Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸೈತಾನನು ಪ್ರತಿಯೊಂದು ವಿಧದಲ್ಲಿಯೂ ಕ್ರಿಸ್ತನನ್ನು ಹೋಲುತ್ತಾನೆ

    ಸೈತಾನನ ಶಕ್ತಿಗೆ ಒಂದು ಇತಿಮಿತಿಯಿದೆ. ಅದನ್ನು ಮೀರಲು ಅವನಿಂದ ಸಾಧ್ಯವಿಲ್ಲ. ಅವನು ನಿಜವಾಗಿಯೂ ಮಾಡಲು ಶಕ್ತಿಯಿಲ್ಲದ ಕಾರ್ಯವನ್ನು ಮೋಸದಿಂದ ನಕಲು ಮಾಡುವನು. ಅವನು ಕೊನೆಯ ಕಾಲದಲ್ಲಿ ಯಾವ ರೀತಿ ಕಾಣಿಸಿಕೊಳ್ಳುತ್ತಾನೆಂದರೆ, ಕ್ರಿಸ್ತನು ಎರಡನೇ ಸಾರಿ ಈ ಲೋಕಕ್ಕೆ ಬಂದಿದ್ದಾನೆಂದು ಜನರು ನಂಬುವಂತೆ ಮಾಡುತ್ತಾನೆ. ಅವನು ನಿಜವಾಗಿಯೂ ಪ್ರಕಾಶಮಾನವಾದ ದೂತನಂತೆ ಬದಲಾಗುತ್ತಾನೆ (2 ಕೊರಿಂಥ 11:14), ಸೈತಾನನು ಅತಿ ನಾಜೂಕಿನಿಂದ ಎಲ್ಲಾ ವಿಧದಲ್ಲಿಯೂ ಕ್ರಿಸ್ತನನ್ನು ಹೋಲುವಂತಿದ್ದರೂ, ಅದರಿಂದ ಎಲ್ಲರೂ ಮೋಸಹೋಗುವುದಿಲ್ಲ. ಫರೋಹನಂತೆ ಯಾರು ಸತ್ಯವನ್ನು ವಿರೋಧಿಸುತ್ತಾರೋ, ಅಂತವರು ಮಾತ್ರ ಅವನ ಕುತಂತ್ರಕ್ಕೆ ಮರುಳಾಗುತ್ತಾರೆ (ಟೆಸ್ಟಿಮೋನಿಸ್, ಸಂಪುಟ 5, ಪುಟ 698, 1889).ಕೊಕಾಘ 93.5

    ಸೈತಾನನ ಈ ಮಹಾವಂಚನೆಯ ನಾಟಕದ ಅತಿ ಪ್ರಾಮುಖ್ಯವಾದ ಕಾರ್ಯವೆಂದರೆ, ಅವನು ಸ್ವತಃ ಕ್ರಿಸ್ತನನ್ನು ಅನುಕರಿಸಿ ಆತನಂತೆಯೇ ಕಾಣಿಸಿಕೊಳ್ಳುತ್ತಾನೆ ಸಭೆಯು ಬಹಳ ದೀರ್ಘಕಾಲದಿಂದ ರಕ್ಷಕನ ಬರೋಣವು ತನ್ನ ನಿರೀಕ್ಷೆಯ ಪರಿಪೂರ್ಣತೆ ಎಂದು ಎದುರು ನೋಡುತ್ತಿದೆ. ಈಗ ಮಹಾಮೋಸಗಾರನಾದ ಸೈತಾನನು ಕ್ರಿಸ್ತನು ಬಂದಂತೆ ಕಾಣಿಸಿಕೊಳ್ಳುವನು. ಲೋಕದ ವಿವಿಧ ಭಾಗಗಳಲ್ಲಿ ಅವನು ಪ್ರಕಟನೆ ಗ್ರಂಥದಲ್ಲಿ ಯೋಹಾನನು ದೇವಕುಮಾರನಾದ ಕ್ರಿಸ್ತನನ್ನು ವರ್ಣಿಸಿದಂತೆಯೇ ಕಣ್ಣು ಕೋರೈಸುವ ಪಕಾಶದಿಂದ ಬಹುಗಾಂಭೀರ್ಯವಾಗಿ ಜನರ ಮುಂದೆ ಕಾಣಿಸಿಕೊಳ್ಳುವನು (ಪ್ರಕಟನೆ 1:13-15). ಅವನ ಸುತ್ತಲೂ ಆವರಿಸಿಕೊಂಡಿರುವ ಮಹಿಮೆಯ ವೈಭವವು ಮನುಷ್ಯರ ಕಣ್ಣುಗಳು ಇದುವರೆಗೂ ಕಂಡಿಲ್ಲದ ರೀತಿಯಲ್ಲಿ ಅತಿಶಯವಾಗಿರುತ್ತದೆ. ಎಲ್ಲೆಲ್ಲಿಯೂ ಕ್ರಿಸ್ತನು ಬಂದನು! ಕ್ರಿಸ್ತನು ಬಂದನು! ಎಂಬ ಜಯಘೋಷವು ಮೊಳಗುತ್ತದೆ.ಕೊಕಾಘ 94.1

    ಕ್ರಿಸ್ತನು ಈ ಲೋಕದಲ್ಲಿರುವಾಗ ತನ್ನ ಶಿಷ್ಯರನ್ನು ಆಶೀರ್ವದಿಸಿದಂತೆಯೇ, ಸೈತಾನನು ತನ್ನ ಕೈಗಳನ್ನು ಮೇಲೆತ್ತಿ ಜನರನ್ನು ಆಶೀರ್ವದಿಸುವಾಗ, ಅವರೆಲ್ಲರೂ ಅವನ ಮುಂದೆ ಭಯಭಕ್ತಿಯಿಂದ ಅಡ್ಡಬೀಳುವರು. ಸೈತಾನನ ಸ್ವರವು ಬಹಳ ಮೃದುವಾಗಿಯೂ ಹಾಗೂ ಇಂಪಾಗಿಯೂ ಇರುವುದು. ಅವನು ಸೌಮ್ಯವಾದ ಅನುಕಂಪದ ಧ್ವನಿಯಲ್ಲಿ ರಕ್ಷಕನಾದ ಕ್ರಿಸ್ತನು ಈ ಲೋಕದಲ್ಲಿರುವಾಗ ಹೇಳಿದ ಪರಲೋಕದ ಕೆಲವು ಸತ್ಯಗಳನ್ನು ತಿಳಿಸುವನು. ಜನರ ರೋಗಗಳನ್ನು ವಾಸಿ ಮಾಡುವನು. ಆನಂತರ ಕ್ರಿಸ್ತನಂತೆ ವೈಶಿಷ್ಟತೆಯಿಂದ ತಾನು ಸಬ್ಬತ್ ದಿನವನ್ನು ಭಾನುವಾರಕ್ಕೆ ಬದಲಾಯಿಸಿರುವುದಾಗಿಯೂ ಹಾಗೂ ತಾನು ಆಶೀರ್ವದಿಸಿದ ಆ ದಿನವನ್ನು ಎಲ್ಲರೂ ಪರಿಶುದ್ಧವಾಗಿ ಕಾಣಬೇಕೆಂದು ಆಜ್ಞೆ ಮಾಡುವನು (ಗ್ರೇಟ್ ಕಾಂಟ್ರೊವರ್ಸಿ, ಪುಟ 624, 1911).ಕೊಕಾಘ 94.2