Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಪರಲೋಕದಿಂದ ಸುರಕ್ಷತೆ

    ದೇವರ ಮಕ್ಕಳು ಆತನ ಮಾರ್ಗದಲ್ಲಿ ನಡೆದಾಗ, ದೇವದೂತರು ಅವರನ್ನು ರಕ್ಷಿಸುವರು. ಆದರೆ ಅಪಾಯವೆಂದು ತಿಳಿದಿದ್ದಾಗ್ಯೂ, ಸೈತಾನನನ್ನು ಎದುರಿಸಲು ಉದ್ದೇಶಪೂರ್ವಕವಾಗಿ ಅಪಾಯಕ್ಕೆ ಮುನ್ನುಗ್ಗುವವರ ಸುರಕ್ಷತೆಯ ಬಗ್ಗೆ ಯಾವುದೇ ಭರವಸವಿರುವುದಿಲ್ಲ. ಮಹಾಮೋಸಗಾರನಾದ ಸೈತಾನನ ಪ್ರತಿನಿಧಿಯು ತನ್ನ ಉದ್ದೇಶಸಾಧಿಸಿಕೊಳ್ಳಲು ಏನುಬೇಕಾದರೂ ಹೇಳುತ್ತಾನೆ ಹಾಗೂ ಮಾಡುತ್ತಾನೆ. ಅವನು ತನ್ನನ್ನು ಪ್ರೇತ ಸಂಪರ್ಕವಾದಿ (Spiritualist, ಮೃತರ ಪ್ರೇತಗಳು ಅರ್ಹರಾದ ಮಧ್ಯವರ್ತಿಗಳ ಮೂಲಕ ಬದುಕಿರುವ ಬಂಧುಮಿತ್ರರೊಡನೆ ಮಾತಾಡುವುದಲ್ಲದೆ, ಅವರಿಗೆ ಪ್ರತ್ಯಕ್ಷವಾಗುತ್ತವೆಂಬ ನಂಬಿಕೆಯುಳ್ಳವನು). ವಿದ್ಯುತ್‍ವೈದ್ಯ (Electric physician) ಅಥವಾ ಅಯಸ್ಕಾಂತದಿಂದ ರೋಗ ವಾಸಿಮಾಡುವವನು (Magnetic Healer) ಎಂಬ ಯಾವುದೇ ಹೆಸರಿನಿಂದ ಕರೆದುಕೊಳ್ಳಲಿ, ಅದು ಗಣನೆಗೆಬಾರದು. ಅವನು ವಂಚನೆಯ ಆಡಂಬರದ ಪ್ರದರ್ಶನದಿಂದ ಅಜಾಗರೂಕರಾಗಿರುವ ವ್ಯಕ್ತಿಗಳ ವಿಶ್ವಾಸಗಳಿಸುತ್ತಾನೆ. ತನ್ನನ್ನು ಆಶ್ರಯಿಸಿಕೊಂಡವರ ಕಷ್ಟಸಂಕಟ, ಬಾಧೆಗಳನ್ನು ತಾನು ತಿಳಿದಿದ್ದೇನೆ, ನಿಮ್ಮ ಎಲ್ಲಾ ಚರಿತ್ರೆಯು ನನಗೆ ತಿಳಿದಿದೆ ಎಂದು ಅವನು ಮೋಸದಿಂದ ತೋರ್ಪಡಿಸಿಕೊಳ್ಳುತ್ತಾನೆ. ಸೈತಾನನ ಹೃದಯದಲ್ಲಿ ಕತ್ತಲೆ ತುಂಬಿಕೊಂಡಿದ್ದರೂ, ಪ್ರಕಾಶಮಾನವಾದ ಬೆಳಕಿನ ದೇವದೂತನಂತೆ (2 ಕೊರಿಂಥ 11:14) ವೇಷ ಹಾಕಿಕೊಂಡು ತನ್ನ ಸಲಹೆ ಕೇಳಲು ಬರುವ ಮಹಿಳೆಯರಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಾನೆ. ನಿಮ್ಮ ವೈವಾಹಿ ಕಜೀವನದಲ್ಲಿರುವ ಅತೃಪ್ತಿಯೇ, ನಿಮ್ಮೆಲ್ಲಾ ಸಮಸ್ಯೆಗಳಿಗೆ ಕಾರಣವೆಂದು ಆ ಮಹಿಳೆಯರಿಗೆ ಅವನು ಹೇಳುತ್ತಾನೆ. ಇದು ನಿಜವಾಗಿರಲೂಬಹುದು, ಆದರೆ ಅಂತಹ ಮಾರ್ಗದರ್ಶಕರಿಂದ ಅವರ ಪರಿಸ್ಥಿತಿಯು ಉತ್ತಮವಾಗುವುದಿಲ್ಲ. ನಿಮಗೆ ಪ್ರೀತಿ, ಕರುಣೆಯ ಅಗತ್ಯವಿದೆ ಎಂದು ಆ ಮಹಿಳೆಯರಿಗೆ ಸೈತಾನನು ಹೇಳುತ್ತಾನೆ. ಅವರ ಯೋಗಕ್ಷೇಮ ಹಾಗೂ ನೆಮ್ಮದಿಯಲ್ಲಿ ಹೆಚ್ಚು ಆಸಕ್ತಿ ತೋರಿಸುವಂತೆ ನಟನೆಮಾಡುತ್ತಾ, ಸಂಶಯಪಡದೆ ಮೋಸಕ್ಕೆ ತುತ್ತಾಗುವ ಅವರ ಮನಸ್ಸನ್ನು ಅವನು ವಶಪಡಿಸಿಕೊಳ್ಳುತ್ತಾನೆ. ಶೀಘ್ರದಲ್ಲಿಯೇ ಆ ಮಹಿಳೆಯರು ಅವನಸಂಪೂರ್ಣ ಹಿಡಿತಕ್ಕೆಸಿಕ್ಕಿಬೀಳುವರು. ಮುಂದೆ ಅವರು ಪಾಪದಲ್ಲಿ ಬಿದ್ದು ಅವಮಾನ ನಿಂದನೆಗೆಒಳಗಾಗಿ ನಾಶವಾಗಿಹೋಗುವರು. ಇದು ಸೈತಾನನ ಹಿಡಿತದಲ್ಲಿ ಸಿಕ್ಕುವವರಿಗೆ ಉಂಟಾಗುವ ಭಯಂಕರ ಪರಿಣಾಮಗಳಾಗಿವೆ. KanCCh 403.2

    ಇಂತಹ ನೀಚಜನರು ಬಹಳವಾಗಿದ್ದಾರೆ. ಅವರು ಕೈಹಾಕಿದಲ್ಲಿ ಕುಟುಂಬಗಳು ನಾಶವಾಗುತ್ತವೆ, ದೈವಶಾಪದಿಂದ ಅವರ ಹೆಸರು ಅಪಮಾನಕ್ಕೀಡಾಗುವುದು ಹಾಗೂ ಮಾನಸಿಕ ವೇದನೆ ಉಂಟಾಗುತ್ತದೆ. ಆದರೆ ಇವೆಲ್ಲವುಗಳ ಬಗ್ಗೆ ಜಗತ್ತಿಗೆ ಹೆಚ್ಚಾಗಿ ತಿಳಿದಿಲ್ಲ. ಈ ನೀಚರು ಹೊಸಬರನ್ನು ವಂಚನೆಗೆ ಬಲಿಯಾಗಿಸುತ್ತಾರೆ. ಸೈತಾನನು ತಾನು ಮಾಡಬೇಕೆಂದಿದ್ದ ಇಂತಹ ನಾಶದಿಂದ ಇನ್ನೂ ಹೆಚ್ಚಾಗಿ ಅಟ್ಟಹಾಸದಿಂದ ಪರಮಾನಂದ ಪಡುತ್ತಾನೆ.KanCCh 404.1

