Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಮರಣಶಾಸನವು ಅಹಷ್ಟೆರೋಷನ ರಾಜಾಜ್ಞೆಗೆ ಹೋಲಿಕೆಯಾಗಿರುವುದು

    ದೇವರ ಉಳಿದ ಜನರ ವಿರುದ್ಧವಾಗಿ ಹೊರಡಿಸುವ ಮರಣದಂಡನೆಯ ಶಾಸನವು ಹೆಚ್ಚು ಕಡಿಮೆ ಮೇದ್ಯಪಾರಸೀಯ ರಾಜನಾದ ಅಹಷ್ಟೇರೋಷನು ಯೆಹೂದ್ಯರಿಗೆ ವಿರುದ್ಧವಾಗಿ ಜಾರಿಗೊಳಿಸಿದ್ದ ರಾಜಾಜ್ಞೆಯಂತಿರುವುದು. ಸತ್ಯಸಭೆಗೆ ವಿರೋಧಿಗಳಾದ ಶತ್ರುಗಳಿಗೆ ನಾಲ್ಕನೇ ಆಜ್ಞೆಯಾದ ಸಬ್ಬತ್ತನ್ನು ಆಚರಿಸುವ ಚಿಕ್ಕಗುಂಪಿನವರು ಅರಮನೆಯ ಹೆಬ್ಬಾಗಿಲಿನಲ್ಲಿ ಕುಳಿತಿದ್ದ ಮೊರ್ದೆಕೈನಂತೆ ಕಂಡುಬರುವರು. ದೇವರ ಭಯವನ್ನು. ಬಿಟ್ಟು ಆತನ ಸಬ್ಬತ್ತನ್ನು ಹೊಲೆ ಮಾಡಿದವರಿಗೆ ದೇವರ ಮಕ್ಕಳು ಆತನ ಆಜ್ಞೆಯನ್ನು ಗೌರವಿಸುವುದನ್ನು ನೋಡಿದಾಗ, ನಿರಂತರವಾಗಿ ಗದರಿಸಲ್ಪಟ್ಟಂತಾಗುವುದು (ಪ್ರಾಫೆಟ್ಸ್ ಅಂಡ್ ಕಿಂಗ್ಸ್ 605).ಕೊಕಾಘ 151.6

    ಲೋಕದ ಪ್ರಮುಖ ನಾಯಕರು ಒಟ್ಟಾಗಿ ಸಮಾಲೋಚನಾ ಸಭೆ ನಡೆಸುವಾಗ, ಸೈತಾನನು ಹಾಗೂ ಅವನ ದೂತರು ಅವರ ಸುತ್ತಲೂ ಕಾರ್ಯನಿರತರಾಗಿರುವುದನ್ನು ಶ್ರೀಮತಿ ವೈಟಮ್ಮನವರು ದರ್ಶನದಲ್ಲಿ ನೋಡಿದರು. ಅಲ್ಲದೆ ಜಗತ್ತಿನ ವಿವಿಧ ದೇಶಗಳಲ್ಲಿ ಜಾರಿ ಮಾಡಲಾಗುವ ಕಾನೂನುಬದ್ಧ ಶಾಸನಗಳ ನಕಲು ಪ್ರತಿಗಳನ್ನು ಅವರು ಕಂಡರು. ಅದರಲ್ಲಿ ವಿಶೇಷವಾದ ನಂಬಿಕೆ ಹೊಂದಿರುವ ಚಿಕ್ಕಗುಂಪಿನ ಜನರು ಸಬ್ಬತ್ತನ್ನು ಬಿಟ್ಟು ವಾರದ ಮೊದಲನೆ ದಿನವನ್ನು ಪರಿಶುದ್ಧವನ್ನಾಗಿ ಆಚರಿಸಬೇಕು. ಇಲ್ಲದಿದ್ದಲ್ಲಿ ಸ್ವಲ್ಪ ಕಾಲದ ನಂತರ ಜನರು ಸ್ವತಂತ್ರವಾಗಿ ಅವರನ್ನು ಕೊಲ್ಲಬಹುದೆಂದು ತಿಳಿಸಲಾಗಿತ್ತು (ಅರ್ಲಿ ರೈಟಿಂಗ್ಸ್ 282. 283).ಕೊಕಾಘ 151.7

    ಹಾಮಾನನು ಯೆಹೂದ್ಯರನ್ನೆಲ್ಲಾ ಕೊಲ್ಲಬೇಕೆಂಬ ರಾಜಾಜ್ಞೆಯು ಮೊರ್ದಕೈ ಕಾಲದಲ್ಲಿ ಹೇಗೆ ನಿಷ್ಪಲವಾಯಿತೋ, ಅದೇ ರೀತಿ ದೇವರ ಮಕ್ಕಳು ಆ ಕಾಲದಲ್ಲಿ ಆತನ ಮೇಲೆ ಸಂಪೂರ್ಣ ಭರವಸವಿಟ್ಟಲ್ಲಿ ಸೈತಾನನ ಎಲ್ಲಾ ಕುತಂತ್ರಗಳು ವಿಫಲವಾಗುತ್ತವೆ (ಸೈನ್ಸ್ ಆಫ್ ದಿ ಟೈಮ್ಸ್, ಫೆಬ್ರವರಿ 22, 1910).ಕೊಕಾಘ 152.1