Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕುಟುಂಬ ಪ್ರಾರ್ಥನೆ

    ಪ್ರತಿದಿನ ಬೆಳಿಗ್ಗೆ ಹಾಗೂ ಸಾಯಂಕಾಲ ನಿಮ್ಮ ಮಕ್ಕಳೊಂದಿಗೆ ಸೇರಿ ದೇವರ ವಾಕ್ಯವನ್ನು ಓದಿ, ಸ್ತುತಿಗೀತೆಗಳನ್ನು ಹಾಡುತ್ತಾ ಆತನನ್ನು ಆರಾಧಿಸಬೇಕು. ಮಕ್ಕಳು ದೇವರ ಹತ್ತು ಆಜ್ಞೆಗಳನ್ನು ಯಾವಾಗಲೂ ಬಾಯಿಪಾಠ ಮಾಡಿ ಹೇಳುವಂತೆ ಅವರಿಗೆ ಬೋಧಿಸಬೇಕು (ಎವಾಂಜಲಿಸಮ್, ಪುಟ 499, 1904), ಕುಟುಂಬ ಪ್ರಾರ್ಥನೆಯು ಸಂಕ್ಷಿಪ್ತವಾಗಿರಲಿ, ಆದರೆ ಪವಿತ್ರಾತ್ಮನ ಶಕ್ತಿಯಿಂದ ತುಂಬಿರಲಿ, ದೊಡ್ಡ ಅಧ್ಯಾಯ ಓದಿ ಅದನ್ನು ವಿವರಿಸುವುದು ಹಾಗೂ ಉದ್ದವಾದ ಪ್ರಾರ್ಥನೆ ಮಾಡುವುದರಿಂದ ಅಮೂಲ್ಯವಾದ ಈ ಸಮಯವು ಆಯಾಸಕರವಾಗಿರುತ್ತದೆ. ಇದು ಯಾವಾಗ ಮುಗಿಯುತ್ತದೆಂದು ಹೇಳುವಂತಿರಬಾರದು.ಕೊಕಾಘ 49.2

    ಆಸಕ್ತಿದಾಯಕವೂ, ಸುಲಭವಾಗಿ ಅರ್ಥಮಾಡಿಕೊಳ್ಳುವಂತದ್ದು ಆದ ಒಂದು ಭಾಗವನ್ನು ಸತ್ಯವೇದದಿಂದ ತಂದೆಯು ಆರಿಸಿಕೊಳ್ಳಬೇಕು. ಕೆಲವು ವಚನಗಳನ್ನು ಓದಿದರೆ ಸಾಕು, ಅದು ಆ ದಿನಕ್ಕೆ ನಮಗೆ ಸಾಕಷ್ಟು ಆತ್ಮೀಕ ಚೈತನ್ಯ ನೀಡುವುದು. ಮಕ್ಕಳು ಆಸಕ್ತಿಕರವಾದ ಪ್ರಶ್ನೆ ಕೇಳಬಹುದು. ತಮ್ಮ ಅನಿಸಿಕೆ ನೀಡಬಹುದು. ಯಾವುದಾದರೂ ನಡೆದ ಘಟನೆಯನ್ನು ದೃಷ್ಟಾಂತದ ಮೂಲಕ ಸಂಕ್ಷಿಪ್ತವಾಗಿ ಸದಸ್ಯರ ಮುಂದೆ ತರಬಹುದು, ಉತ್ಸಾಹ ಹುಟ್ಟಿಸುವ ಒಂದೆರಡು ಹಾಡುಗಳನ್ನು ಹಾಡಿ ಚಿಕ್ಕ ಹಾಗೂ ಚೊಕ್ಕದಾಗಿ ಪ್ರಾರ್ಥಿಸಬೇಕು. ಪ್ರಾರ್ಥಿಸುವವರು ಎಲ್ಲದಕ್ಕಾಗಿಯೂ ಪ್ರಾರ್ಥಿಸಬಾರದು. ಆದರೆ ತನ್ನ ಅಗತ್ಯವನ್ನು ಸರಳವಾದ ಮಾತುಗಳಿಂದ ಬೇಡಿಕೊಂಡು ಕೃತಜ್ಞತೆಯೊಡನೆ ತಂದೆಯಾದ ದೇವರಿಗೆ ಕೃತಜ್ಞತೆ ಸಲ್ಲಿಸಬೇಕು (ಚೈಲ್ಡ್ ಗೈಡೆನ್ಸ್, ಪುಟಗಳು 521, 521, 1884).ಕೊಕಾಘ 49.3