Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ರಾಷ್ಟ್ರೀಯ ಮತಭ್ರಷ್ಟತೆಯಿಂದ ರಾಷ್ಟ್ರೀಯ ನಾಶ ಉಂಟಾಗುವುದು

    ಜನರ ಧಾರ್ಮಿಕ ಹಕ್ಕುಗಳಿಗೆ ಸಂಬಂಧಪಟ್ಟಂತೆ ಭಾನುವಾರಾಚರಣೆಯನ್ನು ಜಾರಿಗೆ ತರಬೇಕೆಂದು ಅಮೆರಿಕಾ ದೇಶದ ಸರ್ಕಾರವು ಶಾಸನವನ್ನು ಅನುಮೋದಿಸಿ, ಏಳನೆ ದಿನವನ್ನು ಸಬ್ಬತ್ತೆಂದು ಪರಿಶುದ್ಧವಾಗಿ ಕೈಕೊಳ್ಳುವವರ ವಿರುದ್ಧವಾಗಿ ದಬ್ಬಾಳಿಕೆ ನಡೆಸುತ್ತದೆ. ಆಗ ದೇವರಾಜ್ಞೆಗಳು ಅಮೇರಿಕಾದಲ್ಲಿ ನಿರರ್ಥಕ ಮಾಡಲ್ಪಟ್ಟು ರಾಷ್ಟ್ರೀಯ ಮತಭ್ರಷ್ಟತೆ ಉಂಟಾಗುವುದು. ಅದರೊಂದಿಗೆ ದೇಶವು ಹಾಳಾಗುವುದು (ಬೈಬಲ್ ವ್ಯಾಖ್ಯಾನ, ಸಂಪುಟ 7, ಪುಟ 977, 1888), ಅಮೆರಿಕಾ ದೇಶವು ಸಂಪೂರ್ಣವಾಗಿ ಮತಭ್ರಷ್ಟತೆ ಹೊಂದಿ, ಸೈತಾನನ ನಿಯಮಗಳಿಗೆ ಅನುಸಾರವಾಗಿ ನಡೆಯುವ ಆಡಳಿತಗಾರರು ಹಾಗೂ ನಾಯಕರು ಅಧರ್ಮಸ್ವರೂಪನ ಪರವಾಗಿ ನಿಲ್ಲುವರು. ಆಗ ಅಮೇರಿಕಾದ ದೋಷಾಪರಾಧವು ಸಂಪೂರ್ಣವಾಗುತ್ತದೆ. ರಾಷ್ಟ್ರೀಯ ಮತಭ್ರಷ್ಟತೆಯು, ರಾಷ್ಟ್ರೀಯ ನಾಶಕ್ಕೆ ಗುರುತಾಗಿದೆ (ಸೆಲೆಕ್ಟೆಡ್ ಮೆಸೇಜಸ್ ಸಂಪುಟ 2, ಪುಟ 373, 1891).ಕೊಕಾಘ 76.5

    ರೋಮನ್ ಕಥೋಲಿಕ್ ಸಭೆಯ ಸಿದ್ದಾಂತಗಳನ್ನು ಸರ್ಕಾರವು ಅನುಸರಿಸಿ ರಕ್ಷಿಸುತ್ತದೆ. ಈ ರೀತಿ ಅಮೆರಿಕಾ ದೇಶದಲ್ಲಿ ರಾಷ್ಟ್ರೀಯ ಧರ್ಮಿಕ ಮತಭ್ರಷ್ಟತೆಯು ಉಂಟಾದಾಗ ಅದರೊಂದಿಗೆ ಶೀಘ್ರದಲ್ಲಿಯೇ ದೇಶವೂ ಸಹ ನಾಶವಾಗುವುದು (ರಿವ್ಯೂ ಅಂಡ್ ಹೆರಾಲ್ಡ್, ಜೂನ್ 15, 1897).ಕೊಕಾಘ 76.6

    ಪ್ರೊಟೆಸ್ಟೆಂಟ್ ಸಭೆಗಳ ಪೂರ್ವಿಕರು ರೋಮನ್ ಕಥೋಲಿಕ್ ಸಭೆಯನ್ನು ವಿರೋಧಿಸಿದ ಕಾರಣದಿಂದ ತೀವ್ರವಾದ ಹಿಂಸೆಗೊಳಗಾಗಿದ್ದರು. ಆದರೆ ಈಗಿನ ಪ್ರೊಟೆಸ್ಟೆಂಟ್ ಸಭೆಗಳು ಈ ಸುಳ್ಳಾದ ಧರ್ಮವನ್ನು ಪೋಷಿಸಲು ಜಾತ್ಯಾತೀತ ಶಕ್ತಿಯೊಂದಿಗೆ ಸೇರಿಕೊಂಡಾಗ, ಕಥೋಲಿಕ್ ಸಭೆಯು ಪ್ರತಿಪಾದಿಸುವ ಭಾನುವಾರದ ಸಬ್ಬತ್ತು ಸಭೆ ಮತ್ತು ಸರ್ಕಾರದ (ಅಮೇರಿಕಾ) ಜೊತೆ ಅಧಿಕಾರದಿಂದ ಜಾರಿಗೆ ಬರಲಿದೆ, ದೇಶದಾದ್ಯಂತ ಮತಭ್ರಷ್ಟತೆ ಕಂಡುಬರುವುದು. ಇದು ದೇಶದ ನಾಶದೊಂದಿಗೆ ಅಂತ್ಯವಾಗುವುದು (ಎವಾಂಜಲಿಸಮ್, 235, 1899).ಕೊಕಾಘ 77.1

    ಅಮೇರಿಕಾ ದೇಶವು ರೋಮನ್ ಕಥೋಲಿಕ್ ಸಭೆಯ ಘನಕ್ಕಾಗಿ ವಿಗ್ರಹವನ್ನು ಮಾಡಿಕೊಳ್ಳುತ್ತದೆ (ಪ್ರಕಟನೆ I3:14). ಆಗ ಅಮೇರಿಕಾದಾದ್ಯಂತ ಮತಭ್ರಷ್ಟತೆ ಉಂಟಾಗಿ ದೇಶವು ನಾಶವಾಗುವುದು (ಅಡ್ವೆಂಟಿಸ್ಟ್ ಬೈಬಲ್ ವ್ಯಾಖ್ಯಾನ ಸಂಪುಟ 7, ಪುಟ 976, 1910).ಕೊಕಾಘ 77.2