Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ನೈಸರ್ಗಿಕ ಪರಿಸರದಲ್ಲಿ ಹೇರಳ ಆಶೀರ್ವಾದವಿದೆ

    ನಗರಗಳನ್ನು ಬಿಟ್ಟು ಹೋಗಿರಿ ಎಂದು ಶ್ರೀಮತಿ ವೈಟಮ್ಮನವರು ತಿರುಗಿ ಹೇಳುತ್ತಾರೆ. ಬೆಟ್ಟಗಾಡುಗಳಿರುವ ನೈಸರ್ಗಿಕ ಸ್ಥಳಗಳಿಗೆ ಹೋಗುವುದು ಜೀವನದಲ್ಲಿ ಒಂದು ದೊಡ್ಡ ನಷ್ಟವಾಯಿತೆಂದು ತಿಳಿದುಕೊಳ್ಳಬೇಡಿ, ಆದರೆ ದೇವರೊಂದಿಗೆ ಪ್ರತ್ಯೇಕವಾಗಿ ಆತನ ಚಿತ್ತ ಹಾಗೂ ಮಾರ್ಗಗಳನ್ನು ಅರಿತುಕೊಳ್ಳುವಂತ ಏಕಾಂತ ಸ್ಥಳವನ್ನು ಹುಡುಕಿರಿ, ಅಡ್ವೆಂಟಿಸ್ಟರು ಆತ್ಮಿಕತೆಯನ್ನು ಹುಡುಕುವುದು ತಮ್ಮ ಜೀವನದ ಕಾರ್ಯವಾಗಿ ಮಾಡಿಕೊಳ್ಳಬೇಕೆಂದು ಶ್ರೀಮತಿ ವೈಟಮ್ಮನವರು ಮನವಿ ಮಾಡುತ್ತಾರೆ. ಈ ಕಾರಣದಿಂದಲೇ ನೀವು ನಗರವನ್ನು ಬಿಟ್ಟು ಹಳ್ಳಿಗಾಡು ಪ್ರದೇಶಗಳಿಗೆ ಹೋಗಬೇಕೆಂಬ ಕರೆ ಬಂದಾಗ ಅದೊಂದು ದೊಡ್ಡ ನಷ್ಟವೆಂದು ಎಣಿಸಬಾರದು. ಅಲ್ಲಿ ಅವರಿಗೆ ಹೇರಳವಾದ ಆಶೀರ್ವಾದ ಕಾದುಕೊಂಡಿರುತ್ತದೆ. ಸೃಷ್ಟಿಕರ್ತನ ಕೈಕೆಲಸವಾದ ನಿಸರ್ಗದ ದೃಶ್ಯಗಳನ್ನು ನೋಡುವಾಗ, ಅದನ್ನು ಅಧ್ಯಯನ ಮಾಡಿದಾಗ, ನಿಮಗೆ ಅರಿವಾಗದಂತೆಯೇ ನೀವು ಅದರ ಪ್ರತಿರೂಪದಂತೆಯೇ ಬದಲಾಗುವಿರಿ’ ಎಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ (ಸೆಲೆಕ್ಟಡ್ ಮೆಸೇಜಸ್, ಸಂಪುಟ 2, ಪುಟಗಳು 355, 356, 1908) ಕೊಕಾಘ 58.1