Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-39 — ನಮ್ಮ ಆಹಾರ

    ನಾವು ತೆಗೆದುಕೊಳ್ಳುವ ಆಹಾರದಿಂದ ನಮ್ಮ ಶರೀರಗಳು ರಚನೆಗೊಳ್ಳುತ್ತವೆ.ಜೀವದ್ರವ್ಯದಿಂದ ಕೂಡಿದ ಶರೀರದ ಅಂಗಾಂಗಗಳು ನಿರಂತರವಾಗಿಬೇರ್ಪಡಿಸಲ್ಪಡುತ್ತಿರುತ್ತವೆ. ಪ್ರತಿಕ್ಷಣದಲ್ಲಿಯೂ, ಶರೀರದ ಪ್ರತಿಯೊಂದು ಅಂಗವುದುರ್ಬಲಗೊಳ್ಳುತ್ತದೆ. ನಾವು ತಿನ್ನುವ ಆಹಾರವು ಈ ದುರ್ಬಲತೆಯನ್ನು ಸರಿಪಡಿಸುತ್ತವೆ.ದೇಹದ ಪ್ರತಿಯೊಂದು ಅಂಗಕ್ಕೂ ಪೋಷಕಾಂಶಗಳ ಅಗತ್ಯವಿದೆ. ಮೆದುಳು, ಮೂಳೆ,ಸ್ನಾಯುಗಳು ಹಾಗೂ ನರನಾಡಿಗಳಿಗೂ ಪೋಷಕಾಂಶಗಳು ಬೇಕಾಗುತ್ತವೆ. ಆಹಾರವುರಕ್ತವಾಗಿ, ಈ ರಕ್ತವು ಶರೀರದ ವಿವಿಧ ಅಂಗಗಳನ್ನು ಬಲಗೊಳಿಸುವ ಕ್ರಿಯೆಯುಅದ್ಭುತವಾಗಿದೆ. ಈ ಕ್ರಿಯೆಯು ನಿರಂತರವಾಗಿ ನಡೆಯುವಂತದ್ದಾಗಿದ್ದು, ಪ್ರತಿಯೊಂದುನರ, ಸ್ನಾಯು ಹಾಗೂ ಅಂಗಾಂಶಗಳಿಗೆ ಬಲ ಮತ್ತು ಜೀವ ಒದಗಿಸುತ್ತದೆ.KanCCh 273.1

    ದೇಹದ ರಚನೆಗೆ ಅತ್ಯಗತ್ಯವಾದ ಅಂಶಗಳನ್ನು (Elements) ಅತ್ಯುತ್ತಮವಾಗಿಒದಗಿಸುವಂತ ಆಹಾರವನ್ನು ನಾವು ಸೇವಿಸಬೇಕು. ಈ ಆಯ್ಕೆಯಲ್ಲಿ ಹಸಿವನ್ನುತಣಿಸುವುದಕ್ಕಾಗಿ ತಿನ್ನುವುದು ಅಷ್ಟೊಂದು ಹಿತಕರವಲ್ಲ. ತಪ್ಪಾಗಿತಿನ್ನುವ ಅಭ್ಯಾಸಕ್ರಮದಿಂದಆಹಾರದ ಅಪೇಕ್ಷೆಯು ದುರ್ಬಳಕೆಯಾಗುತ್ತದೆ. ಆಗ ಶರೀರವನ್ನುಹಾನಿಗೊಳಿಸುವಂತದ್ದನ್ನು ತಿನ್ನಬೇಕೆಂಬ ಬಯಕೆ ಆಗಾಗ ಉಂಟಾಗುತ್ತದೆ. ಇದರಿಂದಶರೀರವು ಬಲಗೊಳ್ಳುವ ಬದಲು ಬಲಹೀನಗೊಳ್ಳುತ್ತದೆ. ಸಮಾಜದ ಸಂಪ್ರದಾಯಗಳುನಮಗೆ ಉತ್ತಮವಾದ ಮಾರ್ಗದರ್ಶಿಯಲ್ಲ. ಆಹಾರ ಪದ್ಧತಿಗೆ ಸಂಬಂಧಪಟ್ಟಂತೆಇರುವ ಜನಪ್ರಿಯ ತಪ್ಪು ಕ್ರಮಗಳೇ ರೋಗರುಜಿನಗಳು ಹೆಚ್ಚಾಗಲು ಕಾರಣವಾಗಿದೆ.KanCCh 273.2

