Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅದ್ಭುತ ಕಾರ್ಯಗಳು ಸತ್ಯವೇದದ ಸ್ಥಾನವನ್ನು ತೆಗೆದುಕೊಳ್ಳಲಾಗದು

    ಅದ್ಭುತಗಳ ಮೂಲಕ ರೋಗವನ್ನು ಗುಣಪಡಿಸುವ ಶಕ್ತಿ ಯಾರಾದರೂ ಹೊಂದಿದ್ದರೂ, ಅವರು ದೇವರಿಗೆ ಅವಿಧೇಯರಾಗಿ ಆತನ ಆಜ್ಞೆಗಳನ್ನು ತಿರಸ್ಕರಿಸಿದಲ್ಲಿ ಅವರು ದೇವರ ಅಪಾರವಾದ ಶಕ್ತಿಹೊಂದಿದ್ದಾರೆಂದು ತಿಳಿದುಕೊಳ್ಳಬಾರದು, ಬದಲಾಗಿ ಸೈತಾನನೆಂಬ ಮಹಾವಂಚಕನ ಸಹಾಯದಿಂದ ಅಂತಹ ಅದ್ಭುತ ಕಾರ್ಯಗಳನ್ನು ಮಾಡುತ್ತಾರೆ (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 2, ಪುಟಗಳು 50, 51, 1885).ಕೊಕಾಘ 97.4

    ಅದ್ಭುತ ಕಾರ್ಯಗಳು ಎಂದಿಗೂ ಸಹ ಸತ್ಯವೇದವನ್ನು ರದ್ದು ಮಾಡುವುದಿಲ್ಲ ಅಥವಾ ಅದರ ಸ್ಥಾನವನ್ನು ತೆಗೆದುಕೊಳ್ಳಲಾಗದು. ಸತ್ಯವನ್ನು ನೆಲದಲ್ಲಿ ಹುದುಗಿಸಿಟ್ಟಿರುವ ನಿಧಿಯಂತೆ ಹುಡುಕಿ ಅಧ್ಯಯನ ಮಾಡಬೇಕು. ದೇವರ ವಾಕ್ಯವನ್ನು ಭದ್ರವಾಗಿ ಹಿಡಿದುಕೊಳ್ಳಬೇಕು. ಮನುಷ್ಯರನ್ನು ವಿವೇಕಿಗಳನ್ನಾಗಿ ಮಾಡುವ ವಾಕ್ಯಗಳನ್ನು ಅಂಗೀಕರಿಸಿಕೊಳ್ಳಬೇಕು.ಕೊಕಾಘ 97.5

    ಕೊನೆಯ ಮಹಾವಂಚನೆಯು ಶೀಘ್ರದಲ್ಲಿಯೇ ಎಲ್ಲರ ಮುಂದೆ ಪ್ರಕಟವಾಗಲಿದೆ. ನಮ್ಮೆದುರಿನಲ್ಲಿ ಕ್ರಿಸ್ತ ವಿರೋಧಿಯು ತನ್ನ ಮಹತ್ತರವಾದ ಕ್ರಿಯೆಗಳನ್ನು ಮಾಡುವನು. ಅವನು ಮಾಡುವ ಮೋಸದ ಕಾರ್ಯಗಳು ನಿಜವಾದ ಕಾರ್ಯಗಳಿಗೆ ಎಷ್ಟೊಂದು ನಿಕಟವಾಗಿ ಹೋಲುತ್ತದೆಂದರೆ, ಪರಿಶುದ್ಧವಾದ ಸತ್ಯವೇದದಿಂದ ಹೊರತು ಬೇರೆ ಯಾವುದರಿಂದಲೂ ಅವುಗಳ ನಡುವಣ ವ್ಯತ್ಯಾಸವನ್ನು ತಿಳಿಯುವುದು ಅಸಾಧ್ಯವಾಗಿದೆ. ಅವರ ಸಾಕ್ಷಿಯ ಮೂಲಕ ಅವರ ಹೇಳಿಕೆಗಳು ಮತ್ತು ಅವರು ಮಾಡುವ ಪ್ರತಿಯೊಂದು ಅದ್ಭುತಗಳನ್ನು ಪರೀಕ್ಷಿಸಬೇಕು (ಗ್ರೇಟ್ ಕಾಂಟ್ರೊವರ್ಸಿ, 593, 1911).ಕೊಕಾಘ 98.1