Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ತಕ್ಕಡಿಯಲ್ಲಿ ತೂಗಲ್ಪಟ್ಟದ್ದು

    ದೇವರು ದೇವದರ್ಶನ ಗುಡಾರದ ತಕ್ಕಡಿಯಲ್ಲಿ ನಮ್ಮೆಲ್ಲರ ಗುಣ, ನಡತೆ ಮತ್ತು ಉದ್ದೇಶಗಳನ್ನು ತೂಕ ಹಾಕುತ್ತಾನೆ. ನಮಗೋಸ್ಕರ ತನ್ನ ಪ್ರಾಣಕೊಟ್ಟ ವಿಮೋಚಕನು ನಮಗೆ- ನೀನು ಪ್ರೀತಿ ಮತ್ತು ವಿಧೇಯತೆಯಲ್ಲಿ ಕಡಿಮೆಯಾಗಿದ್ದೀ ಎಂದು ಹೇಳಿದಲ್ಲಿ, ಅದು ಭಯಂಕರವಾಗಿರುವುದು. ದೇವರು ನಮಗೆ ಅತ್ಯಮೂಲ್ಯವಾದ ವರಗಳನ್ನು ಕೊಟ್ಟಿದ್ದಾನೆ. ನಾವು ತಪ್ಪು ಮಾಡದಂತೆಯೂ ಅಥವಾ ಕತ್ತಲೆಯಲ್ಲಿ ನಡೆಯದ ಹಾಗೆ ಆತ್ಮೀಕ ಬೆಳಕನ್ನು ನೀಡಿ ತನ್ನ ಇಚ್ಛೆಯನ್ನು ತಿಳಿಯಪಡಿಸಿದ್ದಾನೆ. ತಕ್ಕಡಿಯಲ್ಲಿ ತೂಗಲ್ಪಟ್ಟು, ನ್ಯಾಯತೀರ್ಪಿನ ದಿನದಲ್ಲಿ ಕಡಿಮೆಯೆಂದು ಕಂಡುಬಂದಲ್ಲಿ, ಅದರ ಫಲಿತಾಂಶವು ಭಯಾನಕವಾಗಿದೆ. ಇಂತಹ ದೊಡ್ಡ ತಪ್ಪನ್ನು ನಾವೆಂದೂ ಸರಿಪಡಿಸಿಕೊಳ್ಳಲಾಗದು. ಯೌವನಸ್ಥರಾದ ಸ್ನೇಹಿತರೇ, ನಿಮ್ಮ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಕಂಡುಬರಬೇಕಲ್ಲವೇ?KanCCh 224.2

