Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕೊಡಲ್ಪಟ್ಟಿರುವ ಅಧಿಕಾರಕ್ಕೆ ನಾನು ಯೋಗ್ಯನಲ್ಲವೆಂಬ ಭಾವನೆ ನಿಮ್ಮಲ್ಲಿದೆಯೇ?

    ಅಧಿಕಾರ ವಹಿಸಿಕೊಂಡಿರುವಿರಾ? ಅದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ. ನೀವು ಬಲಹೀನರೆಂದು ಹೆಚ್ಚಾಗಿ ತಿಳಿದುಕೊಂಡಷ್ಟೂ, ದೇವರ ಸಹಾಯವನ್ನು ಹೆಚ್ಚಾಗಿ ಹುಡುಕುವಿರಿ. “ದೇವರ ಸಮೀಪಕ್ಕೆ ಬನ್ನಿರಿ; ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” (ಯಾಕೋಬನು 4:8). ನೀವು ಸಂತೋಷದಿಂದಲೂ ಹರ್ಷದಿಂದಲೂ ಇರಬೇಕೆಂದು ದೇವರು ಬಯಸುತ್ತಾನೆ. ದೇವರು ನಿಮಗೆ ಕೊಟ್ಟಿರುವ ಸಾಮರ್ಥ್ಯಉಪಯೋಗಿಸಿ ಅತ್ಯುತ್ತಮವಾದದ್ದನ್ನು ಮಾಡಬೇಕೆಂದು ಆತನು ಆಶಿಸುತ್ತಾನೆ. ಅನಂತರ ಸಹಾಯಕ್ಕಾಗಿ ಕರ್ತನ ಮೇಲೆ ಭರವಸವಿಡಿರಿ ಹಾಗೂ ನಿಮ್ಮ ಭಾರವನ್ನು ಹೊರಲು ಸಹಾಯಕರನ್ನು ಕೊಡುವಂತೆ ದೇವರಲ್ಲಿ ಬೇಡಿಕೊಳ್ಳಿರಿ.KanCCh 37.2

    ಇತರರ ಕಠಿಣವಾದ ಹಾಗೂ ಒರಟಾದ ಮಾತುಗಳು ನಿಮ್ಮನ್ನು ನೋಯಿಸದಿರಲಿ. ಯೇಸುಕ್ರಿಸ್ತನ ಬಗ್ಗೆಯೂ ಜನರು ಈ ರೀತಿಯಾಗಿ ಮಾತಾಡಲಿಲ್ಲವೇ? ನೀವು ತಪ್ಪು ಮಾಡುತ್ತೀರಿ; ಇದರ ನಿಮಿತ್ತ ಕೆಲವು ವೇಳೆ ಇತರರು ನಿಮ್ಮ ಬಗ್ಗೆ ಕಠಿಣವಾಗಿ ಮಾತಾಡಲು ನೀವು ಅವಕಾಶ ಕೊಡಬಹುದು. ಆದರೆ ಕ್ರಿಸ್ತನು ಎಂದೂ ತಪ್ಪು ಮಾಡಲಿಲ್ಲ. ಆತನು ಪರಿಶುದ್ಧನೂ, ನಿರ್ಮಲನೂ, ನಿಷ್ಕಳಂಕನೂ ಆಗಿದ್ದನು. ಈ ಲೋಕದಲ್ಲಿ ಉತ್ತಮವಾದವುಗಳನ್ನು ಎಂದೂ ನಿರೀಕ್ಷಿಸಬೇಡಿ. ನಿಮ್ಮ ಮನಸ್ಸನ್ನು ನೋಯಿಸಿದಾಗ, ನಿಮ್ಮ ವೈರಿಗಳು ಸಂತೋಷಿಸುವುದಲ್ಲದೆ, ಸೈತಾನನಿಗೂ ಹೆಚ್ಚಿನ ಸಂತೋಷವಾಗುವುದು. ಕ್ರಿಸ್ತನ ಮೇಲೆ ನಿಮ್ಮ ದೃಷ್ಟಿಯಿರಲಿ ಹಾಗೂ ಆತನ ಮಹಿಮೆಗಾಗಿ ಕಾರ್ಯಮಾಡಿರಿ.KanCCh 37.3