Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ರಾಷ್ಟ್ರಗಳಲ್ಲಿ ಸಂಘರ್ಷ ಉಂಟಾಗುವುದು

    ದೇವರ ಮಕ್ಕಳ ಹಣೆಗಳಲ್ಲಿ ಮುದ್ರೆ ಹಾಕಲ್ಪಡುವ ತನಕ ಬಲಿಷ್ಠರಾದ ನಾಲ್ಕು ಮಂದಿ ದೇವದೂತರು ಈ ಲೋಕದ ಶಕ್ತಿಗಳನ್ನು ತಡೆಹಿಡಿದಿರುವರು. ಜಗತ್ತಿನ ರಾಷ್ಟ್ರಗಳು ಯುದ್ಧ ಮಾಡಲು ಸಿದ್ಧವಾಗಿ ಕಾದುಕೊಂಡಿವೆ. ಈ ಹತೋಟಿಯು ತೆಗೆಯಲ್ಪಟ್ಟಾಗ, ಮಹಾಸಂಕಟದ ಸಮಯವು ಬರುವುದು. ಅತ್ಯಂತ ಭಯಾನಕವೂ, ಮಾರಣಾಂತಿಕವೂ ಆದ ಯುದ್ಧ ಶಸ್ತ್ರಾಸ್ತ್ರಗಳನ್ನು ದೇಶಗಳು ಕಂಡುಹಿಡಿಯುವವು. ಸರಕು ಸಾಮಗ್ರಿಗಳು ತುಂಬಿರುವ ಹಡಗುಗಳು ಆಳವಾದ ಕಡಲಿನಲ್ಲಿ ಮುಳುಗುವವು. ಸತ್ಯದ ಆತ್ಮನು ಇಲ್ಲದಿರುವವರೆಲ್ಲರೂ, ಸೈತಾನನ ಏಜೆಂಟರ ನಾಯಕತ್ವದಲ್ಲಿ ಒಟ್ಟುಗೂಡುವರು. ಆದರೆ ಹರ್ಮೆಗೆದ್ದೋನ್ ಎಂಬ ಮಹಾ ಹೋರಾಟದ ಸಮಯ ಬರುವ ತನಕ ಅವರೆಲ್ಲರೂ ದೇವರ ಹತೋಟಿಯಲ್ಲಿರುವರು (ಬೈಬಲ್ ವ್ಯಾಖ್ಯಾನ, ಸಂಪುಟ 7, ಪುಟ 967).ಕೊಕಾಘ 139.3