Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಮೂರನೇ ದೂತನ ಸಂದೇಶವು ವಿಶ್ವವ್ಯಾಪಿಯಾಗಿರುತ್ತದೆ

    ಮೂರನೇ ದೂತನ ಸಂದೇಶ ಸಾರುವುದಕ್ಕೆ ಅವನೊಂದಿಗೆ ಒಟ್ಟಾದ ಮತ್ತೊಬ್ಬ ದೇವದೂತನು ತನ್ನ ಮಹಿಮೆಯಿಂದ ಸಂಪೂರ್ಣವಾಗಿ ಈ ಲೋಕವನ್ನು ಬೆಳಗಿಸುತ್ತಾನೆ. ವಿಶ್ವವ್ಯಾಪಿಯಾದ ಕಾರ್ಯ ಮತ್ತು ಅಸಾಧಾರಣವಾದ ಶಕ್ತಿಯ ಬಗ್ಗೆ ಇಲ್ಲಿ ಮುಂದಾಗಿ ತಿಳಿಸಲ್ಪಟ್ಟಿದೆ (ಪ್ರಕಟನೆ 18:1, 2), ದೇವರ ಸೇವಕರ ಮುಖವು ಪವಿತ್ರವಾದ ಅಭಿಷೇಕದೊಂದಿಗೆ ಪ್ರಕಾಶಮಾನವಾಗಿ ಬೆಳಗುತ್ತದೆ. ಅವರು ಪರಲೋಕದ ಸಂದೇಶ ಸಾರಲು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತ್ವರೆಯಿಂದ ಹೋಗುತ್ತಾರೆ. ದೇವರ ಸಾವಿರಾರು ಸೇವಕರು ಜಗತ್ತಿನಾದ್ಯಂತ ಎಚ್ಚರಿಕೆಯನ್ನು ಕೊಡುವರು (ಗ್ರೇಟ್ ಕಾಂಟ್ರೊವರ್ಸಿ, ಪುಟಗಳು 611, 612, 1911).ಕೊಕಾಘ 120.3

    ಮೂರನೇ ದೂತನನ್ನು ಅನುಸರಿಸಿದ ದೇವದೂತನ ಸಂದೇಶವು ಈಗ ಲೋಕದ ಎಲ್ಲಾ ಕಡೆಗಳಲ್ಲಿಯೂ ಕೊಡಬೇಕಾಗಿದೆ. ಇದು ಸುಗ್ಗಿಕಾಲದ ಸಂದೇಶವಾಗಿದ್ದು, ಸಮಸ್ತಲೋಕವೇ ದೇವರ ಮಹಿಮೆಯಿಂದ ಪ್ರಕಾಶಮಾನವಾಗುವುದು (ಟೆಸ್ಟಿಮೊನೀಸ್, ಸಂಪುಟ 6, ಪುಟ 401, 1900).ಕೊಕಾಘ 120.4

    ಅಮೆರಿಕಾದ ಪ್ರತಿಯೊಂದು ನಗರದಲ್ಲಿಯೂ ಸತ್ಯವನ್ನು ಸಾರಬೇಕಾಗಿದೆ. ಅಲ್ಲದೆ ಜಗತ್ತಿನ ಪ್ರತಿಯೊಂದು ದೇಶದಲ್ಲಿಯೂ, ಎಚ್ಚರಿಕೆಯ ಈ ಸಂದೇಶವು ಕೊಡಲ್ಪಡುವುದು (ಜನರಲ್ ಕಾನ್ಫರೆನ್ಸ್ ಬುಲೆಟಿನ್, ಮಾರ್ಚ್ 30, 1903).ಕೊಕಾಘ 120.5

    ಉನ್ನತವಾದ ದೇವರ ದೈವಕೃಪೆಯ ಸಹಾಯದಿಂದ, ಮೂರನೇ ದೂತನ ಮಹಾಧ್ವನಿಯ ಸಂದೇಶವು ಕೊಡಲ್ಪಡುವಾಗ, ಸಭೆಯು ರಕ್ಷಣೆಯ ಜ್ಞಾನವನ್ನು ಎಷ್ಟೊಂದು ಹೇರಳವಾಗಿ ಹೊಂದಿಕೊಳ್ಳುತ್ತದೆಂದರೆ, ಜಗತ್ತಿನ ಪ್ರತಿಯೊಂದು ನಗರ ಮತ್ತು ಪಟ್ಟಣಗಳಿಗೆ ಸುವಾರ್ತೆಯ ಬೆಳಕನ್ನು ಅರುಹುತ್ತದೆ (ಎವಾಂಜಲಿಸಮ್, 694, 1994).ಕೊಕಾಘ 120.6

    ಒಂದು ಇಕ್ಕಟ್ಟಿನ ಪರಿಸ್ಥಿತಿ ಈಗಾಗಲೇ ನಮಗೆ ಬಂದಿದೆ. ಪರಿಶುದ್ಧಾತ್ಮನ ಶಕ್ತಿಯಿಂದ ನಾವು ಈ ಕೊನೆಯ ದಿನಗಳಿಗಾಗಿ ಮಹಾಸತ್ಯಗಳನ್ನು ಸಾರಿ ತಿಳಿಸಬೇಕಾಗಿದೆ. ಪ್ರತಿಯೊಬ್ಬರು ಎಚ್ಚರಿಕೆಯ ಸಂದೇಶ ಕೇಳಿ ನಿರ್ಣಯ ತೆಗೆದುಕೊಳ್ಳುವ ದಿನಗಳು ದೂರವಿಲ್ಲ. ಆಗ ಅಂತ್ಯವು ಬರುವುದು (ಟೆಸ್ಟಿಮೊನೀಸ್, ಸಂಪುಟ 6, ಪುಟ 24, 1900). ಕೊಕಾಘ 120.7