Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಮಕ್ಕಳು ಅಜ್ಞಾನದಲ್ಲಿ ಬೆಳೆಯುವಂತೆ ಮಾಡುವುದು ಪಾಪವಾಗಿದೆ

    ಕೆಲವು ತಂದೆತಾಯಿಯರು ತಮ್ಮ ಮಕ್ಕಳಿಗೆ ಧಾರ್ಮಿಕಶಿಕ್ಷಣ ಮತ್ತು ಶಾಲಾ ಶಿಕ್ಷಣ ನೀಡುವುದರಲ್ಲಿ ಅಲಕ್ಷ ಮಾಡುತ್ತಾರೆ. ಇವೆರಡರಲ್ಲಿ ಯಾವುದನ್ನೂ ಸಹ ನಿರ್ಲಕ್ಷಿಸಬಾರದು. ಮಕ್ಕಳ ಮನಸ್ಸುಗಳು ಬಹಳ ಕ್ರಿಯಾಶೀಲವಾಗಿರುತ್ತದೆ. ಅವರು ಶಾರೀರಿಕ ಶ್ರಮದಲ್ಲಿ ಅಥವಾ ಅಧ್ಯಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳದಿದ್ದಲ್ಲಿ, ಕೆಟ್ಟಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು ಮಕ್ಕಳು ಅಜ್ಞಾನದಲ್ಲಿ ಬೆಳೆಯುವಂತೆ ಮಾಡುವುದು ತಂದೆ-ತಾಯಿಗಳಿಗೆ ಪಾಪವಾಗಿದೆ. ಅವರು ಮಕ್ಕಳಿಗೆ ಆಸಕ್ತಿಕರವಾದ ಹಾಗೂ ಉಪಯುಕ್ತವಾದ ಪುಸ್ತಕಗಳನ್ನು ಒದಗಿಸಬೇಕು. ಅಲ್ಲದೆ ಶಾರೀರಿಕ ಕೆಲಸ ಮಾಡುವುದನ್ನು ಕಲಿಸಬೇಕು ಮತ್ತು ಓದುವುದಕ್ಕೂ ಹಾಗೂ ಅಧ್ಯಯನ ಮಾಡುವುದಕ್ಕೂ ಇಂತಿಷ್ಟು ಗಂಟೆಗಳನ್ನು ಮೀಸಲಿಡಬೇಕೆಂದು ಮನವರಿಕೆ ಮಾಡಿಕೊಡಬೇಕು. ತಂದೆ-ತಾಯಿಯರು ತಮ್ಮ ಮಕ್ಕಳ ಮನಸ್ಸು ಉನ್ನತಗೊಳಿಸುವಂತೆಯೂ ಹಾಗೂ ಅವರ ಮಾನಸಿಕ ಅಂಗಗಳ ಸಾಮರ್ಥ್ಯ ಹೆಚ್ಚಾಗುವಂತೆ ಪ್ರಯತ್ನ ಪಡಬೇಕು. ಅವರು ಯಾವುದೇ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿಲ್ಲದಿದ್ದಲ್ಲಿ, ಪ್ರಾಪಂಚಿಕ ವಿಷಯಗಳಲ್ಲಿ ಮಗ್ನರಾಗಿ ಭ್ರಷ್ಟರಾಗುತ್ತಾರೆ. ಇಂತಹ ಸೋಮಾರಿಯಾದ ಮಕ್ಕಳ ಮನಸ್ಸು ಸೈತಾನನ ಕಾರ್ಯಚಟುವಟಿಕೆಗೆ ಪ್ರಶಸ್ತವಾದ ಸ್ಥಳವಾಗಿದೆ.KanCCh 232.3

