Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕ್ರಿಸ್ತನ ಬರೋಣಕ್ಕೆ ಸಮಯ ನಿಗದಿಪಡಿಸುವುದು ಅಪನಂಬಿಕೆಗೆ ಕಾರಣ

    ಕ್ರಿಸ್ತನು ಬರುತ್ತಾನೆಂದು ನಿಗದಿಪಡಿಸಿದ ಎಲ್ಲಾ ದಿನಗಳು ಹಾಗೂ ಸಮಯಗಳು ವಿಫಲವಾಗಿರುವುದರಿಂದ ಆತನ ಬರೋಣದ ಬಗ್ಗೆ ಈಗ ಜಗತ್ತಿನಲ್ಲಿ ಅಪನಂಬಿಕೆ ಹೆಚ್ಚಾಗಿದೆ. ಸಮಯವನ್ನು ನಿಗದಿಪಡಿಸುವವರನ್ನು ಜನರು ತಿರಸ್ಕಾರದಿಂದ ನೋಡುತ್ತಿದ್ದಾರೆ. ಜನರು ಈ ರೀತಿಯಲ್ಲಿ ಮೋಸ ಹೋಗಿರುವುದರಿಂದ ಎಲ್ಲವುಗಳ ಅಂತ್ಯವು ಸಮೀಪವಾಗಿದೆ ಎಂಬ ದೇವರ ವಾಕ್ಯದ ಸತ್ಯದಲ್ಲಿ ಅಪನಂಬಿಕೆ ವ್ಯಕ್ತಪಡಿಸುತ್ತಾರೆ (ಟೆಸ್ಟಿಮೋನೀಸ್, ಸಂಪುಟ 4, ಪುಟ 307 (1879).ಕೊಕಾಘ 19.3

    ಅನಂತರ ಜನರಲ್ ಕಾನ್ಫರೆನ್ಸ್ ಅಧ್ಯಕ್ಷರಾದ ಇ.ಪಿ. ಡ್ಯಾನಿಯೇಲ್ಸ್ ರವರು ಕ್ರಿಸ್ತನು ಐದು ವರ್ಷಗಳಲ್ಲಿ ಬರುತ್ತಾನೆಂದು ಹೇಳುತ್ತಿದ್ದಾರೆಂದು ಶ್ರೀಮತಿ ವೈಟಮ್ಮನವರಿಗೆ ತಿಳಿಯಿತು. ನಾವು ಸಮಯ ನಿಗದಿ ಮಾಡುವವರು ಎಂಬ ಭಾವನೆ ಇತರರಲ್ಲಿ ಬರಬಾರದೆಂದು ಅವರು ನಿರೀಕ್ಷೆ ಹೊಂದಿದ್ದರು. ಅಂತಹ ಯಾವುದೇ ಹೇಳಿಕೆ ಕೊಡಬಾರದು. ಇದರಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ. ಇಂತಹ ಮಾತುಗಳಿಂದ ಪುನರುಜ್ಜಿವನ ಉಂಟಾಗುತ್ತದೆಂದು ಪ್ರಯತ್ನಪಡಬಾರದು, ಮಾತಾಡುವ ಪ್ರತಿಯೊಂದು ವಾಕ್ಯದಲ್ಲಿ ಎಚ್ಚರಿಕೆಯಿರಬೇಕು, ಮತಾಂಧರು ಇಂತಹ ವಿಷಯಗಳನ್ನು ಜನರಲ್ಲಿ ಭಾವೋದ್ವೇಗ ಉಂಟಾಗುವುದಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಇದರಿಂದ ಪವಿತ್ರಾತ್ಮನನ್ನು ದುಃಖಪಡಿಸುತ್ತೇವೆ’ ಎಂದು ಶ್ರೀಮತಿ ವೈಟಮ್ಮನವರು ಇ.ಪಿ. ಡ್ಯಾನಿಯೇಲ್‌ರವರು ಕ್ರಿಸ್ತನ ಬರೋಣಕ್ಕೆ ಸಮಯ ನಿಗದಿ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದರು. ಜನರ ಭಾವನೆಗಳನ್ನು ನಾವು ಉದ್ರೇಕಪಡಿಸಬಾರದು. ಸೈತಾನನು ತನ್ನೆಲ್ಲಾ ಶಕ್ತಿಮೀರಿ ತನ್ನೆಲ್ಲಾ ಕುತಂತ್ರಗಳ ಮೂಲಕ ಹಾನಿಯುಂಟು ಮಾಡುವ ಸಾಮರ್ಥ್ಯ ಹೊಂದಿರುವುದರಿಂದ, ಎಲ್ಲಾ ವಿಷಯಗಳಲ್ಲಿಯೂ ನಾವು ಎಚ್ಚರಿಕೆಯಿಂದಿರಬೇಕು. ತಪ್ಪಾದ ಆಧಾರದಲ್ಲಿ ಭಾವನೆಗಳನ್ನು ಕೆರಳಿಸುವ ವಿಷಯಗಳ ಬಗ್ಗೆ ನಾವು ಎಚ್ಚರಿಕೆಯಿಂದಿರಬೇಕು. ಯಾಕೆಂದರೆ ಪ್ರತಿಕ್ರಿಯೆಯು ಖಂಡಿತವಾಗಿಯೂ ಉಂಟಾಗುತ್ತದೆ.ಕೊಕಾಘ 19.4

    ಸಭೆಯಲ್ಲಿ ದೇವರಿಂದ ಪ್ರೇರೇಪಿಸಲಟ್ಟಿದೇವೆಂದು ಹೇಳಿಕೊಳ್ಳುವ ಕೆಲವರು ತಪ್ಪಾದ ಹಾಗೂ ಮತಾಂಧ ಕಾರ್ಯಗಳನ್ನು ಮಾಡುತ್ತಾರೆ. ಅವರು ಕಳುಹಿಸುವುದಕ್ಕೆ ಮೊದಲೇ ಓಡಲಿಕ್ಕೆ ಆರಂಭಿಸುವಂತವರು (ಬಹಳ ಆತುರಗಾರರು). ಅವರು ಇನ್ನೂ ನೆರವೇರದಿರುವ ಪ್ರವಾದನೆಗಳು ಇಂತಹ ತಾರೀಕು, ದಿನಗಳಲ್ಲಿ ನೆರವೇರುತ್ತನೆಂದು ಗೊತ್ತು ಮಾಡುತ್ತಾರೆ. ಅವು ವಿಫಲವಾಗುವುದರಿಂದ ವಿಶ್ವಾಸಿಗಳಲ್ಲಿ ಗಲಿಬಿಲಿ ಹಾಗೂ ಅಪನಂಬಿಕೆ ಉಂಟಾಗುತ್ತದೆ. ಇದರಿಂದ ಸೈತಾನನಿಗೆ ತೃಪ್ತಿಯಾಗುತ್ತದೆ.ಕೊಕಾಘ 20.1