Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಗತ್ಯವಿರುವವರಿಗೆ ಸಹಾಯ ಮಾಡುವುದು ಹೇಗೆ?

    ಅಗತ್ಯವಿರುವವರಿಗೆ ಹೇಗೆ ಸಹಾಯ ಮಾಡಬೇಕೆನ್ನುವುದನ್ನು ಎಚ್ಚರಿಕೆಯಿಂದಲೂಮತ್ತು ಪ್ರಾರ್ಥನಾ ಪೂರ್ವಕವಾಗಿಯೂ ಪರಿಗಣಿಸಬೇಕು. ತಾನು ಸೃಷ್ಟಿ ಮಾಡಿದಮನುಷ್ಯರನ್ನು ಹೇಗೆ ಕಾಪಾಡಬೇಕು, ನೋಡಿಕೊಳ್ಳಬೇಕೆಂದು ನಮಗಿಂತಲೂ ದೇವರಿಗೆಚೆನ್ನಾಗಿತಿಳಿದಿದೆ. ಕೆಲವರು ಸಹಾಯಕೇಳಿ ಬಂದವರೆಲ್ಲರಿಗೂ ಯಾವುದೇ ವಿವೇಚನೆಯಿಲ್ಲದೆಸಹಾಯ ಮಾಡುತ್ತಾರೆ. ಇದರಲ್ಲಿ ಅವರು ತಪ್ಪು ಮಾಡುತ್ತಾರೆ. ಬಡವರಿಗೆ ಅವರಅಗತ್ಯಕ್ಕೆ ತಕ್ಕಂತೆ ಸರಿಯಾದ ರೀತಿಯಲ್ಲಿ ಸಹಾಯಮಾಡಬೇಕು, ಸಹಾಯತೆಗೆದುಕೊಂಡಕೆಲವರು ಅದನ್ನೇ ಒಂದು ಅಭ್ಯಾಸವನ್ನಾಗಿ ಮಾಡಿಕೊಂಡು ಸಹಾಯಯಾಚಿಸುತ್ತಲೇಇರುವುದುಂಟು. ಇಂತವರಿಗೆ ಸಹಾಯಮಾಡಿದಾಗ ಅವರು ಸೋಮಾರಿಗಳೂ,ಅಸಹಾಯಕರೂ ಹಾಗೂ ದುಂದುವೆಚ್ಚ ಮಾಡುವುದಕ್ಕೆ ನಾವು ಉತ್ತೇಜಿಸಿದಂತಾಗುತ್ತದೆ.ಅಲ್ಲದೆ ಅವರು ಅತಿಭೋಗಿಗಳಾಗಿ ನಡತೆ ತಪ್ಪುವುದಕ್ಕೂ ನಾವೇ ಕಾರಣರಾಗಬಹುದು.KanCCh 350.1

    ಬಡವರಿಗೆ ಸಹಾಯ ಮಾಡುವಾಗ “ನಾನು ಅವರಿಗೆ ದುಂದುವೆಚ್ಚ ಮಾಡಲಿಕ್ಕೆಉತ್ತೇಜಿಸುತ್ತಿದ್ದೇನೆಯೋ? ಅವರಿಗೆ ಸಹಾಯಮಾಡುತ್ತಿರುವೆನೇ? ಅಥವಾಹಾನಿಮಾಡುತ್ತಿರುವೆನೇ?” ಎಂಬಿತ್ಯಾದಿ ಅಂಶಗಳನ್ನು ಪರಿಗಣಿಸಬೇಕು.ಜೀವನೋಪಾಯಕ್ಕಾಗಿ ದುಡಿಯಲುಸಮರ್ಥರಾಗಿರುವವರು ಬೇರೆಯವರ ಮೇಲೆಆತುಕೊಳ್ಳಬಾರದು. ಜ್ಞಾನ ವಿವೇಕ ಹಾಗೂ ವಿವೇಚನಾಶೀಲರಾದ ಪುರುಷ ಮತ್ತುಸ್ತ್ರೀಯರನ್ನು ಬಡವರ ಆರೈಕೆಮಾಡಲು ನೇಮಿಸಬೇಕು. ಆದರೆ ಕ್ರೈಸ್ತ ವಿಶ್ವಾಸಿಗಳಿಗೆಮೊದಲು ಗಮನ ಕೊಡಬೇಕು. ಇವರು ಸಭಾಪಾಲನಾ ಸಮಿತಿಯ ಮಾರ್ಗದರ್ಶನದಲ್ಲಿಮಾಡಬೇಕಾದ ಕಾರ್ಯಗಳ ಬಗ್ಗೆ ಸಲಹೆ ಪಡೆದುಕೊಳ್ಳಬೇಕು.KanCCh 350.2

