Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸತ್ಯವೇದ ಅಧ್ಯಯನದ ಅಗತ್ಯ

    ಆತ್ಮೀಕವಾಗಿ ಹೊಸದಾಗಿ ಹುಟ್ಟಿದ ಯಾರೂ ಸಹ, ದೇವರ ವಾಕ್ಯವೆಂಬ ಉಪ್ಪನ್ನು ಪ್ರತಿದಿನವೂ ಅಧ್ಯಯನ ಮಾಡಿ, ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳದಿದ್ದಲ್ಲಿ, ಅದು ತನ್ನ ರುಚಿಯನ್ನು ಕಳೆದುಕೊಂಡು ಸಪ್ಪಗಾಗುವುದು, ಅದರಂತೆಯೇ ನಾವೂ ಸಹ ನಮ್ಮ ರುಚಿಯನ್ನು ಕಳೆದುಕೊಳ್ಳುತ್ತೇವೆ. ದೈವೀಕ ಕೃಪೆಯು ಪ್ರತಿದಿನವೂ ನಮಗೆ ದೊರೆಯಬೇಕು, ಇಲ್ಲದಿದ್ದಲ್ಲಿ ಯಾರೂ ಸಹ ಹೊಸದಾಗಿ ಹುಟ್ಟಿದ ಅನುಭವದಲ್ಲಿ ಇರಲು ಸಾಧ್ಯವಿಲ್ಲ (ಅವರ್ ಹೈ ಕಾಲಿಂಗ್, ಪುಟ 215, 1897).ಕೊಕಾಘ 38.5

    ದೇವರ ವಾಕ್ಯವನ್ನು ಪ್ರತಿದಿನವೂ ಓದಿ, ಅದರಲ್ಲಿರುವ ಜೀವಾಧಾರವಾದ ಸತ್ಯಸಾಕ್ಷಿಯನ್ನು ದೃಢವಾಗಿ ಮನವರಿಕೆ ಮಾಡಿಕೊಳ್ಳಬೇಕು. ಕ್ರಿಸ್ತನು ನಮ್ಮ ಸ್ವಂತ ರಕ್ಷಕನೆಂಬ ನಂಬಿಕೆ ನಮ್ಮಲ್ಲಿರಲಿ. ಆತನು ಹಿಂದೆಯೂ ಹಾಗೂ ಇನ್ನು ಮುಂದೆಯೂ ಯುಗಯುಗಾಂತರಗಳವರೆಗೂ ನಮ್ಮ ಬಂಡೆಯಾಗಿದ್ದಾನೆ (ಎವಾಂಜಲಿಸಮ್, ಪುಟ 362, 1905).ಕೊಕಾಘ 38.6

    ಆಶ್ಚರ್ಯಕರವಾಗಿಯೂ, ದಿಗ್ಭ್ರಮೆ ಹುಟ್ಟಿಸುವಂತೆಯೂ ಲೋಕದಲ್ಲಿ ಶೀಘ್ರದಲ್ಲಿ ಬರಲಿರುವ ಘಟನೆಗಳ ಬಗ್ಗೆ ಕ್ರೈಸ್ತರು ಸಿದ್ಧಗೊಳ್ಳುತ್ತಿರಬೇಕು. ದೇವರ ವಾಕ್ಯವಾದ ಸತ್ಯವೇದವನ್ನು ಶ್ರದ್ದೆಯಿಂದ ಅಧ್ಯಯನ ಮಾಡುವುದರ ಹಾಗೂ ಅದಕ್ಕೆ ಅನುಗುಣವಾಗಿ ಜೀವಿಸುವುದರ ಮೂಲಕ ಅವರು ಸಿದ್ದರಾಗಬೇಕು (ಪ್ರಾಫೆಟ್ಸ್ ಅಂಡ್ ಕಿಂಗ್ಸ್, ಪುಟ 626, 1914). ಬೈಬಲ್ಲಿನ ಸತ್ಯದಿಂದ ತಮ್ಮ ಮನಸ್ಸನ್ನು ಬಲಪಡಿಸಿಕೊಂಡವರನ್ನು ಬಿಟ್ಟು ಬೇರೆ ಯಾರೂ ಸಹ ಮುಂದೆ ಬರುವ ಮಹಾಹೋರಾಟವನ್ನು ಎದುರಿಸಲಾರರು (ಗ್ರೇಟ್ ಕಾಂಟ್ರೊವರ್ಸಿ ಪುಟ 593, 594, 1911),ಕೊಕಾಘ 39.1

    ಸತ್ಯವೇದವನ್ನು ಶ್ರದ್ಧೆ, ಆಸಕ್ತಿಯಿಂದ ಓದುವವರು ಹಾಗೂ ಸತ್ಯದ ಪ್ರೀತಿಯನ್ನು ಹೊಂದಿದವರು ಮಾತ್ರ ಜಗತ್ತನ್ನು ಮರುಳು ಮಾಡುವ ಮಹಾಮೋಸದಿಂದ ರಕ್ಷಿಸಲ್ಪಡುವರು (ಗೇಟ್ ಕಾಂಟ್ರೊವರ್ಸಿ ಪುಟ 625, 1911). ನಮ್ಮ ಜನರಾದ ಅಡ್ರೆಂಟಿಸ್ಟರು ದೇವರ ವಾಣಿಯನ್ನು ತಿಳಿಯಬೇಕಾದ ಅಗತ್ಯವಿದೆ. ಪ್ರಕಟಿಸಲ್ಪಟ್ಟ ಸತ್ಯದ ತತ್ವಗಳ ಕ್ರಮಬದ್ಧ ಜ್ಞಾನವನ್ನು ಅವರು ಹೊಂದಿರಬೇಕು. ಅದು ತಾನೇ ಮುಂದೆ ಲೋಕಕ್ಕೆ ಬರಲಿರುವ ಮಹಾಹಿಂಸೆ ಸಂಕಟಗಳನ್ನು ಎದುರಿಸಲು ಯೋಗ್ಯರನ್ನಾಗಿ ಮಾಡುವುದಲ್ಲದೆ, ತಪ್ಪು ಬೋಧನೆಗಳಿಗೆ ಒಳಗಾಗದಂತೆ ತಡೆಯುತ್ತದೆ (ಟೆಸ್ಟಿಮೊನೀಸ್, ಸಂಪುಟ 5, ಪುಟ 273, 1885).ಕೊಕಾಘ 39.2