Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಒಬ್ಬರ ಗುಣವನ್ನು ಮತ್ತೊಬ್ಬರಿಗೆ ವರ್ಗಾಯಿಸುವುದು ಅಸಾಧ್ಯ

    ಕರ್ತನು ಮಹಾಬಲದಿಂದಲೂ ಹಾಗೂ ಮಹಿಮೆಯಿಂದಲೂ ಎರಡನೇ ಸಾರಿ ಈ ಲೋಕಕ್ಕೆ ಬರುವನು. ಆಗ ಆತನು ನೀತಿವಂತರನ್ನು ಕೆಟ್ಟವರಿಂದ ಸಂಪೂರ್ಣವಾಗಿ ಪ್ರತ್ಯೇಕಿಸುವನು. ಆದರೆ ಎಣ್ಣೆಯಿಲ್ಲದವರ ಪಾತ್ರೆಗಳಿಗೆ ಎಣ್ಣೆಯನ್ನು ವರ್ಗಾಯಿಸುವುದು ಸಾಧ್ಯವಿಲ್ಲ. ಆಗ ಕ್ರಿಸ್ತನು ಹೇಳಿದ ‘ಆವಾಗ ಇಬ್ಬರು ಹೊಲದಲ್ಲಿರುವರು; ಒಬ್ಬರು ತೆಗೆದುಕೊಳ್ಳಲ್ಪಡುವನು, ಒಬ್ಬನು ಬಿಡಲ್ಪಡುವನು. ಇಬ್ಬರು ಹೆಂಗಸರು ಬೀಸುವ ಕಲ್ಲಿನ ಮುಂದೆ ಬೀಸುತ್ತಿರುವರು, ಒಬ್ಬಳು ತೆಗೆದುಕೊಳ್ಳಲ್ಪಡುವಳು, ಮತ್ತೊಬ್ಬಳು ಬಿಡಲ್ಪಡುವಳು’ ಎಂಬ ಮಾತು ನೆರವೇರುವುದು (ಮತ್ತಾಯ 24:40, 41}, ತನ್ನ ಆಜ್ಞೆಗಳನ್ನು ಗೌರವಿಸಿ ಪ್ರೀತಿಸಿ ವಿಧೇಯರಾದ ಮಕ್ಕಳು ಯಾರೆಂದು ಕ್ರಿಸ್ತನು ತಿಳಿಯುವನು (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್, ಪುಟ 234).ಕೊಕಾಘ 137.2

    ಸಾಯುವುದು ಗಂಭೀರವಾದ ಸಂಗತಿ. ಆದರೆ ಜೀವಿಸುವುದು ಬಹಳ ಗಂಭೀರವಾದ ವಿಷಯ. ನಮ್ಮ ಜೀವನದಲ್ಲಿ ಮಾಡಿದ ಎಲ್ಲಾ ಕಾರ್ಯಗಳು, ಎಲ್ಲಾ ಆಲೋಚನೆಗಳು ಹಾಗೂ ಮಾತುಗಳೆಲ್ಲವೂ ತಿರುಗಿ ನಮ್ಮನ್ನು ಸಂಧಿಸುತ್ತವೆ. ಕೃಪಾಕಾಲವಿರುವಾಗ ನಾವು ಏನಾಗಿರುತ್ತೇವೆಯೋ, ನಿತ್ಯನಿತ್ಯಕ್ಕೂ ನಾವು ಅದೇ ರೀತಿ ಇರುತ್ತೇವೆ, ಮರಣವು ಶರೀರಕ್ಕೆ ಮುಕ್ತಾಯ ತಂದರೂ, ಗುಣಸ್ವಭಾವದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಕ್ರಿಸ್ತನ ಬರೋಣವು ನಮ್ಮ ಸ್ವಭಾವಗಳನ್ನು ಬದಲಾಯಿಸುವುದಿಲ್ಲ, ಆದರೆ ಎಂದೆಂದಿಗೂ ಬದಲಾಗದಂತೆ ಅವುಗಳನ್ನು ದೃಢಪಡಿಸುತ್ತದೆ (ಟೆಸ್ಟಿಮೊನೀಸ್, ಸಂಪುಟ 5, ಪುಟ 466).ಕೊಕಾಘ 137.3