Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  ಸಂಪೂರ್ಣ ವಿಶ್ರಾಂತಿ ಮತ್ತು ಸ್ವಯಂ ಖುಷಿ

  ಯೌವನಸ್ಥರು ತಾವು ಸಂತೋಷಪಟ್ಟ ಎಲ್ಲಾ ಅವಕಾಶಗಳು, ಕಳೆದ ಸಮಯ ಮತ್ತು ತಮ್ಮ ಸಾಮರ್ಥ್ಯದ ಸರಿಯಾದ ಉಪಯೋಗ — ಇವೆಲ್ಲವುಗಳ ಬಗ್ಗೆ ಹೊಣೆಗಾರಿಕೆ ಹೊಂದಿದ್ದೇವೆಂಬುದನ್ನು ಮನಸ್ಸಿನಲ್ಲಿಡಿ. ಹಾಗಾದರೆ ನಾವು ಯಾವುದೇ ರೀತಿಯಲ್ಲಿ ಖುಷಿಪಡಬಾರದೇ ಅಥವಾ ವಿನೋದದ ಸಮಯ ಕಳೆಯಬಾರದೇ. ನಾವು ಯಾವಾಗಲೂ ಕೆಲಸ, ಕೆಲಸ, ಕೆಲಸವೆಂದು ಮಾಡಿಕೊಂಡಿರಬೇಕೇ? ಎಂಬ ಪ್ರಶ್ನೆಗಳನ್ನು ಅವರು ಕೇಳಬಹುದು.KanCCh 190.1

  ಬಹಳವಾಗಿ ದೈಹಿಕ ಶ್ರಮ ಬೇಡುವ ದೈಹಿಕ ಕೆಲಸಗಳಿಂದ ಯೌವನಸ್ಥರಿಗೆ ಬದಲಾವಣೆ ಬೇಕು. ಆದರೆ ಸಂಪೂರ್ಣವಾದ ವಿಶ್ರಾಂತಿಯ ಅಗತ್ಯವಿಲ್ಲ. ಅವರು ಒಂದು ರೀತಿಯ ದೈಹಿಕ ಶ್ರಮದಿಂದ ಆಯಾಸಗೊಂಡರೂ, ತಮ್ಮ ಅಮೂಲ್ಯ ಸಮಯವನ್ನು ಕ್ಷುಲ್ಲಕವಾಗಿ ವ್ಯರ್ಥ ಮಾಡಬಾರದು. ಅಂತಹ ಸಮಯದಲ್ಲಿ ಅವರು ತಮ್ಮ ತಾಯಿ ಹಾಗೂ ಸಹೋದರಿಯರಿಗೆ ಆಶೀರ್ವಾದಕರವಾದ ಹಗುರವಾದ ಕೆಲಸ ಮಾಡಬಹುದು.KanCCh 190.2

  ಸ್ವಯಂ ಖುಷಿ ಕೊಡುವ ಕಾರ್ಯಗಳು ಶಾರೀರಿಕ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವೆಂದು ಕೆಲವರು ಹೇಳಬಹುದು. ಶರೀರದ ಉತ್ತಮ ಬೆಳವಣಿಗೆಗೆ ಬದಲಾವಣೆಯ ಅಗತ್ಯವಿರುವುದು ನಿಜ. ಕೆಲಸದ ಬದಲಾವಣೆಯಿಂದ ಶರೀರ ಹಾಗೂ ಮನಸ್ಸು ಪುನರ್ ಚೈತನ್ಯ ಹೊಂದುತ್ತದೆ. ಆದರೆ ದಿನನಿತ್ಯದ ಕರ್ತವ್ಯಗಳನ್ನು ಕಡೆಗಣಿಸಿ ಮೂರ್ಖತನದ ಮೋಜಿನಲ್ಲಿ ಮಗ್ನರಾಗುವುದರಿಂದ ಶರೀರಕ್ಕೂ ಹಾಗೂ ಮನಸ್ಸಿಗೂ ಪುನರ್‌ಚೈತನ್ಯ ಉಂಟಾಗುವುದಿಲ್ಲ.KanCCh 190.3

