Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಜವಾಬ್ದಾರಿಯನ್ನು ಹಂಚಿಕೊಳ್ಳಲು ಒತ್ತಾಯ

    ನಮ್ಮ ಸಭೆಯಲ್ಲಿ ಈಗ ಪುನಸ್ಸಂಘಟನೆಯ (Reorganisation) ಅಗತ್ಯವಿದೆ. ಅಸ್ತಿವಾರದಲ್ಲಿ ಈ ಪುನಸ್ಸಂಘಟನೆಯನ್ನು ಆರಂಭಿಸಿ ವಿವಿಧ ಸಿದ್ದಾಂತಗಳ ಮೇಲೆ ಅದನ್ನು ಕಟ್ಟಬೇಕಾಗಿದೆ. ವಿವಿಧ ರಾಜ್ಯಗಳಲ್ಲಿ ವಿವಿಧ ಪ್ರಾಂತ್ಯಗಳಲ್ಲಿ ಶಾಲಾಕಾಲೇಜುಗಳು ಮತ್ತು ಸೆಕ್ಷನ್ ಅಧಿಕಾರಿಗಳಿದ್ದಾರೆ. ಇವರೆಲ್ಲರೂ ದೇವರ ಸೇವೆಯು ಯಾವ ರೀತಿಯಲ್ಲಿ ಮುಂದುವರಿಯಬೇಕೆಂಬ ಯೋಜನೆಯನ್ನು ಹಾಕಿ ಅದನ್ನು ಜಾರಿಗೊಳಿಸುವ ಪ್ರತಿನಿಧಿಗಳಾಗಿದ್ದಾರೆ. ಮಾಡಬೇಕಾದ ಸೇವೆಯು ಬಹಳವಾಗಿದೆ, ಮಾಡಬೇಕಾದ ಕಾರ್ಯವನ್ನು ಮಾಡಲು ಒಬ್ಬ ವ್ಯಕ್ತಿಯಿಂದ ಎಂದಿಗೂ ಸಾಧ್ಯವಿಲ್ಲ. 2-3 ವ್ಯಕ್ತಿಗಳು ಒಂದು ತಂಡವಾಗಿ ಕಾರ್ಯವನ್ನು ಮಾಡಬೇಕು.ಕೊಕಾಘ 31.2

    ದೇವರ ಸೇವೆಯ ಒಂದು ಭಾಗವನ್ನು ಅಥವಾ ಮತ್ತೊಂದು ಭಾಗವನ್ನು ನಿಯಂತ್ರಿಸುವ ಅಧಿಕಾರವುಳ್ಳ ಯಾವ ರಾಜನನ್ನೂ ದೇವರು ನೇಮಿಸಿಲ್ಲ. ಇದನ್ನು ಹತೋಟಿಯಲ್ಲಿಡಲು ಮಾಡುವ ಪ್ರಯತ್ನಗಳಿಂದ ದೇವರ ಸೇವೆಯು ಬಹಳವಾಗಿ ಕುಂಠಿತವಾಗಿದೆ. ನಮ್ಮಲ್ಲಿ ನವೀಕರಣ ಹಾಗೂ ಪುನಸ್ಸಂಘಟನೆಯಾಗಬೇಕು. ನಮ್ಮ ಕಮಿಟಿಗಳಿಗೆ ಅಗತ್ಯವಾದ ಬಲಶಕ್ತಿ ಚೈತನ್ಯವನ್ನು ತರಬೇಕಾಗಿದೆ ಎಂದು ಶ್ರೀಮತಿ ವೈಟಮ್ಮನವರು 1901ನೇ ಇಸವಿಯಲ್ಲಿ ಬ್ಯಾಟಲ್ ಕ್ರೀಕ್‌ನಲ್ಲಿ ನಡೆದ ಜನರಲ್ ಕಾನ್ಫರೆನ್ಸ್ ಸಮಾವೇಶದಲ್ಲಿ ಹೇಳಿದರು (ಜಿ.ಸಿ. ಬುಲೆಟಿನ್ ಪುಟಗಳು 25, 26, 1901).ಕೊಕಾಘ 31.3

    ಹೊಸದಾದ ಸೆಕ್ಷನ್‌ಗಳನ್ನು ಆರಂಭಿಸಬೇಕು. ಆಸ್ಟ್ರೇಲಿಯಾ ದೇಶದಲ್ಲಿ ದೇವರ ಅಪ್ಪಣೆಯ ಮೇರೆಗೆ ಯೂನಿಯನ್ ಆರಂಭಿಸಲಾಯಿತು. ಅಮೆರಿಕಾ ದೇಶದ ಮಿಷಿಗನ್ ರಾಜ್ಯದ ಬ್ಯಾಟಲ್‌ಕ್ರೀಕ್ ಸಾವಿರಾರು ಮೈಲುಗಳ ದೂರದಲ್ಲಿದೆ. ಆಸ್ಟ್ರೇಲಿಯಾ ಮುಂತಾದ ದೇಶಗಳಿಂದ ಸೇವೆಗೆ ಸಲಹೆ ಪಡೆಯಲು ಇಲ್ಲಿಗೆ ಪತ್ರಬರೆದರೆ, ಅದಕ್ಕೆ ಜನರಲ್ ಕಾನ್ಫರೆನ್ಸ್ ಉತ್ತರ ತಲುಪಲು ಅನೇಕ ವಾರಗಳು ಬೇಕಾಗುತ್ತವೆ. ಆದುದರಿಂದ ವಿವಿಧ ದೇಶಗಳು, ರಾಜ್ಯಗಳು, ಪ್ರಾಂತ್ಯಗಳಲ್ಲಿ ಸೆಕ್ಷನ್, ಯೂನಿಯನ್ ಕಚೇರಿಗಳನ್ನು ಆರಂಭಿಸಿ ಅಧಿಕಾರ ವಿಕೇಂದ್ರಿಕರಣ ಮಾಡಿ ಅಧಿಕಾರ ಹಂಚಬೇಕು.ಕೊಕಾಘ 31.4