Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸ್ಟೋನ್ ಹ್ಯಾಮ್ ಮಸಾಚುಸೆಟ್ಸ್, ಅಮೇರಿಕಾ

    ಅಮೇರಿಕಾದೇಶದ ನ್ಯೂಇಂಗ್ಲೆಂಡ್ ಪ್ರದೇಶದಲ್ಲಿ ವಿಶೇಷವಾದ ಕಾರ್ಯ ನಡೆಯಬೇಕಾಗಿತ್ತು. ದೇವರು ತನ್ನ ಅನುಗ್ರಹದಿಂದ ಅಲ್ಲಿ ಒಂದು ಮಾರ್ಗ ಮಾಡಿದನು. ಬೋಸ್ಟನ್ ನಗರಕ್ಕೆ ಹತ್ತಿರದಲ್ಲಿ, ಆದರೆ ನಗರದ ಜನಸಂದಣಿಯಿಂದ ದೂರದಲ್ಲಿ ಒಂದು ಆಸ್ಪತ್ರೆ ಆರಂಭಿಸಲಾಯಿತು. ಇದರಿಂದ ರೋಗಿಗಳು ಚಿಕಿತ್ಸೆ ಪಡೆದು ಗುಣ ಹೊಂದಲಿಕ್ಕೆ ಅತ್ಯಂತ ಅನುಕೂಲಕರವಾದ ಪರಿಸರ ಅಲ್ಲಿತ್ತು. ಬೋಸ್ಟನ್ ನಗರದ ಸಮೀಪಕ್ಕೆ ಆಸ್ಪತ್ರೆಯನ್ನು ಸೌತ್ ಲ್ಯಾಂಕಾಸ್ಟರ್‌ನಿಂದ ವರ್ಗಾಯಿಸುವುದು ದೇವರ ಚಿತ್ತವಾಗಿತ್ತು.ಕೊಕಾಘ 60.5

    ದೇವರು ಒಂದು ಕಾರ್ಯ ಮಾಡಲು ನಮ್ಮ ಮುಂದೆ ಹಾದಿಯನ್ನು ಸಿದ್ಧಮಾಡಿದಾಗ, ಯಾರೂ ಸಹ ಅಡ್ಡಿ ಮಾಡಬಾರದು. ಅಲ್ಲದೆ ಆ ಕಾರ್ಯಮಾಡುವ ಉದ್ದೇಶವನ್ನು ಪ್ರಶ್ನಿಸಬಾರದು. ಇಲ್ಲವೆ ಸಹಾಯ ಮಾಡಲು ನಿರಾಕರಿಸಬಾರದು. ಸೌತ್ ಲ್ಯಾಂಕಾಸ್ಟರ್‌ನಿಂದ ನ್ಯೂ ಇಂಗ್ಲೆಂಡ್‌ ಆಸ್ಪತ್ರೆಯನ್ನು ಬೋಸ್ಟನ್ ನಗರದ ಸಮೀಪಕ್ಕೆ ವರ್ಗಾಯಿಸಬೇಕೆಂದು ದೇವರು ಶ್ರೀಮತಿ ವೈಟಮ್ಮನವರಿಗೆ ದರ್ಶನದಲ್ಲಿ ಮಾರ್ಗದರ್ಶನ ನೀಡಿದ್ದನು. ಅದರಂತೆಯೇ ಆ ಕಾರ್ಯ ನಡೆಯಿತು (ಸ್ಪೆಷಲ್ ಟೆಸ್ಟಿಮೊನೀಸ್, ಪುಟ 13, 1902).ಕೊಕಾಘ 61.1