Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಒಂದು ಹೊಸ ಕ್ರೈಸ್ತ ಧಾರ್ಮಿಕ ಶಾಖೆಯ ಅಗತ್ಯವಿಲ್ಲ

    ‘ನಾನು ಬರೆದಿರುವ ಟೆಸ್ಟಿಮೊನೀಸ್ ಸಂಪುಟಗಳಿಂದ ಕೃಪೆಯ ಕಾಲದ ಮುಕ್ತಾಯ, ದೇವರ ಜನರ ವಿಶ್ವಾಸ ಕುಗ್ಗುವಂತಹ ಘಟನೆ ನಡೆಯುತ್ತದೆಂದು ತಿಳಿಸುವ ಹೇಳಿಕೆಗಳನ್ನು ತೆಗೆದುಕೊಂಡು, ಅಡ್ವೆಂಟಿಸ್ಟ್ ಸಭೆಯಿಂದ ಪರಿಶುದ್ಧರಾದ ಒಂದು ಗುಂಪಿನ ಜನರು ಹೊರಗೆ ಬರುತ್ತಾರೆಂದು ನೀವು ಮಾತಾಡಬಹುದು. ಇದೆಲ್ಲವೂ ಸೈತಾನನಿಗೆ ಮೆಚ್ಚುಗೆಯಾಗುತ್ತದೆ. ನೀವು ಪ್ರತಿಪಾದಿಸುವಂತ ವಿಷಯವನ್ನು ಅನೇಕರು ಒಪ್ಪಿಕೊಂಡು, ಅದರಂತೆ ನಡೆದುಕೊಂಡಲ್ಲಿ, ಸೆವಂತ್ ಡೇ ಅಡ್ಡೆಂಟಿಸ್ಟ್ ಸಭೆಯಲ್ಲಿ ಹಿಂದೆಂದೂ ಕಂಡುಬಂದಿರದಂತ ಒಂದು ದೊಡ್ಡ ಮತಾಂಧ ಪ್ರಚೋದನೆ ಉಂಟಾಗಲಿದೆ. ಸೈತಾನನು ಇದನ್ನು ತಾನೇ ಬಯಸುತ್ತಿದ್ದಾನೆ (ಸೆಲೆಕ್ಟಡ್ ಮೆಸೇಜಸ್, ಸಂಪುಟ 1, ಪುಟ 179, 1890).ಕೊಕಾಘ 30.1

    ಸೆವೆಂತ್ ಡೇ ಅಡ್ವೆಂಟಿಸ್ಟರು ಬಾಬೆಲ್ ಎಂದೂ ಹಾಗೂ ಅಲ್ಲಿರುವ ದೇವರ ಜನರನ್ನು ಬಾಬೆಲಿನಿಂದ ಹೊರ ಬನ್ನಿರಿ ಎಂದು ಕರೆಯುವಂತ ಯಾವುದೇ ಸಂದೇಶವನ್ನು ದೇವರು ಕೊಟ್ಟಿಲ್ಲ. ನೀವು ಎಲ್ಲಾ ವಿಧವಾದ ವಿಚಾರಗಳನ್ನು, ಕಾರಣಗಳನ್ನು ಈ ವಿಷಯದ ಬಗ್ಗೆ ಎಷ್ಟೇ ತಿಳಿಸಿದರೂ, ನನ್ನ ಅಭಿಪ್ರಾಯವನ್ನು ನಾನು ಬದಲಿಸುವುದಿಲ್ಲ. ಯಾಕೆಂದರೆ ಇಂತಹ ಸಂದೇಶಕ್ಕೆ ವಿರುದ್ಧವಾದ ನಿರ್ಣಾಯಕವಾದ ಆತನ ಬೆಳಕನ್ನು ಕರ್ತನು ನನಗೆ ಕೊಟ್ಟಿದ್ದಾನೆಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ. ದೇವರು ತನ್ನ ಸಭೆಯನ್ನು ಪ್ರೀತಿಸುತ್ತಾನೆ. ಇದನ್ನು ಸ್ವತಂತ್ರವಾದ ಬೇರೆ ಬೇರೆ ಸಂಸ್ಥೆಗಳನ್ನಾಗಿ ವಿಭಜಿಸಬಾರದು ಅಥವಾ ಅವ್ಯವಸ್ಥಿತಗೊಳಿಸಬಾರದು. (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 2, ಪುಟಗಳು 63, 1869).ಕೊಕಾಘ 30.2

    1893ರಲ್ಲಿ ಪ್ರಕಟವಾದ ಸೆಲೆಕ್ಷಡ್ ಮೆಸೇಜಸ್ ಸಂಪುಟ 3, ಪುಟಗಳು 17, 18 ರಲ್ಲಿ ಶ್ರೀಮತಿ ವೈಟಮ್ಮನವರು ಹೀಗೆ ತಿಳಿಸುತ್ತಾರೆ :ಕೊಕಾಘ 30.3

    ‘ನನ್ನ ಸಹೋದರರೇ, ದೇವರು ತನ್ನದೇ ಆದ ವ್ಯವಸ್ಥಿತವಾದ ಸಂಸ್ಥೆಯನ್ನು ಹೊಂದಿದ್ದು, ಅದರ ಮೂಲಕ ಆತನು ಕಾರ್ಯಮಾಡುತ್ತಾನೆ. ಯಾರಾದರೂ ದೇವರಾಜ್ಞೆಗಳನ್ನು ಕೈಕೊಂಡು ನಡೆಯುವ ಜನರ ವ್ಯವಸ್ಥಿತವಾದ ಸಂಸ್ಥೆಯಿಂದ ದೂರಹೋದಲ್ಲಿ ಮತ್ತು ಸಭೆಯ ಸಂಸ್ಥೆಯ ವಿರುದ್ಧವಾಗಿ ತೀರ್ಪು ಮಾಡಿದಲ್ಲಿ, ಅವನು ದೇವರಿಂದ ನಡೆಸಲ್ಪಡುತ್ತಿಲ್ಲವೆಂದು ತಿಳಿಯಬೇಕು. ಅವನು ಸೈತಾನನಿಂದ ಪ್ರೇರಿತನಾಗಿ ತಪ್ಪಾದ ಮಾರ್ಗದಲ್ಲಿದ್ದಾನೆ’.ಕೊಕಾಘ 30.4