Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಇಕ್ಕಟ್ಟಿನ ಸಮಯದಲ್ಲಿ ದೇವರ ಸಹಾಯವು ಹೆಚ್ಚಾಗಿ ಕಂಡುಬರುವುದು

    ಕಾಲದಿಂದ ಕಾಲಕ್ಕೆ ಕರ್ತನು ಜನರಿಗೆ ತನ್ನ ಕಾರ್ಯ ವಿಧಾನವನ್ನು ತಿಳಿಸಿಕೊಟ್ಟಿದ್ದಾನೆ. ಲೋಕದಲ್ಲಿ ನಡೆಯುವ ಎಲ್ಲಾ ಘಟನೆಗಳ ಬಗ್ಗೆ ಆತನು ಗಮನವಿರಿಸಿದ್ದಾನೆ. ಇಕ್ಕಟ್ಟಿನ ಪರಿಸ್ಥಿತಿ ಉಂಟಾದಾಗ, ಆತನು ತನ್ನನ್ನು ಪ್ರಕಟಿಸಿಕೊಂಡು ಸೈತಾನನ ಯೋಜನೆಗಳನ್ನು ತಡೆ ಹಿಡಿಯಲು ಮಧ್ಯೆ ಪ್ರವೇಶಿಸಿದ್ದಾನೆ. ಕರ್ತನು ತನ್ನ ಇರುವಿಕೆಯು ಹೆಚ್ಚಾಗಿ ಕಂಡುಬರುವಂತೆ ದೇಶಗಳು, ಕುಟುಂಬಗಳು ಮತ್ತು ಜನರಿಗೆ ಸಂಕಟದ ಪರಿಸ್ಥಿತಿ ಬರುವಂತೆ ಅನುವು ಮಾಡುತ್ತಾನೆ. ಇಸ್ರಾಯೇಲ್ಯರಲ್ಲಿ ದೇವರಿದ್ದಾನೆ ಹಾಗೂ ಆತನು ತನ್ನ ಜನರನ್ನು ಪೋಷಿಸಿ ಅವರನ್ನು ಸಮರ್ಥಿಸಿಕೊಂಡು ತನ್ನನ್ನು ಇತರರಿಗೆ ತಿಳಿಯಪಡಿಸುತ್ತಾನೆ (ಲಾಸ್ಟ್ ಡೇ ಈವೆಂಟ್ಸ್, ಪುಟ 152).ಕೊಕಾಘ 87.4

    ಜಗತ್ತಿನಾದ್ಯಂತ ದೇವರಾಜ್ಞೆಯು ಉಲ್ಲಂಘಿಸಲ್ಲಟಾಗ, ಇತರರು ತನ್ನ ಜನರನ್ನು ಸಹಿಸಲಾರದಂತ ಕಡುಸಂಕಟಕ್ಕೆ ಒಳಪಡಿಸಿದಾಗ, ಅದನ್ನು ತಡೆಹಿಡಿಯಲು ದೇವರು ಮಧ್ಯಪ್ರವೇಶ ಮಾಡುವನು, ಆತನ ಜನರ ಮನಃಪೂರ್ವಕವಾದ ಪ್ರಾರ್ಥನೆಗಳು ಉತ್ತರಿಸಲ್ಪಡುವವು. ದೇವರು ಅವರನ್ನು ಪ್ರೀತಿಸುತ್ತಾನೆ ಹಾಗೂ ತನ್ನ ಜನರು ಮನಃಪೂರ್ವಕವಾಗಿ ತಾನೊಬ್ಬನೇ ಅವರ ವಿಮೋಚಕನೆಂದು ತನ್ನ ಮೇಲೆ ಆತುಕೊಳ್ಳಬೇಕೆಂದು ಬಯಸುತ್ತಾನೆ (ರಿವ್ಯೂ ಅಂಡ್ ಹೆರಾಲ್ಡ್ ಜೂನ್ 15, 1897).ಕೊಕಾಘ 87.5

    ಸ್ವಲ್ಪ ಸಮಯದವರೆಗೆ ದುಷ್ಟರು ತನ್ನ ಪರಿಶುದ್ದ ಆಜ್ಞೆಗಳನ್ನು ಕೈಕೊಂಡು ನಡೆಯುವವರ ಮೇಲೆ ಜಯಹೊಂದಲು ಅವರಿಗೆ ದೇವರು ಅನುಮತಿ ಕೊಡುತ್ತಾನೆ. ಸೈತಾನನು ಮಹಾ ಸುಳ್ಳುಗಾರನೂ ಸಹೋದರರ ಮೇಲೆ ಆಪಾದನೆ ಹೊರಿಸುವವನೂ ಹಾಗೂ ಕೊಲೆಗಾರನೆಂಬ ಅವನ ಈ ಗುಣಸ್ವಭಾವವನ್ನು ತೋರಿಸುವಂತೆ ದೇವರು ಅವನಿಗೆ ಅನುಮತಿ ಕೊಡುತ್ತಾನೆ. ಈ ಕಾರಣದಿಂದ ದೇವಜನರ ಅಂತಿಮ ವಿಜಯವು ಸಂಪೂರ್ಣ ಮಹಿಮೆಯಿಂದ ಕೂಡಿದ್ದು ಪರಿಪೂರ್ಣವಾಗಿ ಮಾಡಲ್ಪಡುತ್ತದೆ.ಕೊಕಾಘ 87.6