  ಸ್ವಯಂಖುಷಿ ಪಡುವುದರಲ್ಲಿ ನಾಟಕರಂಗವು ಅತ್ಯಂತ ಅಪಾಯಕಾರಿ ವಿಧಾನವಾಗಿದೆ. ಇದು ಅನೈತಿಕತೆಯ ಕೇಂದ್ರವಾಗಿದೆ. ಇಂತಹ ಮನರಂಜನೆಗಳಿಂದ ಹಾನಿಕರವಾದ ದುರಾಭ್ಯಾಸಗಳು ಮತ್ತು ಪಾಪಕರವಾದ ಪ್ರವೃತ್ತಿ ಬಲವಾಗಿ ಬೇರೂರುತ್ತವೆ. ಕೀಳುಮಟ್ಟದ ಹಾಡುಗಳು, ಅಶ್ಲೀಲ ದೃಶ್ಯಗಳು ನೈತಿಕತೆಯನ್ನು ಭ್ರಷ್ಟಗೊಳಿಸುತ್ತವೆ. ಇಂತಹ ಪ್ರದರ್ಶನಗಳಿಗೆ ಕ್ರಮಬದ್ಧವಾಗಿ ಹೋಗುವ ಯೌವನಸ್ಥರು ಕ್ರೈಸ್ತ ಸಿದ್ಧಾಂತಗಳಿಂದ ವಿಮುಖರಾಗಿ ಧರ್ಮ ಭ್ರಷ್ಟರಾಗುತ್ತಾರೆ. ನಾಟಕ ಮನರಂಜನೆ, ವಿನೋದಗಳಷ್ಟು ಮನಸ್ಸನ್ನು ಕಲುಷಿತಗೊಳಿಸುವ, ಧಾರ್ಮಿಕ ಭಾವನೆ ನಾಶಗೊಳಿಸುವಂತ ಪ್ರಬಲವಾದ ವಿಷಪೂರಿತ ಪ್ರಭಾವ ಬೇರೆ ಯಾವುದರಿಂದಲೂ ಬರುವುದಿಲ್ಲ (ಇತ್ತೀಚೆಗೆ ಬಂದಿರುವ ಟಿ.ಎ., ಇಂಟರ್ನೆಟ್, ಫೇಸ್‌ಬುಕ್ ಮೊದಲಾದವುಗಳು ಯೌವನಸ್ಥರ ಮನಸ್ಸಿನಲ್ಲಿ ಪ್ರಬಲವಾದ ಹಾನಿಕಾರಕ ಪರಿಣಾಮ ಬೀರುತ್ತಿವೆ. ಇದು ಅನುವಾದಕನ ಅಭಿಪ್ರಾಯ), ಮತ್ತುಬರಿಸುವ ಮದ್ಯಪಾನಗಳ ಬಯಕೆಯು ಅವುಗಳನ್ನು ಸೇವಿಸಿದಷ್ಟು ಹೆಚ್ಚಾಗುವಂತೆ, ಇಂತಹ ಅಶ್ಲೀಲ ದೃಶ್ಯಗಳನ್ನು ನೋಡಬೇಕೆನ್ನುವ ಬಯಕೆ ಹೆಚ್ಚಾಗುತ್ತಲೇ ಹೋಗುತ್ತದೆ. ಸರ್ಕಸ್, ನಾಟಕ ಮುಂತಾದ ಪ್ರಶ್ನಾರ್ಹವಾದ ಋಷಿಕೊಡುವ ಪ್ರದರ್ಶನಗಳಿಗೆ ಹೋಗದಿರುವುದೇ ಅದರ ಹಾನಿಕರ ಪರಿಣಾಮದಿಂದ ಯೌವನಸ್ಥರು ತಪ್ಪಿಸಿಕೊಳ್ಳುವ ಏಕೈಕ ಸುರಕ್ಷತೆಯಾಗಿದೆ.KanCCh 190.4

