Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ನಾನು ಬರುವ ತನಕ ವ್ಯಾಪಾರ ಮಾಡಿಕೊಂಡಿರಿ

    ಕ್ರಿಸ್ತನು ಲೂಕ 19:13ನೇ ವಚನದಲ್ಲಿ ನಾನು ಬರುವ ತನಕ ವ್ಯಾಪಾರ ಮಾಡಿಕೊಂಡಿರಿ’ ಎಂದು ಹೇಳುತ್ತಾನೆ. ಅದು ಕೆಲವು ವರ್ಷಗಳಾಗಿರಬಹುದು ಇಲ್ಲವೆ ನಮ್ಮ ಮರಣದವರೆಗೆ ಇರಬಹುದು, ಆದರೆ ಅಲ್ಲಿಯವರೆಗೆ ನಾವು ವ್ಯಾಪಾರ ಮಾಡಿಕೊಂಡಿರಬೇಕು (ರಿವ್ಯೂ ಅಂಡ್ ಹೆರಾಲ್ಡ್ ಏಪ್ರಿಲ್ 21, 1896). ಪ್ರತಿಯೊಬ್ಬರೂ ಸಹ ಶಾಂತಮನಸ್ಸಿನಿಂದ ತನ್ನ ಎರಡನೇ ಬರೋಣದ ಬಗ್ಗೆ ಆಲೋಚಿಸುತ್ತಾ ಎದುರು ನೋಡುತ್ತಾ ಇರಬೇಕೆಂದು ಕ್ರಿಸ್ತನು ಬಯಸುತ್ತಾನೆ. ಎಲ್ಲರೂ ಸಹ ಪ್ರತಿದಿನವೂ ದೇವರ ವಾಕ್ಯವನ್ನು ಶ್ರದ್ಧೆಯಿಂದ ಅಧ್ಯಯನ ಮಾಡಬೇಕು, ಆದರೆ ದಿನನಿತ್ಯದ ಕರ್ತವ್ಯಗಳನ್ನು ಮರೆಯಬಾರದು.ಕೊಕಾಘ 44.4

    ತಾನು ಬಂದಾಗ ತನಗಾಗಿ ಕಾದುಕೊಂಡಿರುವ ತನ್ನ ಜನರಲ್ಲಿ ಕೆಲವರು ವ್ಯಾಪಾರ, ವ್ಯವಹಾರದಲ್ಲಿ ಮಗ್ನರಾಗಿರುತ್ತಾರೆಂದು ಕ್ರಿಸ್ತನು ಹೇಳಿದ್ದಾನೆ. ಕೆಲವರು ಹೊಲದಲ್ಲಿ ಬಿತ್ತುತ್ತಿರುತ್ತಾರೆ, ಮತ್ತೆ ಕೆಲವರು ಬೆಳೆ ಕಟಾವು ಮಾಡಿ ಒಕ್ಕಣೆ ಮಾಡುತ್ತಿರುತ್ತಾರೆ. ಬೇರೆ ಕೆಲವರು ಬೀಸುತ್ತಿರುತ್ತಾರೆ. ತಾನು ಆರಿಸಿಕೊಂಡವರು ದಿನ ನಿತ್ಯದ ಜೀವನದ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಬಿಟ್ಟು ವ್ಯರ್ಥವಾಗಿ ಅಧ್ಯಯನ ಮಾಡುತ್ತಾ ಧಾರ್ಮಿಕ ಕನಸಿನಲ್ಲಿ ಜೀವಿಸಿರಬೇಕೆಂಬುದು ದೇವರ ಚಿತ್ತವಲ್ಲ, ಈ ಜೀವನದಲ್ಲಿಯೇ ಸಾಧ್ಯವಾದಷ್ಟು ಎಲ್ಲಾ ಒಳ್ಳೆಯ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡಿರಬೇಕು (ಟೆಸ್ಟಿಮೊನೀಸ್, ಸಂಪುಟ 5, ಪುಟ 488, 1889).ಕೊಕಾಘ 45.1