Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಕ್ರಿಸ್ತನಲ್ಲಿ ದೃಢವಾಗಿ ನೆಲೆಗೊಂಡಿರುವುದು

    ಶೀಘ್ರದಲ್ಲಿಯೇ ಮಹಾಸಂಕಟವೆಂಬ ಬಿರುಗಾಳಿಯು ಬರಲಿದೆ. ಈ ಸಂಕಟವು ಪ್ರತಿಯೊಬ್ಬನ ನಂಬಿಕೆಯು ಎಂತದ್ದೆಂದು ಪರೀಕ್ಷಿಸುತ್ತದೆ. ವಿಶ್ವಾಸಿಗಳು ಈಗ ಕ್ರಿಸ್ತನಲ್ಲಿ ಬಲವಾಗಿ ನೆಲೆಗೊಂಡಿರಬೇಕು. ಇಲ್ಲದಿದ್ದಲ್ಲಿ, ಅವರು ತಪ್ಪಾದ ಬೋಧನೆಗೆ ಒಳಗಾಗಿ ದೇವರಿಂದ ದೂರಹೋಗುತ್ತಾರೆ (ಎವಾಂಜಲಿಸಮ್, ಪುಟಗಳು 361, 362, 1905), ಕ್ರಿಸ್ತನ ಜೀವನವನ್ನು ಪ್ರತಿದಿನವೂ ಒಂದು ಗಂಟೆ ಸಮಯ ವಿವೇಚನಾ ಪೂರ್ವಕವಾಗಿ ಧ್ಯಾನ ಮಾಡುವುದು ನಮಗೆ ಒಳ್ಳೆಯದಾಗಿದೆ. ಆತನ ಜೀವನದ ಒಂದೊಂದು ಸನ್ನಿವೇಶಗಳು ಅದರಲ್ಲಿಯೂ ವಿಶೇಷವಾಗಿ ಕ್ರಿಸ್ತನ ಜೀವಿತದ ಕೊನೆಯ ದೃಶ್ಯಗಳನ್ನು ಗ್ರಹಿಸಿಕೊಳ್ಳಬೇಕು (ದಿ ಡಿಸೈರ್ ಆಫ್ ಏಜಸ್, ಪುಟ 83, 1898).ಕೊಕಾಘ 37.4

    ನಂಬಿಕೆ ಮತ್ತು ಕ್ರಿಸ್ತನ ನೀತಿಯು ನಮ್ಮ ಹೃದಯದಲ್ಲಿ ನೆಲೆಗೊಂಡಿದ್ದಲ್ಲಿ ಮಾತ್ರ, ದುಷ್ಟತನಕ್ಕೆ ವಿರುದ್ಧವಾಗಿ ಅದು ನಮಗೆ ಏಕೈಕ ರಕ್ಷಣೆಯಾಗಿದೆ. ನಾವು ದೇವರೊಂದಿಗೆ ಅತಿಮುಖ್ಯವಾಗಿ ನೆಲೆಗೊಂಡಿರದಿದ್ದಲ್ಲಿ, ನಾವು ಎಂದಿಗೂ ಸಹ ಪಾಪಕ್ಕೆ ಕಾರಣವಾಗುವ ಸ್ವಾರ್ಥತೆ, ಲೌಕಿಕವಾದ ಭೋಗಾಸಕ್ತಿ ಹಾಗೂ ಶೋಧನೆಗಳನ್ನು ಎದುರಿಸಲು ಸಾಧ್ಯವಾಗದು. ನಮ್ಮ ಕೆಲವು ದುರಾಭ್ಯಾಸಗಳನ್ನು ಬಿಡಬಹುದು. ಕೆಲವು ಸಮಯ ಸೈತಾನನಿಂದ ದೂರವಿರಬಹುದು. ಆದರೆ ಕ್ಷಣಕ್ಷಣವೂ ಕ್ರಿಸ್ತನೊಂದಿಗೆ ದೃಢವಾಗಿ ನೆಲೆಗೊಂಡಿರದಿದ್ದಲ್ಲಿ ನಾವು ಪಾಪದ ಮೇಲೆ ಜಯ ಹೊಂದಲಾರವು. ಕ್ರಿಸ್ತನೊಂದಿಗೆ ವೈಯಕ್ತಿಕ ಸಂಬಂಧ ಹಾಗೂ ನಿರಂತರವಾಗಿ ಸಂಪರ್ಕ ಇಲ್ಲದಿದಲ್ಲಿ, ನಾವು ವಿರೋಧಿಯಾದ ಸೈತಾನನ ಅಧೀನದಲ್ಲಿದ್ದು, ಅಂತ್ಯದಲ್ಲಿ ಅವನು ಹೇಳಿದ್ದನ್ನೇ ಮಾಡುವೆವು (ದಿ ಡಿಸೈರ್ ಆಫ್ ಏಜಸ್, ಪುಟ 324, 1898).ಕೊಕಾಘ 38.1

    ಕ್ರಿಸ್ತನು ಹಾಗೂ ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನು ನಮ್ಮೆಲ್ಲಾ ಧ್ಯಾನ, ಸಂಭಾಷಣೆಯ ಮುಖ್ಯ ಸಾರಾಂಶವೂ ಹಾಗೂ ನಮ್ಮ ಅತ್ಯಂತ ಹರ್ಷದಾಯಕ ಭಾವೋದ್ವೇಗವಾಗಿರಬೇಕು (ಸ್ಟೆಪ್ಸ್ ಟು ಕ್ರೈಸ್ಟ್, ಪುಟಗಳು 103, 104, 1892).ಕೊಕಾಘ 38.2

    Larger font
    Smaller font
    Copy
    Print
    Contents