  ದಾವೀದನು ಮಂಜೂಷವನ್ನು ದಾವೀದನಗರಕ್ಕೆ ತರುವಾಗ ಅದರ ಮುಂದೆ ಗೌರವದಿಂದ ಕುಣಿದದ್ದನ್ನು ಕೆಲವರು ತಾವು ಆಧುನಿಕ ನೃತ್ಯ ಕಾರ್ಯಕ್ರಮಗಳಿಗೆ ಹೋಗುವುದಕ್ಕೆ ಸಾಕ್ಷಿಯಾಗಿ ನೀಡುತ್ತಾರೆ (2 ಸಮುವೇಲನು 6:5, 14, 20, 21), ಆದರೆ ಇದು ಸಕಾರಣವಲ್ಲ. ನಮ್ಮ ಕಾಲದ ನೃತ್ಯ ಮಧ್ಯ ರಾತ್ರಿಯಲ್ಲಿ ಉಂಡುಕುಡಿದು ಕುಣಿದು ಕುಪ್ಪಳಿಸುವುದಾಗಿದೆ. ನೈತಿಕತೆ ಮತ್ತು ಆರೋಗ್ಯವು ಇದರಿಂದ ಹಾಳಾಗುತ್ತದೆ. ಕ್ಲಬ್‌ಗಳು ಹಾಗೂ ಕ್ಯಾಬರೆ ನಡೆಯುವ ಸ್ಥಳದಲ್ಲಿ ದೇವರಿಗೆ ಗೌರವವುಂಟಾಗುವುದಿಲ್ಲ. ಪ್ರಾರ್ಥನೆ, ಸತ್ಯವೇದ ಅಧ್ಯಯನ ಮುಂತಾದ ಪವಿತ್ರ ವಿಷಯಗಳ ಬಗ್ಗೆ ನಮ್ಮ ಪ್ರೀತಿಗೌರವಗಳನ್ನು ದುರ್ಬಲಗೊಳಿಸಿ, ದೇವರ ಸೇವೆಗೆ ಆಸಕ್ತಿ ಕಡಿಮೆಮಾಡುವಂತ ಮನರಂಜನೆಗಳು ಕ್ರೈಸ್ತರಿಗೆ ದೂರವಾಗಿರಬೇಕು. ದಾವೀದನು ಯೆಹೋವನ ಮಂಜೂಷದ ಮುಂದೆ ಹರ್ಷದಿಂದ ದೇವರನ್ನು ಗಾಯನದಿಂದಲೂ, ಕುಣಿದಾಡುವುದರಿಂದಲೂ ಸ್ತುತಿಸಿದರು, ಆಧುನಿಕ ನೃತ್ಯಕ್ಕೆ ಯಾವ ವಿಧದಲ್ಲಿಯೂ ಹೋಲಿಕೆಯಾಗುವುದಿಲ್ಲ. ದಾವೀದನು ದೇವರಿಗೆ ಸ್ತುತಿಸ್ತೋತ್ರ ಮಾಡಿ ಆತನ ಪರಿಶುದ್ಧ ನಾಮವನ್ನು ಉನ್ನತಕ್ಕೇರಿಸಿದನು. ಆದರೆ ಆಧುನಿಕ ನೃತ್ಯದ ಎಲ್ಲಾ ಪ್ರಕಾರಗಳು ನಾವು ದೇವರನ್ನು ಮರೆತು ಆತನನ್ನು ಅಗೌರವಗೊಳಿಸುವುದಕ್ಕೆ ಸೈತಾನನ ತಂತ್ರವಾಗಿದೆ. ಸೈತಾನನು ಯೌವನಸ್ಥರನ್ನು ಲೌಕಿಕವಾದ ಮನರಂಜನೆ, ಮೋಜಿನಲ್ಲಿ ಸಂತೋಷ ಕಂಡುಕೊಳ್ಳುವುದಕ್ಕೆ ಬೇಕಾದ ವಿಶೇಷ ಪ್ರಯತ್ನ ಮಾಡಿ ಅವರನ್ನು ಮರುಳುಗೊಳಿಸುತ್ತಾನೆ. ಅಲ್ಲದೆ ಇದು ಹಾನಿಕರವಲ್ಲ, ಬದಲಾಗಿ ಮನಸ್ಸನ್ನು ಉಲ್ಲಾಸಗೊಳಿಸಿ ಆರೋಗ್ಯ ಉಂಟುಮಾಡುತ್ತದೆಂಬ ಭಾವನೆಯನ್ನು ಅವರಲ್ಲಿ ಹುಟ್ಟಿಸುತ್ತಾನೆ.KanCCh 191.1