    ನೀವು ದೇವರಿಗಾಗಿ ಮಾಡಬೇಕಾದ ಕೆಲಸವನ್ನು ಆತನು ನಿಮಗೆ ನೇಮಿಸಿದ್ದಾನೆ. ಅದು ನಿಮ್ಮನ್ನು ದೇವರೊಂದಿಗೆ ಸಹ ಕೆಲಸಗಾರರನ್ನಾಗಿ ಮಾಡುತ್ತದೆ. ರಕ್ಷಿಸಲ್ಪಡಬೇಕಾದ ಅಸಂಖ್ಯಾತ ಜನರು ನಿಮ್ಮ ಸುತ್ತಲೂ ಇದ್ದಾರೆ. ನಿಮ್ಮ ಪ್ರಾಮಾಣಿಕವಾದ ಪ್ರಯತ್ನದಿಂದ ಅನೇಕರಿಗೆ ನೀವು ಉತ್ತೇಜನ ನೀಡಿ ಆಶೀರ್ವಾದ ತರಬಹುದು. ಅವರನ್ನು ಪಾಪದಿಂದ ನೀತಿಯ ಕಡೆಗೆ ನಡೆಸಬಹುದು. ದೇವರಿಗೆ ನಾನು ಲೆಕ್ಕಕೊಡಬೇಕಾಗಿದೆ ಎಂಬ ಅರಿವು ನಿಮ್ಮಲ್ಲಿ ಬಂದಾಗ, ಪ್ರಾರ್ಥನೆಯಲ್ಲಿ ವಿಶ್ವಾಸ ಮತ್ತು ಸೈತಾನನ ಶೋಧನೆಗಳಿಗೆ ವಿರುದ್ಧವಾಗಿ ನಂಬಿಗಸ್ತಿಕೆಯಿಂದ ಎಚ್ಚರವಾಗಿರಬೇಕೆಂಬ ಭಾವನೆ ನಿಮ್ಮಲ್ಲುಂಟಾಗುತ್ತದೆ. ನೀವು ಯಥಾರ್ಥವಾದ ಕ್ರೈಸ್ತರಾಗಿದ್ದಲ್ಲಿ, ನಿಮ್ಮ ವೇಷ ಭೂಷಣದಲ್ಲಿ ಅಹಂಕಾರ ತೋರಿಸುವುದಕ್ಕೆ ಬದಲಾಗಿ, ಲೋಕದಲ್ಲಿರುವ ನೈತಿಕ ಅಂಧಕಾರಕ್ಕಾಗಿ ನೀವು ದುಃಖಿಸುವಿರಿ. ಲೋಕದಲ್ಲಿ ನಡೆಯುತ್ತಿರುವ ಅಸಹ್ಯ ಕಾರ್ಯಗಳನ್ನು ಕಂಡು ನೀವು ಕಣ್ಣೀರಿಟ್ಟು ಕೊರಗುವಿರಿ. ಆಭರಣಗಳ ಆಡಂಬರದ ಪ್ರದರ್ಶನ, ವಸ್ತಾಲಂಕಾರ ಮಾಡಬೇಕೆಂಬ ಸೈತಾನನ ಶೋಧನೆಗಳನ್ನು ನೀವು ಎದುರಿಸುವಿರಿ. ನಿಮಗೆ ಕೊಟ್ಟಿರುವ ಉನ್ನತವಾದ ಜವಾಬ್ದಾರಿಯನ್ನು ಅಲಕ್ಷಿಸಿ, ಇಂತಹ ಥಳಕುಪಳಕಿನ ಪ್ರದರ್ಶನ, ಅಲಂಕಾರಗಳಿಂದ ತೃಪ್ತಿಹೊಂದಬೇಕೆಂಬ ನಿಮ್ಮ ಬಯಕೆಯಿಂದ ಬೌದ್ಧಿಕಶಕ್ತಿ ಕುಂಠಿತವಾಗಿ ಮನಸ್ಸಿನಲ್ಲಿ ಸಂಕುಚಿತ ಭಾವನೆ ಉಂಟಾಗುವುದು.KanCCh 225.1

