Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಎಲ್ಲರೂ ಸಹ ನಗರಗಳನ್ನು ಬಿಟ್ಟು ಇನ್ನೂ ಹೋಗಲಾಗದು

    ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ಮಕ್ಕಳಿಗೆ ಹಳ್ಳಿಗಾಡಿನಲ್ಲಿ ವಾಸ ಮಾಡಲು ಮನೆಕಟ್ಟುವುದು ತಂದೆತಾಯಿಯರ ಕರ್ತವ್ಯವಾಗಿದೆ. (ಅಡ್ವೆಂಟಿಸ್ಟ್ ಹೋಮ್, 141, 1906). ಸಮಯವು ಹೆಚ್ಚಾಗಿ ಮುಂದುವರಿದಂತೆ ಅಡ್ವೆಂಟಿಸ್ಟರು ನಗರಗಳನ್ನು ಬಿಡಬೇಕು. ತಂದೆತಾಯಿಯರು ಅದರಲ್ಲಿಯೂ ವಿಶೇಷವಾಗಿ ಮಕ್ಕಳಿರುವ ಕುಟುಂಬಗಳು ನಗರವನ್ನು ಬಿಟ್ಟುಹೋಗುವ ಯೋಜನೆ ಹಾಕಿಕೊಳ್ಳಬೇಕೆಂದು ಅನೇಕ ವರ್ಷಗಳವರೆಗೆ ಶ್ರೀಮತಿ ವೈಟಮ್ಮನವರಿಗೆ ದೇವರು ದರ್ಶನದ ಮೂಲಕ ಸಲಹೆ ನೀಡಿದ್ದಾನೆ. ಇಂತಹ ಅವಕಾಶ ದೊರೆಯಲು ಅನೇಕರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾಗಿದೆ. ನಗರಗಳನ್ನು ಬಿಟ್ಟು ಹಳ್ಳಿಗಾಡುಗಳಿಗೆ ಹೋಗಲು ಸಾಧ್ಯವಾಗುವ ತನಕ, ಅವರು ದೇವರ ಸೇವೆ ಮಾಡುವಲ್ಲಿ ಹೆಚ್ಚಾದ ಕ್ರಿಯಾಶೀಲತೆಯಿಂದ ಕೆಲಸ ಮಾಡಬೇಕು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 2, ಪುಟ 360, 1906).ಕೊಕಾಘ 68.2

    ನಮ್ಮ ನಗರಗಳಲ್ಲಿ ಪಾಪವು ಬಹಳ ಹೆಚ್ಚಾಗುತ್ತಿದೆ. ಅನಗತ್ಯವಾಗಿ ನಗರಗಳಲ್ಲಿ ವಾಸ ಮಾಡುವವರು ರಕ್ಷಣೆ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ (ಕಂಟ್ರಿಲಿವಿಂಗ್, ಪುಟ 9, 1907). ನಗರಗಳು ಹಾಗೂ ಪಟ್ಟಣಗಳು ಪಾಪ ಮತ್ತು ನೈತಿಕತೆಯಿಂದ ಭ್ರಷ್ಟಗೊಂಡಿವೆ. ಆದಾಗ್ಯೂ ಪ್ರತಿಯೊಂದು ಸೊದೋಮಿನಲ್ಲಿಯೂ ಲೋಟನಂತ ನೀತಿವಂತರು ಇರುತ್ತಾರೆ (ಟೆಸ್ಟಿಮೊನೀಸ್, ಸಂಪುಟ 6, ಪುಟ 136, 1900).ಕೊಕಾಘ 68.3