Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೇವರ ತಾಳ್ಮೆಗೂ ಒಂದು ಮಿತಿಯಿದೆ

    ಅನಂತ ಸ್ವರೂಪಿಯಾದ (Infinite) ದೇವರು ತಪ್ಪಿಹೋಗದಂತ ನಿಖರತೆಯಿಂದ ಎಲ್ಲಾ ದೇಶಗಳ ವಿವರಣೆಯನ್ನು ಇನ್ನೂ ಇಟ್ಟಿದ್ದಾನೆ. ಆತನು ಕರುಣೆಯಿಂದಲೇ ಪಶ್ಚಾತ್ತಾಪ ಪಡುವಂತೆ ಜನರಿಗೆ ಕರೆ ನೀಡಿದಾಗ, ಈ ವಿವರಣೆಯು ತೆರೆದಿರುತ್ತದೆ. ಆದರೆ ಇದು ದೇವರು ನೇಮಿಸಿದ ಒಂದು ಹಂತವನ್ನು ಮುಟ್ಟಿದಾಗ, ಆತನ ಉಗ್ರಕೋಪವು ಆರಂಭವಾಗುವುದು (ಟೆಸ್ಟಿಮೊನೀಸ್‌ ಸಂಪುಟ 5, ಪುಟ 208 (1882).ಕೊಕಾಘ 22.5

    ದೇವರು ಎಲ್ಲಾ ದೇಶಗಳ ದಾಖಲೆ ಇಟ್ಟಿದ್ದಾನೆ. ಪರಲೋಕದ ಪುಸ್ತಕಗಳಲ್ಲಿ ಇದರ ಸಂಖ್ಯೆಯು ಮಿತಿಮೀರಿದಾಗ ಹಾಗೂ ವಾರದ ಮೊದಲನೆ ದಿನದ ಪರಿಶುದ್ಧತೆಯನ್ನು ಉಲ್ಲಂಘಿಸುವುದು ಶಿಕ್ಷೆಗೆ ಅರ್ಹವೆಂದು ಕಾನೂನು ಜಾರಿಗೆ ಬಂದಾಗ, ಪಾಪದ ಪಾತ್ರೆಯು ತುಂಬುತ್ತದೆ (ಅಡ್ವೆಂಟಿಸ್ಟ್ ಬೈಬಲ್ ವ್ಯಾಖ್ಯಾನ ಸಂಪುಟ 7, ಪುಟ 918 (1886).ಕೊಕಾಘ 22.6

    ದೇವರು ದೇಶಗಳಿಗೆ ದಂಡನೆಯ ದಿನವನ್ನು ನೇಮಿಸಿದ್ದಾನೆ. ಈ ಕಾಲವು ಪರಿಪೂರ್ಣವಾಗಿ, ದುಷ್ಟತನವು ದೇವರ ಕರುಣೆಯ ಎಲ್ಲೆಯನ್ನು ಮೀರಿದಾಗ, ಆತನ ತಾಳ್ಮೆಯು ಕೊನೆಗೊಳ್ಳುತ್ತದೆ. ದೇವರಾಜ್ಞೆಯ ಉಲ್ಲಂಘನೆಯು ಮಿತಿಮೀರಿ ಸಂಪೂರ್ಣವಾದಾಗ, ಆತನ ಉಗ್ರಕೋಪವು ತೋರಿಬರುತ್ತದೆ (ಟೆಸ್ಟಿಮೊನೀಸ್, ಸಂಪುಟ 5, ಪುಟ 524 (1889). ಕೊಕಾಘ 23.1

    ದೇವರ ಕರುಣೆಯು ಪಾಪಿಯೊಂದಿಗೆ ತಾಳ್ಮೆಯಿಂದ ಕಾದುಕೊಂಡಿರುವಾಗ, ಒಂದು ಮಿತಿಯಿಂದಾಚೆ ಮನುಷ್ಯನು ಪಾಪ ಮಾಡುತ್ತಲೇ ಇರಲಾರನು. ಆ ಮಿತಿಯನ್ನು ಮುಟ್ಟಿದಾಗ, ಕರುಣೆಯ ಕರೆಯು ಹಿಂತೆಗೆಯಲ್ಪಡುವುದು ಹಾಗೂ ನ್ಯಾಯತೀರ್ಪು ಆರಂಭವಾಗುವುದು (ಪೇಟ್ರಿಯಾರ್ಕ್ ಅಂಡ್ ಪ್ರಾಫೆಟ್ಸ್, ಪುಟಗಳು 162, 165 (1890). ಮನುಷ್ಯರ ಮೋಸ ಹಾಗೂ ದುರಹಂಕಾರವು ಒಂದು ಮಿತಿಯನ್ನು ಮುಟ್ಟಿದಾಗ, ದೇವರು ಅದರಿಂದಾಚೆ ಹೋಗಲು ಅವರಿಗೆ ಅನುಮತಿ ನೀಡುವುದಿಲ್ಲ. ಆಗ ಅವರು ಯೆಹೋವ ದೇವರ ತಾಳ್ಮೆಗೂ ಒಂದು ಮಿತಿ ಇದೆಯೆಂದು ತಿಳುಕೊಳ್ಳುವರು (ಟೆಸ್ಟಿಮೊನೀಸ್, ಸಂಪುಟ 9, ಪುಟ 13 (1909). ಅಲ್ಲದೆ ಆ ಮಿತಿಯಿಂದಾಚೆಗೆ ದೇವರ ನ್ಯಾಯತೀರ್ಪು ಇನ್ನೂ ನಿಧಾನವಾಗುವುದಿಲ್ಲ (ಪೇಟಿಯಾರ್ಕ್ ಅಂಡ್ ಕಿಂಗ್ಸ್, ಪುಟ 417 (1914).ಕೊಕಾಘ 23.2