  ದೇವರ ವಾಕ್ಯವು ನಿಷೇಧಿಸಿರುವ ಲೌಕಿಕವಾದ ಮತ್ತು ನೈತಿಕತೆಯನ್ನು ಭ್ರಷ್ಟಗೊಳಿಸುವಂತ ಮಸ್ತಿಮೋಜಿನಲ್ಲಿ ಜನರು ಆಸಕ್ತಿಯಿಂದ ಭಾಗವಹಿಸುತ್ತಾರೆ. ಈ ರೀತಿಯಾಗಿ ಅವರು ದೇವರ ಸಂಬಂಧವನ್ನು ಕಡಿದುಕೊಂಡು, ಈ ಲೋಕದ ಭಾಗಗಳಲ್ಲಿ ಆಸಕ್ತರಾಗಿರುವವರೊಂದಿಗೆ ಸೇರಿಕೊಳ್ಳುತ್ತಾರೆ. ಜಲಪ್ರಳಯಕ್ಕೆ ಮೊದಲು ಜೀವಿಸಿದ್ದ ಜನರು ಮತ್ತು ಸೊದೋಮ್ ಗೊಮೊರ ಪಟ್ಟಣಗಳ ಜನರಲ್ಲಿದ್ದ ಪಾಪಗಳು ಅನ್ಯ ಜನಾಂಗಗಳಲ್ಲಿ ಮಾತ್ರವಲ್ಲ, ಕ್ರೈಸ್ತರೆಂದು ಹೇಳಿಕೊಳ್ಳುವವರಲ್ಲಿ ಹಾಗೂ ಕ್ರಿಸ್ತನ ಎರಡನೇ ಬರೋಣವನ್ನು ಎದುರು ನೋಡುತ್ತಿರುವವರಲ್ಲಿಯೂ ಕಂಡುಬರುತ್ತದೆ. ದೇವರ ದೃಷ್ಟಿಯಲ್ಲಿ ಅಸಹ್ಯವಾಗಿರುವ ಈ ಪಾಪಗಳನ್ನು ನಿಮ್ಮ ಮುಂದೆ ತೋರಿಸಿದಲ್ಲಿ, ನಿಮ್ಮಲ್ಲಿ ನಾಚಿಕೆ, ಭಯವುಂಟಾಗುತ್ತದೆ.KanCCh 191.2

  ಮನಸ್ಸಿಗೆ ಆಕರ್ಷಕವೆನಿಸುವ ಮನರಂಜನೆ ಅನುಭವಿಸಬೇಕೆಂಬ ಬಯಕೆಯು ಒಂದು ಶೋಧನೆಯಾಗಿದ್ದು, ದೇವಜನರಿಗೆ ಅದರಲ್ಲಿಯೂ ವಿಶೇಷವಾಗಿ ಯೌವನಸ್ಥರಿಗೆ ಉರುಳಾಗಿ ಪರಿಣಮಿಸುತ್ತದೆ. ಕ್ರಿಸ್ತನ ಎರಡನೇ ಬರೋಣಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾದ ಮಹಾಗಂಭೀರ ಕೆಲಸದಿಂದ ಜನರ ಮನಸ್ಸನ್ನು ವಿಮುಖಗೊಳಿಸುವುದಕ್ಕಾಗಿ ಸೈತಾನನು ನಿರಂತರವಾಗಿ ಆಕರ್ಷಣೆಯೆಂಬ ಉರುಲನ್ನು ಒಡ್ಡುತ್ತಾನೆ. ನಾಟಕ, ಸರ್ಕಸ್ ಹಾಗೂ ಇನ್ನಿತರ ಸಾವಿರಾರು ಮನರಂಜನಾ ವಿಧಾನಗಳು ಜನರು ಲೋಕದ ಭೋಗಗಳನ್ನು ಪ್ರೀತಿಸುವುದಕ್ಕೆ ಯಾವಾಗಲೂ ಸೆಳೆಯುತ್ತವೆ. ಲೋಕದೊಂದಿಗೆ ದೇವಜನರು ಸೇರಿಕೊಂಡಾಗ, ಅವರ ನಂಬಿಕೆ ಬಲಹೀನಗೊಳ್ಳುವುದು.KanCCh 192.1

