Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸಾಗರದ ಆಳದಿಂದ, ಪರ್ವತಗಳಿಂದ ಹಾಗೂ ಗಣಿಗಳಿಂದ

    ನಂಬಿಗಸ್ತರಾದವರನ್ನು ತನ್ನ ಬಳಿಗೆ ಸೇರಿಸಿಕೊಳ್ಳಲು ಕ್ರಿಸ್ತನು ಎರಡನೇ ಸಾರಿ ಬರುವಾಗ, ಕೊನೆಯ ತುತ್ತೂರಿಯ ಶಬ್ದ ಕೇಳಿಬರುವುದು. ಆಗ ಸಮಸ್ತ ವಿಶ್ವವೇ ಉನ್ನತವಾದ ಪರ್ವತಗಳಿಂದ, ಆಳವಾದ ಗಣಿಗಳವರೆಗೆ — ಕ್ರಿಸ್ತನ ಶಬ್ದವನ್ನು ಕೇಳುವುದು, ಸತ್ತಿರುವ ನೀತಿವಂತರು ಕೊನೆಯ ತುತ್ತೂರಿಯ ಶಬ್ದ ಕೇಳಿ ತಮ್ಮ ಸಮಾಧಿಗಳಿಂದ ಎದ್ದುಬಂದು, ಅಮರತ್ವ ಧರಿಸಿಕೊಂಡು ತಮ್ಮ ಕರ್ತನನ್ನು ಸಂಧಿಸುವರು (ಬೈಬಲ್ ವ್ಯಾಖ್ಯಾನ, ಸಂಪುಟ 7, ಪುಟ 909).ಕೊಕಾಘ 163.1

    ನೀತಿವಂತರ ಪುನರುತ್ಥಾನವು ನನಗೆ ಆನಂದ ಉಂಟು ಮಾಡುತ್ತದೆ. ಅವರು ಜಗತ್ತಿನ ಎಲ್ಲಾ ಕಡೆಗಳಿಂದ, ಬಂಡೆಗಳ ಗುಹೆಗಳಿಂದ, ನೆಲಮಾಳಿಗೆಯಿಂದ, ಸಮುದ್ರದ ತಳದಿಂದ ಎದ್ದುಬರುತ್ತಾರೆ. ಒಬ್ಬರೂ ಸಹ ನಿರ್ಲಕ್ಷಿಸಲ್ಪಡುವುದಿಲ್ಲ. ಪ್ರತಿಯೊಬ್ಬರೂ ಆತನ ಸ್ವರವನ್ನು ಕೇಳುವರು. ಆಗ ಅವರು ಜಯಘೋಷಮಾಡುತ್ತಾ ಎದ್ದು ಪುನರುತ್ಥಾನಗೊಳ್ಳುವರು.ಕೊಕಾಘ 163.2