Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ತನ್ನ ಜನರ ಬಗ್ಗೆ ದೇವರ ತಾಳ್ಮೆ

    ಸಭೆಯು ವಿಮೋಚಕನಾದ ಕ್ರಿಸ್ತನ ನಿರೀಕ್ಷೆ ಮುಟ್ಟುವಲ್ಲಿ ವಿಫಲವಾಯಿತು. ಇದು ದುಃಖಕರ ಸಂಗತಿ ಆದಾಗ್ಯೂ ದೇವರು ತನ್ನ ಜನರ ಕೈ ಬಿಡುವುದಿಲ್ಲ. ದೀರ್ಘ ಶಾಂತಿಯಿಂದ ಅವರೊಂದಿಗೆ ತಾಳಿಕೊಂಡಿದ್ದಾನೆ, ಅವರಲ್ಲಿ ಒಳ್ಳೆತನವಿದೆ ಎಂಬ ಕಾರಣದಿಂದಲ್ಲ, ಬದಲಾಗಿ ದೇವರ ಹೆಸರು ಸತ್ಯ ಹಾಗೂ ನೀತಿಯ ವಿರೋಧಿಗಳ ಮುಂದೆ ಅಗೌರವಕ್ಕೊಳಗಾಗಬಾರದು ಮತ್ತು ದೇವರ ಜನರ ನಾಶದಿಂದ ಸೈತಾನನು ಹಾಗೂ ಅವನ ಅನುಯಾಯಿಗಳು ಸಂತೋಷಿಸಬಾರದೆಂಬ ಉದ್ದೇಶದಿಂದ ದೇವರು ತನ್ನ ಜನರೊಂದಿಗೆ ಇನ್ನೂ ಇದ್ದಾನೆ. ದೇವರು ತನ್ನ ಜನರ ಮೂರ್ಖತನ, ಅಪನಂಬಿಕೆ ಹಾಗೂ ಹಟಮಾರಿತನವನ್ನು ಬಹಳ ಕಾಲದಿಂದ ಸಹಿಸಿಕೊಂಡಿದ್ದಾನೆ.ಕೊಕಾಘ 34.3

    ತನ್ನ ಅಪಾರವಾದ ತಾಳ್ಮೆ, ದೀರ್ಘಶಾಂತಿ ಹಾಗೂ ಅನುಕಂಪದಿಂದ ಆತನು ಅವರನ್ನು ಶಿಕ್ಷಿಸಿದ್ದಾನೆ. ದೇವರ ಮಕ್ಕಳು ಆತನ ಎಚ್ಚರಿಕೆ ಮತ್ತು ಸಲಹೆಗೆ ಗಮನಕೊಟ್ಟಲ್ಲಿ, ಆತನು ಅವರ ಎಲ್ಲಾ ಹಠಮಾರಿತನದ ತಪ್ಪುಗಳನ್ನು ಕ್ಷಮಿಸಿ ಶುದ್ಧಗೊಳಿಸುವನು ಹಾಗೂ ಶಾಶ್ವತವಾದ ರಕ್ಷಣೆ ನೀಡಿ ತನ್ನ ಕೃಪೆಯ ಬಲದಿಂದ ಅವರನ್ನು ಒಂದು ಸ್ಮಾರಕವನ್ನಾಗಿ ಮಾಡುವನು (ದಿ ಸೈನ್ಸ್ ಆಫ್ ದಿ ಟೈಮ್ಸ್, ನವೆಂಬರ್ 13, 1901),ಕೊಕಾಘ 34.4

    ಸಭೆಯು ಎಷ್ಟೇ ದೋಷದಿಂದ ಕೂಡಿ ಬಲಹೀನವಾಗಿದ್ದರೂ, ಕ್ರಿಸ್ತನು ತನ್ನ ಅತ್ಯಧಿಕವಾದ ಗೌರವವನ್ನು ಅದಕ್ಕೆ ಕೊಟ್ಟಿದ್ದಾನೆಂದು ನೆನಪಿನಲ್ಲಿಡಬೇಕು, ಆತನು ತನ್ನ ಸಭೆಯನ್ನು ಬಹಳವಾದ ಕಾಳಜಿ ಮತ್ತು ತೀವ್ರಾಸಕ್ತಿಯಿಂದ ಕಾಯುತ್ತಾ, ತನ್ನ ಪರಿಶುದ್ಧಾತ್ಮನಿಂದ ಅದನ್ನು ಬಲಪಡಿಸುತ್ತಾನೆ (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 2, ಪುಟ 396, 1902).ಕೊಕಾಘ 34.5