Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಮೇರಿಕಾ ದೇಶವು ಭಾನುವಾರಾಚರಣೆಯ ಶಾಸನ ಜಾರಿಗೆ ತರುತ್ತದೆ

    ಅಮೇರಿಕಾ ದೇಶವು ಭಾನುವಾರಾಚರಣೆಯನ್ನು ಕಡ್ಡಾಯವಾಗಿ ಶಾಸನವನ್ನಾಗಿ ಮಾಡಲು ತನ್ನೆಲ್ಲಾ ಸಿದ್ದಾಂತಗಳನ್ನು ತ್ಯಜಿಸಿದಾಗ, ಪ್ರೊಟೆಸ್ಟೆಂಟರು ಈ ಕಾರ್ಯದಲ್ಲಿ ಕಥೋಲಿಕ್ ಸಭೆಯೊಂದಿಗೆ ಕೈಜೋಡಿಸುವರು (ಟೆಸ್ಟಿಮೊನೀಸ್, ಸಂಪುಟ 5, ಪುಟ 712, 1889). ಪ್ರೊಟೆಸೆಂಟರು ತಮ್ಮೆಲ್ಲಾ ಶಕ್ತಿ ಹಾಗೂ ಪ್ರಭಾವವನ್ನು ಕಥೋಲಿಕ್ ಸಭೆಗೆ ನೀಡುತ್ತಾರೆ. ಸುಳ್ಳಾದ ಸಬ್ಬತ್ತನ್ನು ಜಾರಿಗೆ ತರುವಂತೆ ಒಂದು ರಾಷ್ಟ್ರೀಯ ಕಾನೂನು ಜಾರಿಗೆ ತಂದು, ರೋಮನ್ ಕಥೋಲಿಕ್ ಸಭೆಯ ಧರ್ಮಭ್ರಷ್ಟು ನಂಬಿಕೆಗೆ ಜೀವ ಮತ್ತು ಚೈತನ್ಯವನ್ನು ಪ್ರೊಟೆಸೆಂಟರು ಕೊಡುತ್ತಾರೆ. ಇದರಿಂದ ಆ ಸಭೆಯ ಸರ್ವಾಧಿಕಾರ ಮತ್ತು ಮನಸ್ಸಾಕ್ಷಿಯನ್ನು ತುಳಿಯುವ ದಬ್ಬಾಳಿಕೆಯನ್ನು ಉಜ್ಜೀವಗೊಳಿಸಲಿದೆ.ಕೊಕಾಘ 73.2

    ಶೀಘ್ರದಲ್ಲಿ ಅಥವಾ ಅನಂತರವೋ ಭಾನುವಾರಾಚರಣೆಯ ಕಡ್ಡಾಯ ಶಾಸನವು ಜಾರಿಗೆ ಬರಲಿದೆ (ರಿವ್ಯೂ ಅಂಡ್ ಹೆರಾಲ್ಡ್, ಫೆಬ್ರವರಿ 16, 1905). ಅತಿ ಶೀಘ್ರದಲ್ಲಿ ಈ ಶಾಸನವು ಜಾರಿಗೆ ಬರಲಿದೆ. ಅಧಿಕಾರ ಸ್ಥಾನದಲ್ಲಿರುವ ವ್ಯಕ್ತಿಗಳು ದೇವರಾಜ್ಞೆಗಳನ್ನು ಕೈಕೊಂಡು ನಡೆಯುವ ಸ್ವಲ್ಪವಾಗಿ ಉಳಿದಿರುವವರ ವಿರುದ್ಧವಾಗಿ ತೀವ ದ್ವೇಷ ವ್ಯಕ್ತಪಡಿಸುವರು (1909).ಕೊಕಾಘ 73.3

    ಟಗರಿಗಿರುವಂತೆ ಎರಡು ಕೊಂಬುಗಳುಳ್ಳ ಮೃಗವು ,’… ಮರಣಕರವಾದ ಗಾಯವಾಸಿಯಾದ ಮೊದಲನೆ ಮೃಗಕ್ಕೆ (ಅಂದರೆ ರೋಮನ್ ಕಥೋಲಿಕ್ ಸಭೆಗೆ) ನಮಸ್ಕರಿಸುವಂತೆ ಮಾಡುತ್ತದೆಂದು ಪ್ರಕಟನೆ 13:11-12ನೇ ವಚನಗಳು ತಿಳಿಸುತ್ತವೆ. ಅಮೇರಿಕಾ ದೇಶವು ಭಾನುವಾರವು ದೇವಾರಾಧನೆಯ ದಿನವೆಂದು ಕಡ್ಡಾಯವೆಂದು ತಿಳಿಸುವ ಶಾಸನವನ್ನು ಜಾರಿಗೆ ತಂದಾಗ ಈ ಪ್ರವಾದನೆಯು ನೆರವೇರುತ್ತದೆ. ಇದು ತನ್ನ ಪರಮಾಧಿಕಾರವನ್ನು ಅಮೇರಿಕಾ ದೇಶವು ಒಪ್ಪಿಕೊಂಡ ಒಂದು ವಿಶೇಷ ಮಾನ್ಯತೆಯೆಂದು ಕಥೋಲಿಕ್ ಸಭೆಯು ಹೇಳಿಕೊಳ್ಳುತ್ತದೆ.ಕೊಕಾಘ 73.4

    ರಾಜಕೀಯ ಭ್ರಷ್ಟಾಚಾರವು ನ್ಯಾಯದ ಮೇಲಿನ ಪ್ರೀತಿ ಹಾಗೂ ಸತ್ಯದ ಮೇಲಿನ ಗೌರವವನ್ನು ನಾಶಮಾಡುತ್ತದೆ. ಪ್ರಜಾಪ್ರಭುತ್ವ ಸರ್ಕಾರವಿರುವ ಹಾಗೂ ಧಾರ್ಮಿಕ ಸ್ವಾತಂತ್ರವಿರುವ ಅಮೇರಿಕಾದಲ್ಲಿ ಆಡಳಿತಗಾರರು ಹಾಗೂ ಪಾರ್ಲಿಮೆಂಟ್ ಸದಸ್ಯರು ಸಾರ್ವಜನಿಕರ ಪ್ರೀತಿ ಗಳಿಸಿಕೊಳ್ಳುವ ಸಲುವಾಗಿ, ಭಾನುವಾರಾಚರಣೆಯನ್ನು ಕಡ್ಡಾಯವಾಗಿ ಜಾರಿಗೆ ತರುವ ಶಾಸನಕ್ಕೆ ಅನುಮೋದನೆ ನೀಡುವರು (ಗ್ರೇಟ್ ಕಾಂಟ್ರೊವರ್ಸಿ ಪುಟಗಳು 578, 579, 592, 1911).ಕೊಕಾಘ 73.5