Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಪ್ರೊಟೆಸ್ಟೆಂಟರು ಮತ್ತು ಕಥೋಲಿಕ್ಕರು ಪರಸ್ಪರ ಒಪ್ಪಿಗೆಯಿಂದ ಕಾರ್ಯಮಾಡುತ್ತಾರೆ

    ಪ್ರೊಟೆಸ್ಟೆಂಟರು ರೋಮನ್ ಕಥೋಲಿಕ್ ಸಭೆಗೆ ಸ್ನೇಹಹಸ್ತ ಚಾಚುತ್ತಾರೆ. ಆಗ ದೇವರ ಸೃಷ್ಟಿಯ ಸ್ಮಾರಕವಾದ ಸಬ್ಬತ್ತಿನ ವಿರುದ್ದವಾಗಿ ಕಾನೂನು ಜಾರಿಗೆ ಬರಲಿದೆ, ಆಗ ದೇವರು ಈ ಲೋಕದಲ್ಲಿ ತನ್ನ ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡುವನು (ಅಡ್ವೆಂಟಿಸ್ಟ್ ಬೈಬಲ್ ವ್ಯಾಖ್ಯಾನ, ಸಂಪುಟ 7, ಪುಟ 910, 1886).ಕೊಕಾಘ 74.3

    ವಿಗ್ರಹಾರಾಧನೆಯ ಆಪಾದನೆಯಿಂದ ರೋಮನ್ ಕಥೋಲಿಕ್ ಸಭೆಯು ಹೇಗೆ ಮುಕ್ತಗೊಳ್ಳುತ್ತದೆಂಬುದನ್ನು ನಾವು ನೋಡಲಾಗದು. ಈ ಧರ್ಮವನ್ನು (ಸಭೆಯನ್ನು ಪ್ರೊಟೆಸ್ಟೆಂಟರು ಬಹಳ ವಿಶ್ವಾಸದಿಂದ ಕಾಣುವರು ಹಾಗೂ ಕಥೋಲಿಕ್ ಸಭೆಯು ಕೊನೆಯಲ್ಲಿ ಅದರೊಂದಿಗೆ ಒಂದಾಗುವುದು. ಆದರೆ ಕಥೋಲಿಕ್ ಸಭೆಯಲ್ಲಿ ಉಂಟಾದ ಬದಲಾವಣೆಯಿಂದ ಈ ಐಕ್ಯತೆ ಉಂಟಾಗುವುದಿಲ್ಲ. ಯಾಕೆಂದರೆ ಅದು ಎಂದಿಗೂ ಬದಲಾಗುವುದಿಲ್ಲ, ಕಥೋಲಿಕ್ ಸಭೆಯು ಎಂದಿಗೂ ತಪ್ಪು ಮಾಡುವುದೇ ಇಲ್ಲವೆಂದು ಹೇಳಿಕೊಳ್ಳುತ್ತದೆ. ಆದರೆ ಬದಲಾವಣೆ ಕಂಡುಬರುವುದು ಪ್ರೊಟೆಸ್ಟೆಂಟ್ ಸಭೆಗಳಲ್ಲಿ... ಇದು ಉದಾರವಾದ ಅಭಿಪ್ರಾಯಗಳನ್ನು ಅಳವಡಿಸಿಕೊಳ್ಳುವುದರಿಂದ, ಕಥೋಲಿಕ್ ಸಭೆಯೊಂದಿಗೆ ಕೈ ಜೋಡಿಸಲಿದೆ (ರಿವ್ಯೂ ಅಂಡ್ ಹೆರಾಲ್ಡ್, ಜೂನ್ 1, 1886).ಕೊಕಾಘ 74.4

    ತಾವು ಪ್ರೊಟೆಸ್ಟೆಂಟರೆಂದು ಹೇಳಿಕೊಳ್ಳುವ ಸಭೆಗಳು ಆಧರ್ಮ ಸ್ವರೂಪನೊಂದಿಗೆ (2 ಥೆಸಲೋನಿಕ 2:4). ಒಂದು ಒಕ್ಕೂಟ ರಚಿಸಿಕೊಳ್ಳುವವು. ಸಭೆ ಮತ್ತು ಲೋಕವು ಧರ್ಮಭ್ರಷ್ಟತೆಯಿಂದ ಸಾಮರಸ್ಯ ಹೊಂದಿರುವವು (ಬೈಬಲ್ ವ್ಯಾಖ್ಯಾನ, ಸಂಪುಟ 7, ಪುಟ 975, 1891). ರೋಮನ್ ಕಥೋಲಿಕ್ ಸಭೆ ತನ್ನ ಪರಮಾಧಿಕಾರ ಹೊಂದಿದ್ದ ಅಂಧಕಾರದ ಯುಗದಲ್ಲಿ (ಕ್ರಿ.ಶ. 7-15ನೇ ಶತಮಾನ) ಹೇಗೆ ದೇವರಾಜ್ಞೆಗಳಿಗೆ ಗೌರವ ನೀಡುತ್ತಿದ್ದವರನ್ನು ಹಿಂಸಪಡಿಸಿತೋ, ಅದೇ ರೀತಿ ಧರ್ಮಭ್ರಷ್ಟತೆ ಹೊಂದಿದ ಪ್ರೊಟೆಸ್ಟೆಂಟ್ ಸಭೆಯು ಈಗ ದೇವರಾಜ್ಞೆಕೈಕೊಳ್ಳುವವರನ್ನು ಹಿಂಸೆಪಡಿಸುವುದು (ಗ್ರೇಟ್ ಕಾಂಟ್ರೊವರ್ಸಿ, ಪುಟ 616, 1911).ಕೊಕಾಘ 74.5