Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ನ್ಯೂಯಾರ್ಕ್ ನಗರ

    ದೇವರು ಎಂದೂ ಸಹ ಕರುಣೆಯಿಲ್ಲದೆ ತನ್ನ ಕೋಪವನ್ನು ಪ್ರಕಟಿಸಿಲ್ಲ. ಆತನು ತನ್ನ ಕೃಪಾಹಸ್ತವನ್ನು ಈಗಲೂ ಸಹ ಚಾಚಿ ನಮ್ಮನ್ನು ಕರೆಯುತ್ತಾನೆ. ನ್ಯೂಯಾರ್ಕ್ ನಗರಕ್ಕೆ ಆತನ ಸುವಾರ್ತೆ ಸಾರಬೇಕು. ಜನರು ಕೊನೆಯ ಕಾಲಕ್ಕೆ ವಿರುದ್ಧವಾಗಿ ಕೂಡಿಸಿಟ್ಟಿರುವ ಹಣ, ಚಿನ್ನ, ಬೆಳ್ಳಿ, ಆಸ್ತಿಪಾಸ್ತಿಯು ಕ್ಷಣಮಾತ್ರದಲ್ಲಿ ಹೇಗೆ ದೇವರಿಂದ ನಾಶವಾಗುವುದೆಂದು ಅವರಿಗೆ ತಿಳಿಸಿ ಹೇಳಬೇಕು.ಕೊಕಾಘ 65.2

    ನ್ಯೂಯಾರ್ಕ್ ನಗರಕ್ಕೆ ಏನು ಬರುತ್ತದೆಂಬ ಬಗ್ಗೆ ಶ್ರೀಮತಿ ವೈಟಮ್ಮನವರಿಗೆ ನಿರ್ದಿಷ್ಟವಾಗಿ ಏನೂ ತಿಳಿಸಲ್ಪಟ್ಟಿಲ್ಲ. ಆದರೆ ಒಂದು ದಿನ ದೇವರ ಮಹಾಶಕ್ತಿಯಿಂದ ಅಲ್ಲಿನ ದೊಡ್ಡ ಕಟ್ಟಡಗಳು ನಾಶವಾಗುತ್ತವೆ. ಎಲ್ಲೆಲ್ಲೂ ಮರಣ ಸಂಭವಿಸುವುದು. ಈ ಕಾರಣದಿಂದಲೇ ದೊಡ್ಡ ನಗರಗಳಿಗೆ ಸುವಾರ್ತೆಯ ಮೂಲಕ ಮುಂದೆ ಬರಲಿರುವ ವಿಪತ್ತಿನ ಬಗ್ಗೆ ಎಚ್ಚರಿಕೆ ನೀಡಬೇಕೆಂದು ಶ್ರೀಮತಿ ವೈಟಮ್ಮನವರು ತಿಳಿಸುತ್ತಾರೆ (ರಿವ್ಯೂ ಅಂಡ್ ಹೆರಾಲ್ಡ್, ಜುಲೈ 5, 1906).ಕೊಕಾಘ 65.3

    ಒಂದು ಸಾರಿ ಶ್ರೀಮತಿ ವೈಟಮ್ಮನವರಿಗೆ ರಾತ್ರಿಯಲ್ಲಿ ನ್ಯೂಯಾರ್ಕ್ ನಗರದ ಗಗನ ಚುಂಬಿ ಕಟ್ಟಡಗಳನ್ನು ದರ್ಶನದಲ್ಲಿ ದೇವರು ತೋರಿಸಿದನು. ಅವು ಬೆಂಕಿ ನಿರೋಧಕ ಅಂದರೆ ಬೆಂಕಿಯಿಂದ ನಾಶವಾಗದಂತ ಕಟ್ಟಡಗಳಾಗಿದ್ದು, ಮಾಲಿಕರಿಗೆ ಹೆಮ್ಮೆ ತರುವುದಕ್ಕಾಗಿ ಕಟ್ಟಲಟ್ಟಿದ್ದವು. ಅನಂತರ ಶ್ರೀಮತಿ ವೈಟಮ್ಮನವರಿಗೆ ದರ್ಶನದಲ್ಲಿ ಕಂಡುಬಂದ ದೃಶ್ಯವು ಬೆಂಕಿಯ ಮುನ್ಸೂಚನೆಯಾಗಿತ್ತು. ಈ ಕಟ್ಟಡಗಳು ಬಹಳ ಸುರಕ್ಷಿತವಾಗಿವೆ ಎಂದು ಜನರು ಹೇಳುತ್ತಿದ್ದರು. ಆದರೆ ಅವು ಮೇಣದಿಂದ ಮಾಡಿದ ಕಟ್ಟಡಗಳಂತೆ ಬೆಂಕಿಯಿಂದ ಉರಿದು ಬೂದಿಯಾದವು. ಅಗ್ನಿಶಾಮಕ ದಳವು ಅದನ್ನು ತಡೆಯಲು ಸಾಧ್ಯವಾಗಲಿಲ್ಲ ಹಾಗೂ ಅದರ ಸಿಬ್ಬಂದಿ ಅಗ್ನಿಶಾಮಕ ಯಂತ್ರಗಳನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ (ಟೆಸ್ಟಿಮೊನಿಸ್ ಸಂಪುಟ 9, ಪುಟಗಳು 12, 13, 1909).ಕೊಕಾಘ 65.4