Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕ್ರಿಸ್ತನ ಬರೋಣದ ಸಮಯವು ಯಾರಿಗೂ ತಿಳಿದಿಲ್ಲ

    ಅಡ್ವೆಂಟಿಸ್ಟರೆಂದು ಹೇಳಿಕೊಳ್ಳುವ ಅನೇಕರು ಕ್ರಿಸ್ತನ ಬರೋಣದ ಸಮಯವನ್ನು ನಿಗದಿ ಮಾಡುವವರಾಗಿದ್ದಾರೆ. ಇದರ ಪರಿಣಾಮವಾಗಿ ಅನೇಕ ಸಾರಿ ಅವರು ವಿಫಲರಾಗಿದ್ದಾರೆ. ಕ್ರಿಸ್ತನ ಬರೋಣದ ಖಚಿತವಾದ ಸಮಯವು ಮಾನವರಾದ ನಮ್ಮ ಊಹೆಗೆ ಮೀರಿದೆ. ರಕ್ಷಣೆಗೆ ಬಾಧ್ಯಸ್ಥರಾಗಿರುವ ಮನುಷ್ಯರ ಸೇವೆ ಮಾಡುತ್ತಿರುವ ದೇವದೂತರಿಗೂ ಸಹ ಆ ದಿನವಾಗಲಿ, ಗಳಿಗೆಯಾಗಲಿ ತಿಳಿದಿಲ್ಲ. “ಇದಲ್ಲದೆ ಆ ದಿನದ ವಿಷಯವೂ, ಆ ಗಳಿಗೆಯ ವಿಷಯವೂ ನನ್ನ ತಂದೆಯೊಬ್ಬನಿಗೆ ತಿಳಿಯುವುದೇ ಹೊರತು, ಮತ್ತಾರಿಗೂ ತಿಳಿಯದು, ಪರಲೋಕದಲ್ಲಿರುವ ದೂತರಿಗೂ ತಿಳಿಯದು....’ ಎಂದು ಕ್ರಿಸ್ತನು ಹೇಳಿದ್ದಾನೆ (ಮತ್ತಾಯ 24:36).ಕೊಕಾಘ 18.3

    ಪವಿತ್ರಾತ್ಮನ ಶಕ್ತಿಯ ಸುರಿಸುವಿಕೆಯ ಅಥವಾ ಕ್ರಿಸ್ತನ ಬರೋಣದ ಖಚಿತವಾದ ಸಮಯವು ನಮಗೆ ತಿಳಿಯಬಾರದು. ಈ ಜ್ಞಾನವನ್ನು ಯಾಕೆ ದೇವರು ನಮಗೆ ಕೊಡಲಿಲ್ಲ? ಯಾಕೆಂದರೆ ಈ ತಿಳುವಳಿಕೆಯು ನಮಗೆ ಕೊಡಲ್ಪಟ್ಟಿದ್ದರೆ, ನಾವು ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿರಲಿಲ್ಲ. ಅಲ್ಲದೆ ಜನರನ್ನು ಮುಂದೆ ಬರಲಿರುವ ದೇವರ ಮಹಾದಿನಕ್ಕಾಗಿ ಸಿದ್ದಮಾಡುವ ದೇವರ ಕಾರ್ಯಕ್ಕೂ ಒಂದು ದೊಡ್ಡ ಅಡ್ಡಿಯುಂಟಾಗುತ್ತಿತ್ತು. ಉದ್ವೇಗಗೊಳಿಸುವಂತ ಸಮಯದ ನಿರೀಕ್ಷೆಯಲ್ಲಿ ನಾವು ಜೀವಿಸಬಾರದು.ಕೊಕಾಘ 18.4

