Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಗುಲಾಬಿ ಬಣ್ಣದ ಸಹಜ ಮುಖರೂಪ ಹಾಗೂ ಬೆಳಕಿನ ವಸ್ತ್ರ

    ಆದಾಮನು ಸೃಷ್ಟಿಕರ್ತನಿಂದ ಉಂಟುಮಾಡಲ್ಪಟ್ಟಾಗ, ಅವನು ಶ್ರೇಷ್ಟವಾದ ಎತ್ತರ ಹಾಗೂ ಸುಂದರವಾದ ಮೈಕಟ್ಟು ಹೊಂದಿದ್ದವನಾಗಿದ್ದನು. ಈಗಿನ ಕಾಲದಲ್ಲಿ ಜೀವಿಸುವವರಿಗಿಂತ ಎರಡಷ್ಟು ಎತ್ತರವಾಗಿದ್ದು, ಎಲ್ಲಾ ಅಂಗಗಳು ಸಮಪ್ರಮಾಣದಲ್ಲಿದ್ದವು. ಅವನ ಮುಖರೂಪವು ಪರಿಪೂರ್ಣವೂ, ಮನೋಹರವೂ ಆಗಿತ್ತು, ಆದಾಮನ ಮುಖವು ಬಿಳುಪಾಗಿರಲಿಲ್ಲ ಅಥವಾ ಕಂದುಹಳದಿಯೂ (Sallow) ಆಗಿರಲಿಲ್ಲ. ಆದರೆ ಗುಲಾಬಿ ಬಣ್ಣದಂತೆ ಮಿರುಗೆಂಪಾಗಿದ್ದು (Ruddy) ತಾರುಣ್ಯದಿಂದ ಪರಿಪೂರ್ಣ ಆರೋಗ್ಯದಿಂದ ತುಂಬಿ ತುಳುಕುತ್ತಿದ್ದನು. ಹವಳು ಆದಾಮನಷ್ಟು ಎತ್ತರವಾಗಿರಲಿಲ್ಲ. ಅವಳು ಆದಾಮನ ಭುಜಕ್ಕೆ ಬರುವಷ್ಟು ಎತ್ತರವಾಗಿದ್ದಳು. ಅವಳ ಅಂಗಸೌಷ್ಟವವು ಅತ್ಯುನ್ನತವಾಗಿದ್ದವು. ರೂಪದಲ್ಲಿ ಅತ್ಯಂತ ಸೌಂದರ್ಯವತಿಯಾಗಿದ್ದಳು (ಸ್ಪಿರಿಚುವಲ್ ಗಿಫ್ಟ್ಸ್, ಸಂಪುಟ 3, ಪುಟ 34).ಕೊಕಾಘ 171.3

    ಪಾಪವನ್ನೇ ಮಾಡದಿದ್ದ ದಂಪತಿಗಳಾದ ಆದಾಮ ಹವ್ವಳು ಕೃತಕವಾದ ಯಾವುದೇ ಬಟ್ಟೆ ಹಾಕಿಕೊಂಡಿರಲಿಲ್ಲ. ದೇವದೂತರಂತೆ ಅವರೂ ಸಹ ದೇವರ ಮಹಿಮೆ ಮತ್ತು ಬೆಳಕನ್ನು ಧರಿಸಿಕೊಂಡಿದರು. ಅವರು ದೇವರಿಗೆ ವಿಧೇಯರಾಗಿರುವವರೆಗೆ, ಈ ಮಹಿಮೆಯ ವಸ್ತ್ರವು ಅವರನ್ನು ಆವರಿಸಿಕೊಂಡಿತ್ತು (ಪೇಟ್ರಿಯಾರ್ಕ್ ಅಂಡ್ ಪ್ರಾಫೆಟ್ಸ್, 45).ಕೊಕಾಘ 171.4