Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಉದ್ದೇಶವು ಕ್ರಿಯೆಗಳಿಗೆ ನೈತಿಕ ಬಲ ನೀಡುತ್ತದೆ

    ನ್ಯಾಯವಿಚಾರಣೆಯ ದಿನದಲ್ಲಿ ಕೆಲವರು ತಮ್ಮ ಒಳ್ಳೆಯ ಕ್ರಿಯೆಗಳನ್ನು ಸಮರ್ಥಿಸುತ್ತಾ. ಈ ಕಾರಣದಿಂದ ತಮ್ಮ ಬಗ್ಗೆ ಪರಿಶೀಲನೆ ಮಾಡಬೇಕೆಂದು ವಾದಿಸುತ್ತಾರೆ. ‘ನಾನು ಯೌವನಸ್ಥರು ವ್ಯಾಪಾರ ಮಾಡಲು ಸಹಾಯ ಮಾಡಿದೆ, ಆಸ್ಪತ್ರೆ ಕಟ್ಟಿಸಲು ಹಣ ನೀಡಿದೆ, ವಿಧವೆಯರಿಗೆ ಸಹಾಯ ಮಾಡಿ, ಬಡವರನ್ನು ನನ್ನ ಮನೆಯಲ್ಲಿ ಸತ್ಕರಿಸಿದೆ’ ಎಂದು ಹೇಳುವರು. ಹೌದು, ಆದರೆ ಅವರ ಉದ್ದೇಶವು ಸ್ವಾರ್ಥದಿಂದ ಎಷ್ಟೊಂದು ಮಲಿನವಾಗಿತ್ತೆಂದರೆ, ಅವರ ಒಳ್ಳೆಯ ಕ್ರಿಯೆಗಳು ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾಗುವುದಿಲ್ಲ. ಅವರು ಮಾಡಿದ ಎಲ್ಲಾ ಕಾರ್ಯಗಳಲ್ಲಿಯೂ, ಸ್ವಾರ್ಥವೇ ಎದ್ದುತೋರುತ್ತಿತ್ತು (ಮ್ಯಾನುಸ್ಕ್ರಿಪ್ಟ್ 53, 1906).ಕೊಕಾಘ 127.5

    ಉದ್ದೇಶವು ತಾನೇ ನಮ್ಮ ಒಳ್ಳೇ ಕ್ರಿಯೆಗಳಿಗೆ ನೈತಿಕ ಬಲ ನೀಡುತ್ತದೆ. ಅವು ಉನ್ನತವಾದ ನೈತಿಕ ಮೌಲ್ಯ ಹೊಂದಿದೆಯೋ ಇಲ್ಲವೇ ಕೆಟ್ಟ ಹೆಸರು ಪಡೆದಿದೆಯೋ ಎಂಬುದನ್ನು ನಿರ್ಧರಿಸುತ್ತವೆ (ಡಿಸೈರ್ ಆಫ್ ಏಜಸ್ 615, 1898).ಕೊಕಾಘ 127.6