    ಆದರೆ ಪರಿಪೂರ್ಣವಾದ ಎಲ್ಲಾ ಆಹಾರಗಳು ನಮ್ಮೆಲ್ಲಾ ಅಗತ್ಯಗಳಿಗೆ ಎಲ್ಲಾಸಂದರ್ಭಗಳಲ್ಲಿಯೂ ಸಮರ್ಪಕವಾಗಿ ಹೊಂದಿಕೆಯಾಗುವುದಿಲ್ಲ. ಇಂತಹ ಆಹಾರವನ್ನುತೆಗೆದುಕೊಳ್ಳುವ ವಿಷಯದಲ್ಲಿಎಚ್ಚರಿಕೆ ವಹಿಸಬೇಕು. ನಮ್ಮ ಆಹಾರವು ಋತುಮಾನಕ್ಕೆತಕ್ಕಂತೆ, ನಾವು ವಾಸಿಸುವ ಪ್ರದೇಶದ ಹವಾಮಾನಕ್ಕೆ ಮತ್ತು ನಾವು ಮಾಡುವ ಕೆಲಸಕ್ಕೆತಕ್ಕಂತೆ ಸೂಕ್ತವಾಗಿರಬೇಕು. ಒಂದು ಋತುಮಾನದಲ್ಲಿ ಅಥವಾ ಹವಾಮಾನದಲ್ಲಿತೆಗೆದುಕೊಳ್ಳುವ ಆಹಾರವು ಬೇರೆ ಹವಾಮಾನಕ್ಕೆ ಹೊಂದಿಕೆಯಾಗುವುದಿಲ್ಲ. ಆದುದರಿಂದವಿವಿಧರೀತಿಯ ಕೆಲಸ ಮಾಡುವವರಿಗೆ ಉತ್ತಮವಾದ ರೀತಿಯಲ್ಲಿ ಹೊಂದಿಕೆಯಾಗುವವಿವಿಧ ಆಹಾರ ಪದಾರ್ಥಗಳಿವೆ. ದೈಹಿಕವಾಗಿ ಶ್ರಮದಾಯಕ ಕೆಲಸಮಾಡುವವರುತೆಗೆದುಕೊಳ್ಳುವ ಆಹಾರವು ಬುದ್ಧಿಶಕ್ತಿ ಉಪಯೋಗಿಸಿ ಕಚೇರಿಯಲ್ಲಿ ಕೆಲಸ ಮಾಡುವವರಿಗೆಅಥವಾ ಕುಳಿತೇ ಕೆಲಸಮಾಡುವವರಿಗೆ ಸೂಕ್ತವಾಗುವುದಿಲ್ಲ. ದೇವರು ನಮಗೆ ಸಾಕಷ್ಟುಬಗೆಯ ಆರೋಗ್ಯಕರ ಆಹಾರಗಳನ್ನು ನಿಸರ್ಗದ ಮೂಲಕ ಕೊಟ್ಟಿದ್ದಾನೆ. ಪ್ರತಿಯೊಬ್ಬರೂಸಹ ವಿವೇಚನೆಯಿಂದ ತಮ್ಮ ಅಗತ್ಯಕ್ಕೆ ಪೂರಕವಾಗುವಂತದ್ದನ್ನು ಆರಿಸಿಕೊಳ್ಳಬೇಕು.KanCCh 273.3