    ಸುವಾರ್ತಾ ಸಂದೇಶವನ್ನು ಅಂಗೀಕರಿಸಿದ ಎಲ್ಲಾ ಬಡಕುಟುಂಬಗಳ ಪಾಲನೆಮಾಡಬೇಕೆಂದು ದೇವರು ಅಪೇಕ್ಷಿಸುವುದಿಲ್ಲ. ಕೆಲವರು ದುಂದುವೆಚ್ಚ ಮಾಡಿ, ಸ್ವಯಂಅಪರಾಧದಿಂದ ಬಡವರಾಗಿರುತ್ತಾರೆ. ತಮ್ಮಲ್ಲಿರುವ ಹಣವನ್ನು ಹೇಗೆಉಪಯೋಗಿಸಬೇಕೆಂದು ಅವರಿಗೆ ತಿಳಿದಿರುವುದಿಲ್ಲ. ಅಂತವರಿಗೆ ಸಹಾಯ ಮಾಡಿದರೆ,ಅವರಿಗೆ ನೋವಾಗಬಹುದು. ಕೆಲವರು ಯಾವಾಗಲೂ ಬಡವರಾಗಿರುತ್ತಾರೆ. ಅವರುವಿವೇಚನಾರಹಿತವಾಗಿ ತಮ್ಮೆಲ್ಲಾ ಹಣ ಹಾಗೂ ಆದಾಯವನ್ನೆಲ್ಲಾ ಖರ್ಚುಮಾಡುತ್ತಾರೆ.KanCCh 350.3

    ಕೆಲವರು ಕ್ರೈಸ್ತ ಸಂದೇಶ ಸ್ವೀಕರಿಸಿದಾಗ, ಶ್ರೀಮಂತರಾಗಿರುವ ಸೋದರ ವಿಶ್ವಾಸಿಗಳಿಂದಸಹಾಯ ಪಡೆದುಕೊಳ್ಳುವುದು ತಮ್ಮ ಹಕ್ಕೆಂದು ಭಾವಿಸುತ್ತಾರೆ. ಆದರೆ ಅವರು ನಿರೀಕ್ಷೆಯಂತೆ ನಡೆಯದಿದ್ದಲ್ಲಿ, ಶ್ರೀಮಂತರಾದ ಕ್ರೈಸ್ತ ಸಹೋದರರು ಬಡವರಿಗೆ ಸಹಾಯ ಮಾಡದೆಕ್ರೈಸ್ತನಂಬಿಕೆಯಲ್ಲಿ ಜೀವಿಸುತ್ತಿಲ್ಲವೆಂದು ಸಭೆಗೆ ದೂರು ನೀಡಬಹುದು. ಇಂತಹಪ್ರಕರಣಗಳಲ್ಲಿ ಯಾರು ಹೊಣೆಗಾರರು? ದೇವರಸೇವೆ ನಿಲ್ಲಿಸಿ ಇಂತಹ ಬಡಕುಟುಂಬಗಳಿಗೆಸಭೆಯ ಕಾಣಿಕೆಯ ಹಣವನ್ನು ಖರ್ಚು ಮಾಡಬೇಕೇ? ಎಂದಿಗೂ ಇಲ್ಲ. ಬಡಕುಟುಂಬದತಂದೆ-ತಾಯಿಯರು ಇದಕ್ಕೆ ಜವಾಬ್ದಾರರು. ಸಬ್ಬತ್ತನ್ನು ಅಂಗೀಕರಿಸುವುದಕ್ಕಿಂತ ಮುಂಚಿನತೊಂದರೆಗಿಂತ ಅವರು ಈಗ ಹೆಚ್ಚಿನತೊಂದರೆಯನ್ನೇನೂ ಅನುಭವಿಸುತ್ತಿಲ್ಲ.KanCCh 350.4

    ಎಲ್ಲಾಸಭೆಗಳಲ್ಲಿಯೂ ಹಾಗೂ ಎಲ್ಲಾ ಕಾಲಗಳಲ್ಲಿಯೂ ಬಡವರು ಪ್ರತಿಯೊಂದುಸಭೆಯಲ್ಲಿ ಇದ್ದೇ ಇರುತ್ತಾರೆ. ಪ್ರತಿಯೊಬ್ಬ ಸದಸ್ಯರಿಗೂ ಅಂತವರನ್ನು ನೋಡಿಕೊಳ್ಳಬೇಕೆಂಬವೈಯಕ್ತಿಕ ಜವಾಬ್ದಾರಿಯನ್ನು ದೇವರು ಕೊಟ್ಟಿದ್ದಾನೆ. ಕ್ರಿಸ್ತನು ತೋರಿಸಿದಂತ ಪ್ರೀತಿಹಾಗೂ ಅನುಕಂಪವನ್ನೇ ನಾವು ಅವರಿಗೆ ತೋರಿಸಬೇಕು. ಈ ರೀತಿಯಲ್ಲಿ ನಾವುಶಿಸ್ತನ್ನು ಪಾಲಿಸಿ, ಕ್ರಿಸ್ತನ ಮಾದರಿಯಲ್ಲಿ ಕೆಲಸ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕು.KanCCh 351.1