Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಶಿಶುಗಳು ಮತ್ತು ದೈಹಿಕವಾಗಿ ದುರ್ಬಲರಾದವರ ರಕ್ಷಣೆ

    ಶಿಶುಗಳು ಸಮಾಧಿಯಿಂದ ಅಮರತ್ವ ಧರಿಸಿಕೊಂಡು ಪುನರುತ್ಥಾನ ಹೊಂದಿದಾಗ, ಅವರನ್ನು ತಕ್ಷಣವೇ ಅವರ ತಾಯಂದಿರ ಕೈಗಳಿಗೆ ಕೊಡಲಾಗುವುದು. ಅವರು ಎಂದೆಂದಿಗೂ ಅಗಲುವುದೇ ಇಲ್ಲ. ಆದರೆ ಅನೇಕ ಶಿಶುಗಳ ತಾಯಂದಿರು ಪರಲೋಕದಲ್ಲಿರುವುದಿಲ್ಲ. ಅಂತವರನ್ನು ದೇವದೂತರು ಸ್ವೀಕರಿಸಿ ಜೀವವೃಕ್ಷದ ಬಳಿಗೆ ಕರೆದುಕೊಂಡು ಹೋಗುವರು (ಸೆಲೆಕ್ಟಡ್ ಮೆಸೇಜಸ್ ಸಂಪುಟ 2, ಪುಟ 260).ಕೊಕಾಘ 172.2

    ಎಲ್ಲರ ಗುಣಸ್ವಭಾವಗಳು ಶೋಧನೆಗಳ ಮೂಲಕ ಪರೀಕ್ಷಿಸಲ್ಪಡಬೇಕು. ಆದರೆ ವಿಶ್ವಾಸಿಗಳಾದ ತಂದೆತಾಯಿಯರ ಚಿಕ್ಕಮಕ್ಕಳು ಇಂತಹ ಶೋಧನೆಗೆ ಒಳಗಾಗಿರುವುದಿಲ್ಲ- ವಾದ್ದರಿಂದ ಅವರು ರಕ್ಷಿಸಲ್ಪಡುವರೇ? ಎಂದು ಅನೇಕರು ಶ್ರೀಮತಿ ವೈಟಮ್ಮನವರನ್ನು ಪ್ರಶ್ನಿಸಿದರು. ಅದಕ್ಕೆ ವಿಶ್ವಾಸಿಗಳಾದ ತಂದೆತಾಯಂದಿರ ನಂಬಿಕೆಯು ಈ ಶಿಶುಗಳಿಗೆ ರಕ್ಷಣೆ ನೀಡುತ್ತದೆಂದು ಶ್ರೀಮತಿ ವೈಟಮ್ಮನವರು ಉತ್ತರಿಸಿದರು.ಕೊಕಾಘ 172.3

    ಕ್ರಿಸ್ತನನ್ನು ನಂಬದಿರುವ ಪೋಷಕರ ಎಲ್ಲಾ ಮಕ್ಕಳು ರಕ್ಷಣೆ ಹೊಂದುತ್ತಾರೆಯೇ? ಎಂಬ ಪ್ರಶ್ನೆಗೆ ಶ್ರೀಮತಿ ಮೋಟಮ್ಮನವರು ಈ ವಿಷಯಕ್ಕೆ ಸಂಬಂಧಪಟ್ಟಂತೆ ದೇವರು ತನ್ನ ಉದ್ದೇಶವನ್ನು ತನಗೆ ತಿಳಿಯಪಡಿಸಿಲ್ಲವಾದ್ದರಿಂದ, ಅದರ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ಇದನ್ನು ದೇವರಿಗೆ ಬಿಟ್ಟು, ಆತನ ವಾಕ್ಯದಲ್ಲಿ ಸರಳವಾಗಿ ತಿಳಿಸಿರುವ ಸಂಗತಿಗಳನ್ನು ಗಮನಿಸೋಣ ಎಂದು ಶ್ರೀಮತಿ ವೈಟಮ್ಮನವರು ತಿಳಿಸಿದ್ದಾರೆ (ಸೆಲೆಕ್ಟಡ್ ಮೆಸೇಜಸ್ ಸಂಪುಟ 3, ಪುಟಗಳು 313-315).ಕೊಕಾಘ 172.4