    ಶಿಶುವನ್ನು ನೋಡಿಕೊಳ್ಳುವುದರೊಂದಿಗೆ ತಾಯಿಯ ಕೆಲಸ ಆರಂಭವಾಗುತ್ತದೆ. ಅವಳು ಮಗುವಿನ ಕೋಪತಾಪವನ್ನು ನಿಯಂತ್ರಿಸಿ, ತನಗೆ ವಿಧೇಯತೆ ತೋರುವಂತೆ ಮಗುವನ್ನು ನಿಯಂತ್ರಿಸಬೇಕು. ಮಗುವು ಬೆಳೆದಾಗಲೂ, ಅದರ ಮೇಲೆ ತಾಯಿಯ ನಿಯಂತ್ರಣ ಸಡಿಲಗೊಳ್ಳಬಾರದು. ಪ್ರತಿಯೊಬ್ಬ ತಾಯಿಯೂ ತನ್ನ ಮಕ್ಕಳೊಂದಿಗೆ ಸಮಯಕಳೆದು ಅವರ ತಪ್ಪುಗಳನ್ನು ತಿದ್ದುವುದು ಮಾತ್ರವಲ್ಲದೆ, ಅವರಿಗೆ ತಾಳ್ಮೆಯಿಂದ ಸರಿಯಾದ ಮಾರ್ಗವನ್ನು ಬೋಧಿಸಬೇಕು. ತಮ್ಮ ಮಕ್ಕಳನ್ನು ದೇವರ ಮಕ್ಕಳಾಗಲು ಯೋಗ್ಯರಾಗುವಂತೆ ಸಲಹೆ ನೀಡುತ್ತೇವೆಂದು ಕ್ರೈಸ್ತ ತಂದೆ-ತಾಯಿಯರು ತಿಳಿದಿರಬೇಕು. ಮಕ್ಕಳು ಬಾಲ್ಯದಲ್ಲಿ ರೂಪಿಸಿಕೊಳ್ಳುವ ಗುಣಸ್ವಭಾವ ಮತ್ತು ಅವರ ಸಂಪೂರ್ಣವಾದ ಧಾರ್ಮಿಕ ಅನುಭವವು ನೀವು ಅವರಿಗೆ ಕೊಡುವ ಶಿಕ್ಷಣ ಹಾಗೂ ಸಲಹೆಗಳಿಂದ ಪ್ರಭಾವಿತಗೊಂಡಿರುತ್ತದೆ. ಮಗುವಿನ ಮನಸ್ಸು ತಂದೆ-ತಾಯಿಯರ ನಿಯಂತ್ರಣಕ್ಕೆ ಒಳಪಡದಿದ್ದಲ್ಲಿ, ಅವರು ಬೆಳೆದಾಗ ನಿಯಂತ್ರಿಸುವುದು ಬಹಳ ಕಷ್ಟವಾಗುತ್ತದೆ. ಇಂತಹ ಮಕ್ಕಳನ್ನು ದೇವರ ಭಯಭಕ್ತಿಯಲ್ಲಿ ಬೆಳೆಸಲು ಪ್ರಯತ್ನಪಡುವುದು ತೀವ್ರತರನಾದ ಒಂದು ಹೋರಾಟವಾಗಿರುತ್ತದೆ. ಇಂತಹ ಪ್ರಮುಖ ಕಾರ್ಯವನ್ನು ಅಲಕ್ಷಿಸುವ ತಂದೆತಾಯಿಯರು ಒಂದು ದೊಡ್ಡ ತಪ್ಪು ಮಾಡುವುದಲ್ಲದೆ, ದೇವರಿಗೂ ಮತ್ತು ಮಕ್ಕಳಿಗೂ ವಿರುದ್ಧವಾಗಿ ಪಾಪ ಮಾಡುವವರಾಗಿದ್ದಾರೆ.KanCCh 233.1

    ತಂದೆತಾಯಿಯರೇ, ದೇವರು ನಿಮಗೆ ಕೊಟ್ಟ ಕರ್ತವ್ಯದ ಪ್ರಕಾರ ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡುವುದರಲ್ಲಿ ನೀವು ಎಡವಿದಲ್ಲಿ, ಅದರಿಂದಾಗುವ ಪರಿಣಾಮಗಳ ಬಗ್ಗೆ ದೇವರಿಗೆ ಉತ್ತರ ಕೊಡಬೇಕು. ಈ ಪರಿಣಾಮವು ನಿಮ್ಮ ಮಕ್ಕಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಹೊಲದಲ್ಲಿ ಒಂದು ಮುಳ್ಳು ಗಿಡವನ್ನು ಬೆಳೆಯಲು ಬಿಟ್ಟಲ್ಲಿ. ಅದು ಹೇಗೆ ಎಲ್ಲಾ ಕಡೆಯಲ್ಲಿಯೂ, ಹರಡಿಕೊಳ್ಳುತ್ತದೋ, ಅದೇ ರೀತಿ ನಿಮ್ಮ ಒಂದು ತಪ್ಪಿನಿಂದಾದ ಪರಿಣಾಮವು ನಾಶಕ್ಕೆ ಕಾರಣವಾಗುವ ಸಾಧ್ಯತೆಯಿದೆ.KanCCh 233.2

    ದೇವರ ಶಾಪವು ಅಪ್ರಮಾಣಿಕರಾದ ತಂದೆ-ತಾಯಿಯರ ಮೇಲೆ ಇರುತ್ತದೆ. ಅವರು ಹಾನಿಪಡಿಸುವ ಮುಳ್ಳುಗಿಡಗಳನ್ನು ಇಲ್ಲಿ ನೆಡುವುದಲ್ಲದೆ, ದೇವರ ನ್ಯಾಯಾಲಯದ ಮುಂದೆ ಲೆಕ್ಕಕೊಡಬೇಕು. ಆ ನ್ಯಾಯತೀರ್ಪಿನ ದಿನದಲ್ಲಿ ಅನೇಕ ಮಕ್ಕಳು ತಮ್ಮ ನಾಶಕ್ಕೆ ತಂದೆ-ತಾಯಿಯರೇ ಕಾರಣವೆಂದು ಅವರನ್ನು ದೂಷಿಸುವರು. ಮಕ್ಕಳ ಮೇಲೆ ಅವರು ತೋರಿಸುವ ಕುರುಡು ಪ್ರೇಮ ತಪ್ಪಾದ ಅನುಕಂಪದಿಂದ ತಮ್ಮ ಮಕ್ಕಳ ತಪ್ಪುಗಳನ್ನು ತಿದ್ದಿ ಶಿಕ್ಷೆಗೆ ಒಳಪಡಿಸದೆ ಕಡೆಗಣಿಸುವರು. ಇದರ ಪರಿಣಾಮವಾಗಿ ಇಂತಹ ತಂದೆತಾಯಿಯರ ಮಕ್ಕಳು ನಿತ್ಯಜೀವ ಕಳೆದುಕೊಳ್ಳುವರು ಹಾಗೂ ರಕ್ತಾಪರಾಧವು ಅಪ್ರಮಾಣಿಕರಾದ ಇವರ ಮೇಲಿರುವುದು.KanCCh 233.3