Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಮನೆ ಹಾಗೂ ಆಸ್ತಿಪಾಸಿಗಳಿಂದ ಯಾವುದೇ ಪ್ರಯೋಜನವಿಲ್ಲ

    ದೇವಜನರು ಉದ್ರಿಕರಾದ ದುಷ್ಟಜನರಿಂದ ಅಪಾಯವಾಗದಂತೆ ನಗರ, ಪಟ್ಟಣ, ಹಳ್ಳಿಗಳಿಂದ ಪಲಾಯನ ಮಾಡಬೇಕಾಗುವುದು. ಆದುದರಿಂದ ಅಂತಹ ಸಂಕಟದ ಸಮಯದಲ್ಲಿ ಮನೆ ಹಾಗೂ ಆಸ್ತಿಪಾಸ್ತಿಗಳಿಂದ ಅವರಿಗೆ ಯಾವುದೇ ಉಪಯೋಗವಿಲ್ಲ. ಅಲ್ಲದೆ ವರ್ತಮಾನದ ಸತ್ಯವನ್ನು ಸಾರಲಿಕ್ಕೂ ಸಹ ದೇವಜನರ ಆಸ್ತಿಯಿಂದ ಆ ಸಮಯದಲ್ಲಿ ಯಾವುದೇ ಪ್ರಯೋಜನವಾಗುವುದಿಲ್ಲ.ಕೊಕಾಘ 153.2

    ಯಾರಾದರೂ ತಮ್ಮ ಆಸ್ತಿಯನ್ನು ಉಳಿಸಿಕೊಂಡಿದ್ದಲ್ಲಿ, ಸಂಕಟದ ಸಮಯದಲ್ಲಿ ಅದು ಅವರನ್ನು ಪುಡಿಪುಡಿಮಾಡುವ ದೊಡ್ಡ ಬೆಟ್ಟದಂತೆ ಇರುವುದು. ಅದನ್ನು ಮಾರಲು ಅವರು ಎಷ್ಟೇ ಪ್ರಯತ್ನಪಟ್ಟರೂ, ಸಾಧ್ಯವಾಗದು.... ಆದರೆ ಅವರು ದೇವರಿಂದ ಇಂತಹ ಸಂಕಟದ ಸಮಯದಲ್ಲಿ ತಮ್ಮ ಕರ್ತವ್ಯವೇನೆಂದು ತಿಳಿದುಕೊಳ್ಳ ಬಯಸಿದಲ್ಲಿ, ದೇವರು ಅವರಿಗೆ ಮಾರ್ಗದರ್ಶನ ನೀಡುವನು. ಅಲ್ಲದೆ ಯಾವಾಗ, ಎಷ್ಟು ಆಸ್ತಿ ಮಾರಬೇಕೆಂದು ದೇವರು ತಿಳಿಯಪಡಿಸುವನು (ಅರ್ಲಿ ರೈಟಿಂಗ್, ಪುಟಗಳು 56. 57).ಕೊಕಾಘ 153.3

    ಭೂಲೋಕದಲ್ಲಿ ಐಶ್ವರ್ಯ, ಆಸ್ತಿಯಲ್ಲಿ ಭರವಸವಿಡುವುದಕ್ಕೆ ಇದು ತಕ್ಕ ಸಮಯವಲ್ಲ. ಈ ಲೋಕದ ಮೇಲೆ ದೇವರ ಶಾಪವು ಹೆಚ್ಚೆಚ್ಚಾಗಿ ಬರುವುದರಿಂದ, ಶೀಘ್ರದಲ್ಲಿಯೇ ಅಗತ್ಯವಿಲ್ಲದ ಮನೆಗಳು ಹಾಗೂ ಹೊಲಗದ್ದೆಗಳಿಂದ ಯಾರಿಗೂ ಪ್ರಯೋಜನವಾಗದು. ನಿಮ್ಮಲ್ಲಿರುವುದನ್ನು ಮಾರಿಬಿಟ್ಟು ದಾನ ಕೊಡಿರಿ...’ ಎಂಬ ಕರೆ ಬರುತ್ತದೆ ಬರುವುದಾಗಿದೆ (ಲೂಕ 12:37 ) ಈ ಸಂದೇಶವನ್ನು ನಾವು ನಂಬಿಕೆಯಿಂದ ಅನುಸರಿಸಬೇಕು. ದೇವರ ಆಸ್ತಿಯನ್ನು ಮಾರಿ ಆ ಹಣವನ್ನು ಈ ಲೋಕದಲ್ಲಿ ಆತನ ಸೇವೆಯ ಅಭಿವೃದ್ಧಿಗಾಗಿ ಕೊಡಬೇಕು (ಮ್ಯಾನುಪ್ ರಿಲೀಸ್, ಸಂಪುಟ 16, ಪುಟ 348).ಕೊಕಾಘ 153.4