಧೆ, ಜೂಜಾಟ, ಕುಡಿಯುವುದು ಮತ್ತು ದುಂದೌತಣದಲ್ಲಿ ಪಾಲುಗಾರರಾಗುವುದು - ಇವೆಲ್ಲವೂ ಪ್ರತಿಯೊಬ್ಬರ ವ್ಯಾಮೋಹವನ್ನು ತೀಕ್ಷ ಚಟುವಟಿಕೆ ಮಾಡುವಂತೆ ನಮ್ಮನ್ನು ಪ್ರಚೋದಿಸುತ್ತವೆ. ಯೌವನಸ್ಥರು ಇಂತಹ ಜನಪ್ರಿಯ ಪ್ರವಾಹದಲ್ಲಿ ಮುಳುಗಿ ಕೊಚ್ಚಿ ಹೋಗುತ್ತಾರೆ (ಕ್ರೈಸ್ಟ್ ಆಬ್ಜೆಕ್ಟ್ ಲೆಸನ್ಸ್, ಪುಟ 54, 1900).ಕೊಕಾಘ 63.3

    ನಗರಗಳಲ್ಲಿ ಗಲಿಬಿಲಿ, ಹಿಂಸೆ, ಅಪರಾಧಗಳು ತುಂಬಿ ತುಳುಕುತ್ತವೆ ಹಾಗೂ ಇವು ಜಗತ್ತಿನ ಇತಿಹಾಸದ ಮುಕ್ತಾಯದವರೆಗೂ ಹೆಚ್ಚಾಗುತ್ತಾ ಹೋಗುತ್ತವೆ (ಟೆಸ್ಟಿಮೊನೀಸ್, ಸಂಪುಟ 7, ಪುಟ 84 (1902). ಜಗತ್ತಿನಾದ್ಯಂತ ನಗರಗಳು ಪಾಷ, ಅನೀತಿ, ದುಷ್ಟತನ ಬೆಳೆಯುವ ಹದವಾದ ಸ್ಥಳವಾಗಿವೆ. ಎಲ್ಲೆಲ್ಲಿಯೂ ದುಷ್ಟತನ ಕಂಡುಬರುತ್ತದೆ. ಎಲ್ಲೆಲ್ಲಿಯೂ ಪ್ರಾಪಂಚಿಕ ವಿಷಯಗಳ ಬಗ್ಗೆ ಸೆಳೆಯುವ ಆಕರ್ಷಣೆ ಹೆಚ್ಚಾಗುತ್ತಿದೆ (ದಿ ಮಿನಿಸ್ಟ್ರಿ ಆಫ್ ಹೀಲಿಂಗ್, ಪುಟ 363, 1905).ಕೊಕಾಘ 63.4