    ಇಸ್ರಾಯೇಲ್ಯರ ಅರಸನಾದ “ಅಹಜ್ಯನು ಸಮಾರ್ಯದಲ್ಲಿ ತನ್ನ ಮೇಲುಪ್ಪರಿಗೆಯ ಜಾಳಾಂಧರ ಕಿಟಕಿಯಿಂದ ಬಿದ್ದು ಅಸ್ವಸ್ಥನಾದಾಗ, ತನ್ನ ಸೇವಕರನ್ನು ಕರೆದು ಅವರಿಗೆ- ನೀವು ಹೋಗಿ ಎಕ್ರೋನಿನ ದೇವರಾದ ಬಾಳ್ಜೆಬೂಬನ ಸನ್ನಿಧಿಗೆ ಹೋಗಿ ನಾನು ಈ ಅಸ್ವಸ್ಥತೆಯಿಂದ ವಾಸಿಯಾಗುವೆನೋ ಇಲ್ಲವೋ ಎಂಬುದನ್ನು ವಿಚಾರಿಸಿರಿ ಎಂದು ಹೇಳಿಕಳುಹಿಸಿದನು. ಆಗ ಯೆಹೋವನದೂತನು ತಿಷ್ಬೀಯನಾದ ಎಲೀಯನಿಗೆ- ನೀನುಹೋಗಿ ಸಮಾರ್ಯದ ಅರಸನಸೇವಕರನ್ನು ಎದುರುಗೊಂಡು ಅವರಿಗೆ- ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವುದಕ್ಕೆ ಹೋಗುವುದೇನು? ಇಸ್ರಾಯೆಲ್ಯರಲ್ಲಿ ದೇವರಿಲ್ಲವೋ? ಅಹಜ್ಯನು ತಾನು ಹತ್ತಿದ ಮಂಚದಿಂದಿಳಿಯದೆ ಸಾಯಲೇಬೇಕು ಎಂಬುದಾಗಿ ಯೆಹೋವನು ಅನ್ನುತ್ತಾನೆ” ಎಂದು ಹೇಳು ಎಂದು ಆಜ್ಞಾಪಿಸಿದನು (2 ಅರಸು 1:2-4).KanCCh 404.2

    ಇಸ್ರಾಯೇಲ್ಯರ ಅರಸನಾದ ಅಹಜ್ಯನ ಪಾಪ ಹಾಗೂ ಅದಕ್ಕೆ ಬಂದ ಶಿಕ್ಷೆಯು, ದುಷ್ಪರಿಣಾಮದ ಭಯವಿರುವ ಯಾರೂ ಸಹ ಅಲಕ್ಷ್ಯ ಮಾಡಲಾಗದಂತ ಎಚ್ಚರಿಕೆಯ ಒಂದು ಪಾಠವಾಗಿದೆ. ಅನ್ಯದೇವತೆಗಳಿಗೆ ನಾವ್ಯಾರೂ ಪೂಜೆ ಮಾಡುತ್ತಿಲ್ಲದಿದ್ದರೂ, ಲಕ್ಷಾಂತರ ಜನರು ಆಹಾಜನಂತೆ ಸೈತಾನನನ್ನು ಬೇರೆ ವಿಧವಾಗಿ ಪೂಜಿಸುತ್ತಿದ್ದಾರೆ. ವಿಗ್ರಹಾರಾಧನೆಯು ಆಧುನಿಕ ಶಿಕ್ಷಣ ಹಾಗೂ ವಿಜ್ಞಾನದ ಪ್ರಭಾವದಿಂದ ಹೆಚ್ಚಾದ ಸುಸಂಸ್ಕೃತ ರೀತಿಯಲ್ಲಿ ಮತ್ತು ಆಕರ್ಷಣೀಯ ರೀತಿಯಲ್ಲಿ ಇಂದಿಗೂ ಕಂಡುಬರುತ್ತಿದೆ. ಪ್ರವಾದನೆಯ ಖಂಡಿತವಾದ ವಾಕ್ಯಗಳ ಮೇಲೆ ನಂಬಿಕೆಯು ವೇಗವಾಗಿ ಕಡಿಮೆಯಾಗುತ್ತಿರುವುದನ್ನು ಪ್ರತಿದಿನದ ದುಃಖದಾಯಕ ಸಾಕ್ಷ್ಯಾಧಾರಗಳಿಂದ ತಿಳಿದುಕೊಳ್ಳಬಹುದು. ಇದರ ಬದಲಾಗಿ ಮೂಢನಂಬಿಕೆ ಮತ್ತು ಸೈತಾನನ ಮಾಟ, ವಾಮಾಚಾರಗಳ ಮೇಲಿನ ವಿಶ್ವಾಸವು ಜನರಮನಸ್ಸನ್ನು ಆಕರ್ಷಿಸುತ್ತಿದೆ. ದೇವರವಾಕ್ಯವನ್ನು ಜಾಗರೂಕತೆಯಿಂದ ಅಧ್ಯಯನ ಮಾಡದವರು ಮತ್ತು ಆತನಿಗೆ ತಮ್ಮಪ್ರತಿಯೊಂದು ಬಯಕೆ ಹಾಗೂ ಜೀವನದ ಉದ್ದೇಶವನ್ನು ಒಪ್ಪಿಸದಿರುವವರು ಹಾಗೂ ದೇವರ ಚಿತ್ತವೇನೆಂದು ಪ್ರಾರ್ಥನೆಯ ಮೂಲಕ ತಿಳಿದುಕೊಳ್ಳದವರು ಖಂಡಿತವಾಗಿಯೂ ದೇವರ ಮಾರ್ಗವನ್ನು ಬಿಟ್ಟು ಅಲೆಯುತ್ತಾ ಸೈತಾನನ ವಂಚನೆಗೆ ಬಲಿಯಾಗುವರು.KanCCh 404.3

    ಇಬ್ರಿಯರು ಅಂದರೆ ಯೆಹೂದ್ಯರು ಹಾಗೂ ಇಸ್ರಾಯೇಲ್ಯರು ಮಾತ್ರ ಸತ್ಯ ದೇವರಿಂದ ಆರಿಸಲ್ಪಟ್ಟು ಆತನ ಜ್ಞಾನವನ್ನು ಹೊಂದಿದ್ದ ಏಕೈಕ ಜನಾಂಗದವರಾಗಿದ್ದರು. ಇಸ್ರಾಯೇಲ್ಯರ ಅರಸನಾದ ಅಹಜ್ಯನು ತನ್ನ ಅನಾರೋಗ್ಯದ ಬಗ್ಗೆ ವಿಚಾರಿಸುವುದಕ್ಕೆ ಫಿಲಿಷ್ಟಿಯರ ಅನ್ಯದೇವತೆಯನ್ನು ವಿಚಾರಿಸಲು ಕಳುಹಿಸಿದಾಗ, ಭೂಮ್ಯಾಕಾಶಗಳಸೃಷ್ಟಿಕರ್ತನಾದ ಯೆಹೋವನಿಗಿಂತ ಬಾಳ್ಜೆಬೂಬನ ಮೇಲೆ ಹೆಚ್ಚು ಭರವಸೆ ಇಟ್ಟಿದ್ದೇನೆಂದು ಬಹಿರಂಗವಾಗಿ ತಿಳಿಯಪಡಿಸಿದನು. ಇದೇರೀತಿಯಾಗಿ ದೇವರವಾಕ್ಯದ ಜ್ಞಾನವಿದೆ ಎಂದು ಹೇಳಿಕೊಂಡು ಜ್ಞಾನ ವಿವೇಕ ಹಾಗೂ ಬಲದ ಮೂಲನಾದ ಕರ್ತನನ್ನು ಬಿಟ್ಟು ಅಂಧಕಾರದ ಶಕ್ತಿಗಳಿಂದ ಸಹಾಯ ಅಥವಾ ಸಲಹೆ ಕೇಳಿಕೊಳ್ಳುವವರು ಆತನನ್ನು ಅಗೌರವಿಸುತ್ತಾರೆ. ದುಷ್ಟನೂ, ವಿಗ್ರಹಾರಾಧಕನೂ ಆದ ರಾಜನ ಇಂತಹ ಕಾರ್ಯದ ಮೇಲೆ ದೇವರ ಕೋಪವುಂಟಾದಲ್ಲಿ, ಆತನ ಸೇವಕರೆಂದು ಹೇಳಿಕೊಂಡವರು ಇಂತಹ ಮಾರ್ಗ ಅನುಸರಿಸಿದಲ್ಲಿ ಅದು ಆತನ ಉಗ್ರಕೋಪಕ್ಕೆ ಕಾರಣವಾಗುವುದಿಲ್ಲವೇ?KanCCh 405.1