Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ವೇಷಭೂಷಣೆ ಹಾಗೂ ಆಭರಣ ಅಲಂಕಾರ

    ವೇಷಭೂಷಣ ಹೇಗಿರಬೇಕೆಂಬ ಪ್ರಶ್ನೆಯು ಕ್ರೈಸ್ತಧರ್ಮದಲ್ಲಿ ಮುಖ್ಯವಾಗುವ ಅಗತ್ಯವಿಲ್ಲ. ಇದಕ್ಕಿಂತಲೂ ಪ್ರಮುಖವಾದ ಬೇರೆ ವಿಷಯಗಳಿವೆ. ಕ್ರಿಸ್ತನ ಬಗ್ಗೆ ಮಾತನಾಡಿ ಹೃದಯದಲ್ಲಿ ಬದಲಾವಣೆ ಕಂಡುಬಂದಾಗ, ದೇವರ ವಾಕ್ಯಕ್ಕೆ ವಿರುದ್ದವಾಗಿರುವ ಪ್ರತಿಯೊಂದೂ ಭಾವನೆಯೂ ಹೊರಟು ಹೋಗುತ್ತದೆ (ಎವಾಂಜಲಿಸಮ್, ಪುಟ 272, 1889).ಕೊಕಾಘ 51.4

    ನಾವು ಕ್ರೈಸ್ತರಾಗಿದ್ದಲ್ಲಿ ನಾವು ಕ್ರಿಸ್ತನನ್ನು ಹಿಂಬಾಲಿಸುತ್ತೇವೆ. ಇದನ್ನು ಹಾಕಿಕೊಳ್ಳಬೇಕು, ಇಂತದನ್ನು ಧರಿಸಬೇಕೆಂದು ಹೇಳುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಯಾಕೆಂದರೆ ಇಂತಹ ವಸ್ತುಗಳ ಮೋಹ ನಿಮ್ಮ ಮನಸ್ಸಿನಲ್ಲಿದ್ದಲ್ಲಿ, ನಿಮ್ಮ ಆಭರಣಗಳನ್ನು ಕಳಚುವುದು ಒಂದು ಮರದ ಎಲೆಗಳ ಗೊಂಚಲನ್ನು ಕತ್ತರಿಸಿದಂತಾಗುತ್ತದೆ. ಹೃದಯದ ಸಹಜವಾದ ಪ್ರೀತಿಯು ತಿರುಗಿ ಅವುಗಳನ್ನು ಧರಿಸುವಂತೆ ಒತ್ತಡ ಹೇರುತ್ತದೆ. ನಿಮ್ಮದೇ ಆದ ಮನಸ್ಸಾಕ್ಷಿಯು ನಿಮಗಿರಲಿ (ಚೈಲ್ಡ್ ಗೈಡೆನ್ಸ್, ಪುಟಗಳು 429, 430, 1892).ಕೊಕಾಘ 51.5

    ಅಡ್ವೆಂಟಿಸ್ಟರು ದೇವರ ಮುಂದೆ ಎಚ್ಚರಿಕೆಯಿಂದಲೂ ಹಾಗೂ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲನೆ ಮಾಡಬೇಕೆಂದು ಶ್ರೀಮತಿ ವೈಟಮ್ಮನವರು ಕೇಳಿಕೊಂಡಿದ್ದಾರೆ. ಆರೋಗ್ಯದ ಸಿದ್ದಾಂತಗಳಿಗೆ ಹೊಂದಿಕೊಳ್ಳುವಂತ ಉಡುಪು ಧರಿಸಬೇಕು. ಅಲ್ಲದೆ ಅಡ್ವೆಂಟಿಸ್ಟ್ ಮಹಿಳೆಯರು ಒಳ್ಳೆಯ ಹಾಗೂ ಹೆಚ್ಚು ಬಾಳಕೆ ಬರುವಂತ ಸರಳವಾದ ಮತ್ತು ಆಡಂಬರವಿಲ್ಲದ ಬಟ್ಟೆಗಳನ್ನು ವಯಸ್ಸಿಗೆ ತಕ್ಕಂತೆ ಹಾಕಬೇಕು. ಆದರೆ ಯಾವುದನ್ನು ಹಾಕಿಕೊಳ್ಳಬೇಕೆಂಬ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ತುಂಬಿಕೊಂಡಿರಬಾರದು. ನಮ್ಮ ಮಹಿಳೆಯರು ಗೌರವ ತರುವಂತ ಬಟ್ಟೆಗಳನ್ನು ಹಾಕಬೇಕು ಹಾಗೂ ಸಂಕೋಚ ಮತ್ತು ಸಂಯಮದ ಸ್ವಭಾವ ಹೊಂದಿರಬೇಕು. ದೇವರ ಕೃಪೆಯೆಂಬ ಒಳಗಿನ ಭೂಷಣದ ಮಾದರಿಯನ್ನು ಲೋಕಕ್ಕೆ ಕ್ರೈಸ್ತರಾದ ಮಹಿಳೆಯರು ತೋರಿಸಬೇಕು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 3, ಪುಟ 242, 1897). ಹೊರಗಣ ವೇಷವು ಹೃದಯದ ಕನ್ನಡಿಯಾಗಿದೆ (ಟೆಸ್ಟಿಮೊನೀಸ್‌ ಸಂಪುಟ 1, ಪುಟ 136, 1856)ಕೊಕಾಘ 52.1

    Larger font
    Smaller font
    Copy
    Print
    Contents