    ಇನ್ನು ಒಂದು, ಎರಡು, ಐದು ವರ್ಷಗಳ ನಂತರ ಏನಾಗುತ್ತದೆಂದು ನಮಗೆ ಹೇಳಲು ಸಾಧ್ಯವಿಲ್ಲ. ಅಥವಾ ಇನ್ನು ಹತ್ತು ಅಥವಾ ಇಪ್ಪತ್ತು ವರ್ಷಗಳವರೆಗೆ ಕ್ರಿಸ್ತನು ಬರುವುದಿಲ್ಲವೆಂದೂ ಸಹ ಹೇಳಬಾರದು (ರಿವ್ಯೂ ಅಂಡ್ ಹೆರಾಲ್ಡ್, ಮಾರ್ಚ್ 22, 1892). ನಾವು ದೇವರ ಮಹಾದಿನವನ್ನು ಸಮೀಪಿಸುತ್ತಿದ್ದೇವೆ, ಸೂಚನೆಗಳು ನೆರವೇರುತ್ತಿವೆ. ಆದರೂ ಕ್ರಿಸ್ತನ ಬರೋಣದ ದಿನ ಅಥವಾ ಗಳಿಗೆಯ ಬಗ್ಗೆ ನಮಗೆ ತಿಳಿಸುವ ಯಾವುದೇ ಸಂದೇಶವು ಕೊಡಲ್ಪಟ್ಟಿಲ್ಲ. ಆದರೆ ನಾವು ಆತನ ಎರಡನೇ ಬರೋಣಕ್ಕೆ ಯಾವಾಗಲೂ ನಿರೀಕ್ಷೆ ಹೊಂದಿದವರಾಗಿ ಸಿದ್ದರಾಗಿರಬೇಕೆಂದು ದೇವರು ತನ್ನ ಜ್ಞಾನದಿಂದ ಇದನ್ನು ಮರೆಮಾಡಿದ್ದಾನೆ (1897). ಮನುಷ್ಯಕುಮಾರನ ಎರಡನೇ ಬರೋಣದ ಖಚಿತವಾದ ಸಮಯವು ದೇವರ ರಹಸ್ಯವಾಗಿದೆ (ದಿ ಡಿಸೈರ್ ಆಫ್ ಏಜಸ್, ಪುಟ 633 (1898). ಕೊಕಾಘ 19.1

    ಅನೇಕರು ಕ್ರಿಸ್ತನ ಬರೋಣದ ಸಮಯವನ್ನು ನಿಗದಿಪಡಿಸಿದ್ದಾರೆ. ಆದರೆ ಆ ದಿನದಲ್ಲಿ ಈ ಘಟನೆಯು ಸಂಭವಿಸದಿದ್ದಾಗ, ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಬದಲಾಗಿ ಮತ್ತೆ ಮತ್ತೆ ದಿನವನ್ನು ನಿಗದಿಪಡಿಸುತ್ತಾರೆ. ಆದರೆ ಒಂದಾದ ಮೇಲೊಂದರಂತೆ ಅವರ ಮಾತುಗಳು ವಿಫಲವಾದಾಗ, ಅವರು ಸುಳ್ಳು ಪ್ರವಾದಿಗಳೆಂದು ಕಾಣಿಸಿಕೊಳ್ಳುತ್ತಾರೆ. ಜಗತ್ತಿನ ಇತಿಹಾಸವು ಮುಕ್ತಾಯಗೊಳ್ಳುವುದಕ್ಕೆ ಇನ್ನು ಐದು, ಹತ್ತು, ಇಪ್ಪತ್ತು ವರ್ಷಗಳಿವೆ ಎಂಬ ಸಂದೇಶವನ್ನು ದೇವರು ಯಾರಿಗೂ ಕೊಟ್ಟಿಲ್ಲ. ತನ್ನ ಬರೋಣಕ್ಕೆ ಸಿದ್ಧತೆ ಮಾಡಿಕೊಳ್ಳಲು ತಡಮಾಡುವಂತೆ ಯಾವ ಓಂದು ನೆಪವನ್ನೂ ದೇವರು ಯಾವ ಮನುಷ್ಯರಿಗೂ ಕೊಡುವುದಿಲ್ಲ. ‘ನನ್ನ ಯಜಮಾನನು ಬರುವುದಕ್ಕೆ ತಡಮಾಡುತ್ತಾನೆ ಎಂದು ಅಪ್ರಮಾಣಿಕನಾದ ಸೇವಕನು ಹೇಳಿದಂತ ಮಾತನ್ನು ಬೇರೆ ಯಾರಿಗೂ ಹೇಳುವುದಕ್ಕೆ ದೇವರು ಆಸ್ಪದ ಕೊಡುವುದಿಲ್ಲ. ಇದರಿಂದ ಆ ಮಹಾದಿನಕ್ಕೆ ನಾವು ಸಿದ್ಧರಾಗಲು ಕೊಡಲ್ಪಟ್ಟಿರುವ ಅವಕಾಶಗಳನ್ನು ನಿರ್ಲಕ್ಷಿಸುವುದಕ್ಕೆ ಇದು ಕಾರಣವಾಗುತ್ತದೆ (ರಿವ್ಯೂ ಅಂಡ್ ಹೆರಾಲ್ಡ್ ನವೆಂಬರ್ 27, 1908).ಕೊಕಾಘ 19.2