Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೇವರು ಒದಗಿಸುವನು

    ಸಂಕಟದ ಸಮಯದಲ್ಲಿ ನಮ್ಮ ತಾತ್ಕಾಲಿಕ ಅಗತ್ಯಗಳಿಗಾಗಿ ಯಾವುದೇ ಪೂರ್ವ ಸಿದ್ಧತೆ ಮಾಡಿಕೊಳ್ಳುವುದು ಸತ್ಯವೇದಕ್ಕೆ ವಿರುದ್ಧವಾಗಿದೆ ಎಂದು ದೇವರು ಶ್ರೀಮತಿ ವೈಟಮ್ಮನವರಿಗೆ ಪದೇ ಪದೇ ದರ್ಶನದಲ್ಲಿ ತೋರಿಸಿದ್ದಾನೆ. ದೇಶದಲ್ಲಿ ಕೊಲೆ, ಸುಲಿಗೆ, ಬರಗಾಲ, ಅಂಟುರೋಗ ಮುಂತಾದವು ಇರುವಂತ ಸಂಕಟದ ಸಮಯದಲ್ಲಿ ದೇವರ ಮಕ್ಕಳು ಮನೆಯಲ್ಲಾಗಲಿ ಇಲ್ಲವೆ ಹೊಲಗದ್ದೆಗಳಲ್ಲಾಗಲಿ ಆಹಾರಧಾನ್ಯ ಸಂಗ್ರಹಿಸಿಟ್ಟುಕೊಂಡಲ್ಲಿ, ಜನರು ಬಲಾತ್ಕಾರದಿಂದ ಅದನ್ನು ಮನೆಗಳಿಂದ ದರೋಡೆ ಮಾಡಿ ತೆಗೆದುಕೊಳ್ಳುವರು ಹಾಗೂ ಅಪರಿಚಿತರು ಹೊಲಗದ್ದೆಗಳ ಬೆಳೆಗಳನ್ನು ಕೊಯ್ದುಕೊಂಡು ಹೋಗುವರು.ಕೊಕಾಘ 155.2

    ನಾವು ದೇವರ ಮೇಲೆ ಸಂಪೂರ್ಣ ಭರವಸೆ ಇಡಬೇಕಾದ ಸಮಯವದು ಮತ್ತು ಆತನು ನಮ್ಮನ್ನು ಪೋಷಿಸುತ್ತಾನೆ. ಅಂತಹ ಸಂದರ್ಭದಲ್ಲಿ ದೇವರ ಮಕ್ಕಳಿಗೆ ಅನ್ನ ನೀರು ನಿಸ್ಸಂಶಯವಾಗಿ ದೊರಕುವುದು ಹಾಗೂ ನಾವು ಹಸಿವೆಯಿಂದ ಬಾಧೆಪಡುವುದಿಲ್ಲ. ಯಾಕೆಂದರೆ ದೇವರು ಅರಣ್ಯದಲ್ಲಿಯೂ ನಮಗೆ ನೀರು, ಆಹಾರ ಕೊಡಲು ಸಮರ್ಥನಾಗಿದ್ದಾನೆ. ಅಗತ್ಯ ಬಿದ್ದಲ್ಲಿ ಪ್ರವಾದಿಯಾದ ಎಲೀಯನಿಗೆ ಕೊಟ್ಟಂತೆ ಕಾಗೆಗಳ ಮೂಲಕ ನಮಗೆ ಆಹಾರ ಕೊಡುತ್ತಾನೆ ಅಥವಾ ಇಸ್ರಾಯೇಲ್ಯರಿಗೆ ಕೊಟ್ಟಂತೆ ಆಕಾಶದಿಂದ ಮನ್ನ ಸುರಿಸುತ್ತಾನೆ (ಅರ್ಲಿ ರೈಟಿಂಗ್ಸ್, 56).ಕೊಕಾಘ 155.3

    ಮುಂದೆ ಬರಲಿರುವ ಸಂಕಟದ ಸಮಯದಲ್ಲಿ, ದೇವರ ಮಕ್ಕಳು ರೊಟ್ಟಿ ತಿಂದು ನೀರು ಕುಡಿಯುವ ಸಂದರ್ಭ ಒದಗಿ ಬರಲಿದೆ. ಸಂಕಟದ ಸಮಯದಲ್ಲಿ ಯಾರೂ ಸಹ ದುಡಿಯುವುದಿಲ್ಲ, ಅವರ ಸಂಕಟವು ಮಾನಸಿಕವಾಗಿರುತ್ತದೆ ಮತ್ತು ದೇವರು ಅವರಿಗೆ ಆಹಾರ ಒದಗಿಸುವನು. ಆ ಸಮಯದಲ್ಲಿ ದೇವಜನರು ಸ್ವಾರ್ಥವನ್ನು ಬಿಟ್ಟು, ಬದುವುದಕ್ಕಾಗಿ ಮಾತ್ರ ಹಿತಮಿತವಾಗಿ ತಿನ್ನಬೇಕಾಗಿರುತ್ತದೆ. ಆದರೆ ದೇವರು ಅಂತಹ ಸಂದರ್ಭಕ್ಕಾಗಿ ನಮ್ಮನ್ನು ಸಿದ್ಧಗೊಳಿಸುತ್ತಾನೆ. ದಿಗಿಲು ಹುಟ್ಟಿಸುವ ಅಂತಹ ಸಮಯವು ನಮ್ಮ ಅಗತ್ಯಗಳನ್ನು ಪೂರೈಸಿ ನಮ್ಮನ್ನು ಬಲಪಡಿಸಲು ದೇವರಿಗೆ ದೊರೆತ ಅವಕಾಶವಾಗಿದೆ (ಟೆಸ್ಟಿಮೊನೀಸ್‌ ಸಂಪುಟ 1, ಪುಟ 206).ಕೊಕಾಘ 155.4

    ಮಹಾಸಂಕಟದ ಸಮಯದಲ್ಲಿ ದೇವರಾಜ್ಞೆ ಕೈಕೊಂಡು ನಡೆಯುವ ಆತನ ಉಳಿದ ಜನರಿಗೆ ಆಹಾರ ಮತ್ತು ನೀರು ಮಾತ್ರ ದೊರೆಯುತ್ತದೆಂದು ವಾಗ್ದಾನ ಮಾಡಲಾಗಿದೆ (ದಿ ಸ್ಟೋರಿ ಆಫ್ ರಿಡೆಂಪ್ಟನ್, 129). ಕ್ರಿಸ್ತನ ಬರುವುದಕ್ಕೆ ಸ್ವಲ್ಪ ಸಮಯಕ್ಕೆ ಮೊದಲು ಬರುವ ಸಂಕಟದ ಸಮಯದಲ್ಲಿ ಪರಲೋಕದ ದೇವದೂತರು ನೀತಿವಂತರನ್ನು ಪೋಷಿಸಿ ರಕ್ಷಿಸುವರು (ಪೇಟ್ರಿಯಾರ್ಕ್ಸ್ ಅಂಡ್ ಪ್ರಾಫೆಟ್ಸ್, 256).ಕೊಕಾಘ 155.5