Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸಂಪೂರ್ಣವಾಗಿ ಕ್ರಿಸ್ತನಿಗೆ ಒಪ್ಪಿಸಿಕೊಡುವುದು ಅಗತ್ಯವಾಗಿದೆ

    ನಾವು ಸಂಪೂರ್ಣವಾದ ನಂಬಿಕೆ ಹಾಗೂ ತೆರೆದ ಮನಸ್ಸಿನಿಂದ ತನಗೆ ಒಪ್ಪಿಸಿಕೊಡಬೇಕೆಂದು ದೇವರು ಬಯಸುತ್ತಾನೆ. ಇದಕ್ಕಿಂತ ಕಡಿಮೆಯಾದದ್ದನ್ನು ಆತನು ಅಂಗೀಕರಿಸುವುದಿಲ್ಲ. ಉದಾಸೀನರೂ, ಪಾಪಿಗಳೂ ಆದ ಕ್ರೈಸ್ತರು ಎಂದಿಗೂ ಪರಲೋಕಕ್ಕೆ ಹೋಗಲಾರರು. ಯಥಾರ್ಥ ಮನಸ್ಸಿನ ಕ್ರೈಸ್ತರು ಯಾವಾಗಲೂ ಪರಲೋಕದೆಡೆಗೆ ತಮ್ಮ ಗಮನ ಕೇಂದ್ರೀಕರಿಸುತ್ತಾರೆ. ಅಲ್ಲಿ ಅವರು ಕ್ರಿಸ್ತನೊಂದಿಗೆ ಅನ್ಯೂನ್ಯತೆಯಲ್ಲಿ ಜೀವಿಸುವರು. ಅವರ ಚಿತ್ತವು ದೇವರ ಚಿತ್ತದೊಂದಿಗೆ ಸಮ್ಮತಿ ಹೊಂದಿರುವುದು. ತಾವು ಹೆಚ್ಚೆಚ್ಚಾಗಿ ಕ್ರಿಸ್ತನ ಗುಣಸ್ವಭಾವ ಪ್ರತಿಫಲಿಸಬೇಕೆಂಬುದೇ ಅವರ ಉನ್ನತವಾದ ಬಯಕೆಯಾಗಿದೆ (ರಿವ್ಯೂ ಅಂಡ್ ಹೆರಾಲ್ಡ್, ಮೇ 16, 1907)ಕೊಕಾಘ 111.2

    ಪರಿಶುದ್ಧಾತ್ಮನನ್ನು ನಾವು ನಮ್ಮಷ್ಟಕ್ಕೆ ತಕ್ಕಂತೆ ಉಪಯೋಗಿಸಲಾಗದು, ಆತನು ನಮ್ಮನ್ನು ತನ್ನ ಚಿತ್ರಕ್ಕೆ ತಕ್ಕಂತೆ ಉಪಯೋಗಿಸಬೇಕು. ಪರಿಶುದ್ಧಾತ್ಮನ ಮೂಲಕ ದೇವರು ತನ್ನ ಜನರಲ್ಲಿ ತನ್ನ ಸುಚಿತ್ರವನ್ನು ನೆರವೇರಿಸಬೇಕೆಂದು.., ಉದ್ದೇಶವನ್ನು ಉಂಟು ಮಾಡುವವನಾಗಿದ್ದಾನೆ’ (ಫಿಲಿಪ್ಪಿ 2:13). ಆದರೆ ಅನೇಕರು ಆತನ ಸುಚಿತ್ರಕ್ಕೆ ತಮ್ಮನ್ನು ಒಪ್ಪಿಸಿಕೊಡುವುದಿಲ್ಲ. ಅವರು ತಮ್ಮಿಷ್ಟದಂತೆ ನಡೆಯಲು ಬಯಸುತ್ತಾರೆ. ಈ ಕಾರಣದಿಂದಲೇ ಅವರು ಪರಲೋಕದ ವರಗಳನ್ನು ಪಡೆದುಕೊಳ್ಳುವುದಿಲ್ಲ. ಪಶ್ಚಾತಾಪಪಟ್ಟು ಕುಗ್ಗಿದ ಮನಸ್ಸಿನಿಂದ ದೇವರಲ್ಲಿ ಆತುಕೊಂಡು ಆತನ ಕೃಪೆ ಹಾಗೂ ಮಾರ್ಗದರ್ಶನದಲ್ಲಿ ನಡೆಯುವವರಿಗೆ ಮಾತ್ರ ಪವಿತ್ರಾತ್ಮನು ಕೊಡಲ್ಪಡುವನು (ದಿ ಡಿಸೈರ್ ಆಫ್ ಏಜಸ್‌, 672, 1898).ಕೊಕಾಘ 111.3