Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಪಾಪಮಾಡದ ಇತರ ಲೋಕಗಳ ಜನರಿಗೆ ಸಾಕ್ಷಿ ನೀಡುವುದು

    ‘ಮನುಷ್ಯ ಕುಮಾರನು ಸೇವೆ ಮಾಡಿಸಿಕೊಳ್ಳಲಿಕ್ಕೆ ಬರಲಿಲ್ಲ. ಬದಲಾಗಿ ಸೇವೆ ಮಾಡುವುದಕ್ಕೆ ಬಂದನು (ಮತ್ತಾಯ 20:28). ಆತನಿಗಾಗಿ ಈ ಲೋಕದಲ್ಲಿ ಸಾಕ್ಷಿಗಳಾಗಿ ಸೇವೆ ಮಾಡುವುದು, ಮೇಲಣ ಲೋಕದಲ್ಲಿಯೂ ಆತನ ಸೇವೆ ಮಾಡಿದಂತಾಗುವುದು. ಈ ಲೋಕದಲ್ಲಿ ಕ್ರಿಸ್ತನ ಸೇವೆ ಮಾಡುವುದಕ್ಕೆ ದೊರೆಯುವ ಪ್ರತಿಫಲವು ಮುಂದೆ ಬರಲಿರುವ ಲೋಕದಲ್ಲಿ ಆತನಿಗೆ ಇನ್ನೂ ಅತ್ಯಧಿಕ ಶಕ್ತಿ ಸಾಮರ್ಥ್ಯದಿಂದ ಸೇವೆ ಮಾಡಲು ಅವಕಾಶ ದೊರೆತಂತಾಗುವುದು. ‘ನೀವೇ ನನ್ನ ಸಾಕ್ಷಿಗಳು: ನಾನೇ, ನಾನೇ ಯೆಹೋವನು ಎಂದು ದೇವರು ಹೇಳುತ್ತಾನೆ (ಯೆಶಾಯ 43:12). ಪರಲೋಕದಲ್ಲಿಯೂ ಸಹ ನಾವು ದೇವರಿಗೆ ಸಾಕ್ಷಿಗಳಾಗಿರುತ್ತೇವೆ.ಕೊಕಾಘ 175.4

    ಯುಗಯುಗಾಂತರಗಳಿಂದಲೂ ಕ್ರಿಸ್ತನ ಮತ್ತು ಸೈತಾನನ ನಡುವಣ ಮಹಾಹೋರಾಟವು ಮುಂದುವರಿಯಲು ಯಾಕೆ ದೇವರು ಅನುಮತಿ ನೀಡಿದ್ದಾನೆ? ಸೈತಾನನು ದೇವರ ವಿರುದ್ದ ದಂಗೆಯೆದ್ದಾಗಲೇ ಅವನನ್ನು ಯಾಕೆ ನಾಶಮಾಡಲಿಲ್ಲ? ಪಾಪದ ಪರಿಣಾಮಗಳೇನು? ಹಾಗೂ ದೇವರು ಅದನ್ನು ಯಾವ ರೀತಿ ಪರಿಗಣಿಸಿ ವ್ಯವಹರಿಸುತ್ತಾನೆ ಮತ್ತು ಪಾಪವನ್ನು ಶಾಶ್ವತವಾಗಿ ಹೇಗೆ ನಿರ್ಮೂಲ ಮಾಡುತ್ತಾನೆಂದು ಸಮಸ್ತ ವಿಶ್ವವು ನೋಡಿ ದೇವರು ನ್ಯಾಯವಂತನೆಂದು ಮನವರಿಕೆ ಮಾಡಿಕೊಳ್ಳುವ ಸಲುವಾಗಿ ಮಹಾಹೋರಾಟ ಮುಂದುವರಿಯುತ್ತಿದೆ, ಅಲ್ಲದೆ ಈ ಕಾರಣದಿಂದಲೇ ದೇವರು ಸೈತಾನನನ್ನು ಆಗಲೇ ನಾಶಪಡಿಸಲಿಲ್ಲ. ರಕ್ಷಣಾ ಯೋಜನೆಯ ಆಳ, ಅಗಲವನ್ನು ಯುಗಯುಗಾಂತರಗಳವರೆಗೂ ನಾವು ಕಲಿಯಲಿದ್ದೇವೆ. ಈ ವಿಸ್ಮಯವು ಸದಾಕಾಲಕ್ಕೂ ಪ್ರಕಟಗೊಳ್ಳುತ್ತಲೇ ಇರುತ್ತದೆ. ದೇವದೂತರಿಗೂ ಸಹ ಇದನ್ನು ನೋಡಬೇಕೆಂಬ ಅಪೇಕ್ಷೆ ಉಂಟು (1 ಪೇತ್ರನು 1:12). ನಮ್ಮ ಈ ಭೂಲೋಕವಲ್ಲದೆ, ದೇವರು ಸೃಷ್ಟಿ ಮಾಡಿರುವ ಇತರ ಅಸಂಖ್ಯಾತ ಲೋಕಗಳಿವೆ. ಆದರೆ ಆ ಲೋಕದವರಿಗಿಂತ ಹೆಚ್ಚಾಗಿ ಮಾನವರಾದ ನಮಗೆ ಮಾತ್ರ ಪಾಪದೊಂದಿಗಿನ ನಿಜವಾದ ಹೋರಾಟ ಹೇಗಿರುತ್ತದೆಂದು ಅನುಭವದಿಂದ ತಿಳಿದಿದೆ. ನಾವು ಕ್ರಿಸ್ತನ ಶ್ರಮ, ಸಂಕಟಗಳಲ್ಲಿ ಪಾಲುಗಾರರಾಗಿದ್ದೇವೆ. ಇವೆಲ್ಲವುಗಳ ವಿಷಯದಲ್ಲಿ ಮಾನವರಾದ ನಾವು ಪಾಪ ಮಾಡದ ಇತರ ಲೋಕಗಳವರಿಗೆ ಸಾಕ್ಷಿ ನೀಡುತ್ತೇವೆ (ಎಜುಕೇಷನ್ 308).ಕೊಕಾಘ 175.5