    ಇಂದಿನ ಯೌವನಸ್ಥರು ಇಚ್ಛೆಪಟ್ಟಲ್ಲಿ ಕ್ರಿಸ್ತನೊಂದಿಗೆ ಜೊತೆ ಕೆಲಸಗಾರರಾಗಬಹುದು. ಆ ರೀತಿ ಕೆಲಸಮಾಡಿದಲ್ಲಿ, ಅವರ ನಂಬಿಕೆ ಬಲಗೊಳ್ಳುವುದು ಮಾತ್ರವಲ್ಲದೆ, ದೈವೀಕ ವಿಷಯಗಳ ಅವರ ಜ್ಞಾನವು ಹೆಚ್ಚಾಗುವುದು. ಯಥಾರ್ಥವಾದ ಪ್ರತಿಯೊಂದು ಉದ್ದೇಶ ಹಾಗೂ ಯೋಗ್ಯವಾದ ಕಾರ್ಯವು ಜೀವಬಾಧ್ಯರ ಪಟ್ಟಿಯಲ್ಲಿ ಬರೆಯಲ್ಪಡುವುದು. ಈ ಜೀವನದ ಕ್ಷಣಿಕವಾದ ಸುಖಸಂತೋಷಗಳನ್ನು ತೃಪ್ತಿಪಡಿಸಿಕೊಂಡು ತಮ್ಮ ಬೌದ್ಧಿಕಮಟ್ಟವನ್ನು ಕುಂಠಿತಗೊಳಿಸಿಕೊಳ್ಳುತ್ತಿರುವ ಯೌವನಸ್ಥರು ತಮ್ಮ ಪಾಪಮಯ ಜೀವನವನ್ನು ತಿಳಿದುಕೊಳ್ಳುವಂತೆ ಅವರನ್ನು ಎಚ್ಚರಿಸಬೇಕೆಂದು ಶ್ರೀಮತಿ ವೈಟಮ್ಮನವರು ಬಯಸುತ್ತಾರೆ. ಯುವಕ, ಯುವತಿಯರು ಈ ಲೋಕದ ಥಳಕುಪಳುಕಿನ ಸೆಳೆತದಿಂದ ದೂರವಾಗಿ ತಮ್ಮ ನಡೆನುಡಿ, ಆಲೋಚನೆಗಳಲ್ಲಿ ಉನ್ನತವಾಗಿದ್ದು, ದೇವರನ್ನು ಮಹಿಮೆಪಡಿಸುವುದು ಅವರ ಉದ್ದೇಶವಾಗಿರಬೇಕು. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವರಶಾಂತಿಯು ನಿಮ್ಮದಾಗುವುದು,KanCCh 225.2

    ಯೌವನಸ್ಥರು ಸ್ಥಿರಚಿತ್ತರೂ, ಪ್ರಾಮಾಣಿಕರೂ ಆಗಿದ್ದು, ತನ್ನ ಶ್ರೇಷ್ಟವಾದ ಕಾರ್ಯ ಮಾಡಲು ಸಿದ್ಧತೆ ಮಾಡಿಕೊಂಡು ಅದರ ಜವಾಬ್ದಾರಿಗಳನ್ನು ಹೊರುವುದಕ್ಕೆ ಯೋಗ್ಯರಾಗಿರಬೇಕೆಂದು ದೇವರು ಬಯಸುತ್ತಾನೆ. ಧೈರ್ಯಶಾಲಿಗಳೂ, ಭ್ರಷ್ಟರಲ್ಲದವರೂ, ನೈತಿಕವಾಗಿ ಬಲಿಷ್ಠರೂ ಆಗಿದ್ದು, ತಮ್ಮ ಮುಂದಿರುವ ಹೋರಾಟವನ್ನು ಪೌರುಷದಿಂದ ಎದುರಿಸಿ ದೇವರನ್ನು ಮಹಿಮೆಪಡಿಸಿ, ಮಾನವರಿಗೆ ಆಶೀರ್ವಾದ ತರುವಂತ ಯುವಕ ಯುವತಿಯರನ್ನು ದೇವರು ಕರೆಯುತ್ತಿದ್ದಾನೆ. ಅವರು ಸತ್ಯವೇದದ ಅಧ್ಯಯನದಲ್ಲಿ ಆಸಕ್ತಿ ವಹಿಸಿ, ತಮ್ಮ ಶಾರೀರಿಕ ಬಯಕೆಗಳನ್ನು ದೂರ ಮಾಡಿ, ತಮ್ಮ ಸೃಷ್ಟಿಕರ್ತನೂ, ವಿಮೋಚಕನೂ ಆದ ಯೇಸುಕ್ರಿಸ್ತನ ಶಬ್ದಕ್ಕೆ ಕಿವಿಟ್ಟರೆ, ಅವರು ದೇವರೊಂದಿಗೆ ಸಮಾಧಾನ ಹೊಂದುವುದು ಮಾತ್ರವಲ್ಲದೆ, ಉನ್ನತ ವ್ಯಕ್ತಿತ್ವವುಳ್ಳ ಶ್ರೇಷ್ಠ ಯುವಕ ಯುವತಿಯರಾಗುವರು. KanCCh 225.3