  ಲೌಕಿಕವಾದ ಆಶಾಪಾಶಗಳಿಗೆ ಸಿಲುಕಿ ಅದರ ಭೋಗಗಳಲ್ಲಿ ಮಗ್ನರಾಗಿರುವವರು ತನ್ನವರೆಂದು ದೇವರು ಎಣಿಸುವುದಿಲ್ಲ. ಯಾರು ತಮ್ಮನ್ನು ತಾವೇ ನಿರಾಕರಿಸಿ ನಮ್ರತೆ, ಪಾವಿತ್ರ್ಯತೆ ಮತ್ತು ಎಲ್ಲದರಲ್ಲಿಯೂ ಸಂಯಮದಿಂದ ಕೂಡಿರುವರೋ ಅವರು ಕ್ರಿಸ್ತನ ನಿಜವಾದ ಹಿಂಬಾಲಕರು. ಅಂತವರು ಈ ಲೋಕದ ಭೋಗಗಳಲ್ಲಿ ಆಸಕ್ತರಾಗಿರುವುದಿಲ್ಲ.KanCCh 192.2

  ನೀವು ನಿಜವಾಗಿಯೂ ಕ್ರಿಸ್ತನಿಗೆ ಸೇರಿದವರಾಗಿದ್ದಲ್ಲಿ, ಆತನಿಗಾಗಿ ಸಾಕ್ಷಿ ನೀಡುವ ಅವಕಾಶಗಳು ದೊರೆಯುತ್ತದೆ. ಮೋಜು, ವಿನೋದಗಳು ನಡೆಯುವಂತ ಸ್ಥಳಗಳಿಗೆ ನಿಮಗೆ ಆಹ್ವಾನ ಬರುತ್ತದೆ, ಅಲ್ಲಿ ದೇವರಿಗಾಗಿ ಸಾಕ್ಷಿ ನೀಡುವುದಕ್ಕೆ ನಿಮಗೆ ಅವಕಾಶ ದೊರೆಯುವುದು. ಆಗ ನೀವು ಇಲ್ಲಿಗೆ ಹೋಗಲಿಕ್ಕೆ ಯಾವುದೇ ಕುಂಟುನೆಪ ಹೇಳಬಾರದು, ಬದಲಾಗಿ ನಾನು ದೇವರ ಮಗನಾಗಿದ್ದೇನೆ. ನಮ್ಮ ತತ್ವಗಳ ಪ್ರಕಾರ ನಾವು ಅಂತಹ ಸ್ಥಳಗಳಿಗೆ ಹೋಗಬಾರದು, ದೇವರ ಪ್ರಸನ್ನತೆಯು ಅಲ್ಲಿರುವುದಿಲ್ಲ. ಈ ಕಾರಣದಿಂದ ನಾನು ಬರುವುದಿಲ್ಲವೆಂದು ಸ್ಪಷ್ಟವಾಗಿ ಆದರೆ ಅದೇ ಸಮಯದಲ್ಲಿ ವಿನಯದಿಂದ ಅವರಿಗೆ ತಿಳಿಸಿ ಹೇಳಬೇಕು.KanCCh 192.3

  ಕ್ರಿಸ್ತನ ಹಿಂಬಾಲಕರ ವಿನೋದ ವಿಹಾರಗಳಿಗೂ, ಲೌಕಿಕ ಜನರ ಮನರಂಜನೆ, ಭೋಗಾಸಕ್ತಿ ಅಜಗಜಾಂತರ ವ್ಯತ್ಯಾಸವಿದೆ. ಲೌಕಿಕ ಜನರು ಸೇರುವ ಸ್ಥಳಗಳಲ್ಲಿ ಪ್ರಾರ್ಥನೆಗಾಗಿ ಅಥವಾ ಕ್ರಿಸ್ತನಿಗಾಗಲಿ ಸ್ಥಳವಿಲ್ಲ. ಬದಲಾಗಿ ಅವರು ಕೀಳುಮಟ್ಟದ ಹಾಸ್ಯ ಹಾಗೂ ಅಶ್ಲೀಲ ಸಂಭಾಷಣೆಯಲ್ಲಿ ನಿರತರಾಗಿರುತ್ತಾರೆ. ಅವರ ಮನರಂಜನೆ ಮೂರ್ಖತನದಿಂದ ಆರಂಭವಾಗಿ, ವ್ಯರ್ಥದಲ್ಲಿ ಮುಕ್ತಾಯಗೊಳ್ಳುತ್ತದೆ.KanCCh 192.4

  *****