    ಕ್ರಿಸ್ತನ ಬೆಳಕು ನೀವು ಹೋಗುವ ಎಲ್ಲೆಡೆಯೂ ಪಸರಿಸಲಿ. ನೀವು ಬಲವಾದ ಉದ್ದೇಶ ಹೊಂದಿದವರೂ, ಅಷ್ಟೊಂದು ಸುಲಭವಾಗಿ ಕೆಟ್ಟವರ ಸಹವಾಸಕ್ಕೆ ಬೀಳದವರೂ ಆಗಿದ್ದೇವೆಂಬುದನ್ನು ಇತರರಿಗೆ ತೋರಿಸಿ, ದೇವರಿಗೆ ಅಗೌರವ ತೋರುವವರ ಸಲಹೆಗಳಿಗೆ ಕೂಡಲೇ ಒಪ್ಪಿಗೆ ನೀಡಬೇಡಿ. ಬದಲಾಗಿ ಅವರನ್ನು ದುಷ್ಟತನದಿಂದ ರಕ್ಷಿಸಿ, ಅವರಲ್ಲಿ ಬದಲಾವಣೆ ತರುವುದಕ್ಕೆ ಪ್ರಯತ್ನಿಸಿ.KanCCh 226.1

    ಯಾವಾಗಲೂ ಪ್ರಾರ್ಥನೆಯಲ್ಲಿ ನಿರತರಾಗಿರಿ. ಪಾಪದಿಂದ ರಕ್ಷಿಸಲ್ಪಟ್ಟ ಒಬ್ಬ ವ್ಯಕ್ತಿ ಕ್ರಿಸ್ತನಲ್ಲಿ ಸೇರಿದಾಗ, ಪರಲೋಕದಲ್ಲಿ ಹರ್ಷವುಂಟಾಗುವುದು. ನಿಮ್ಮ ಸಂತೋಷವೆಂಬ ಕಿರೀಟದಲ್ಲಿ ಒಂದು ನಕ್ಷತ್ರ ಸೇರಿಸಲ್ಪಡುವುದು. ರಕ್ಷಿಸಲ್ಪಟ್ಟ ಒಬ್ಬ ವ್ಯಕ್ತಿ ತನ್ನ ದೈವಭಕ್ತಿಯ ಪ್ರಭಾವದಿಂದ ಇತರರನ್ನು ರಕ್ಷಣೆಯ ಮಾರ್ಗಕ್ಕೆ ತಂದಾಗ, ಈ ಕಾರ್ಯವು ಅಭಿವೃದ್ಧಿಯಾಗುವುದು. ಈ ಸೇವೆಯ ಪ್ರತಿಫಲವು ಪರಲೋಕದಲ್ಲಿ ಮಾತ್ರ ತಿಳಿದುಬರುವುದು.KanCCh 226.2

    ನನ್ನಿಂದ ಏನೂಮಾಡಲು ಸಾಧ್ಯವಿಲ್ಲವೆಂದು ತಿಳಿದು, ಕರ್ತನಸೇವೆ ಮಾಡಲು ಹಿಂಜರಿಯಬಾರದು. ನಿಮ್ಮ ಅಲ್ಪಸೇವೆಯನ್ನು ನಿಷ್ಠೆಯಿಂದ ಮಾಡಬೇಕು. ಯಾಕೆಂದರೆ ನಿಮ್ಮ ಪ್ರಯತ್ನದೊಂದಿಗೆ ದೇವರು ಕಾರ್ಯಮಾಡುವನು. ನೀವು ಕರ್ತನಾದ ದೇವರ ಸಂತೋಷದಲ್ಲಿ ಪಾಲ್ಗೊಳ್ಳಲು ಯೋಗ್ಯರಾದವರೆಂದು ಆತನು ಜೀವಬಾಧ್ಯರಪಟ್ಟಿಯಲ್ಲಿ ನಿಮ್ಮ ಹೆಸರು ಬರೆಯುವನು.KanCCh 226.3

    *****