Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಗೊತ್ತುಮಾಡಿಕೊಳ್ಳದೆಇಬ್ಬರುಜೊತೆಯಾಗಿನಡೆಯುವರೋ?

    ಕೆಲವು ಸಂದರ್ಭಗಳಲ್ಲಿ ನಾನು ಮದುವೆಯಾಗಲಿರುವ ವಿಶ್ವಾಸಿಯು ಕ್ರೈಸ್ತಳಲ್ಲ. ಕ್ರೈಸ್ತನಲ್ಲ ಎಂಬುದನ್ನು ಬಿಟ್ಟರೆ ಬೇರೆಲ್ಲಾ ವಿಧದಲ್ಲಿಯೂ ಉತ್ತಮ ಸಂಗಾತಿಯಾಗಿದ್ದಾರೆಂದು ಹೇಳುವುದನ್ನು ಕೇಳಿದ್ದೇವೆ. ವಿಶ್ವಾಸಿಯಾದವರು ಉತ್ತಮ ನಿರ್ಧಾರದ ಮೂಲಕ ಅವಿಶ್ವಾಸಿಗಳೊಂದಿಗೆ ಮದುವೆಯಾಗುವುದು ತಪ್ಪೆಂದು ಹೇಳಿದರೂ, ಹತ್ತರಲ್ಲಿ ಒಂಬತ್ತು ಪ್ರಕರಣಗಳಲ್ಲಿ ಪ್ರೀತಿಯೇ ಜಯ ಹೊಂದುತ್ತದೆ. ಅವರು ಪರಸ್ಪರ ಮದುವೆಯ ಪ್ರಮಾಣ ಮಾಡಿದಾಗಲೇ, ಆತ್ಮೀಕ ಅವನತಿಯು ಆರಂಭವಾಗುತ್ತದೆ. ಧರ್ಮದಲ್ಲಿ ಉತ್ಸಾಹ ಕಡಿಮೆಯಾಗುತ್ತದೆ. ಹೀಗೆ ಕ್ರೈಸ್ತ ನಂಬಿಕೆಯ ನಿಧಾನವಾಗಿ ಕುಂದಿಹೋಗುತ್ತದೆ. ಕೊನೆಯಲ್ಲಿ ಅವರಿಬ್ಬರೂ ಸೈತಾನನ ಅಡಿಯಾಳಾಗುತ್ತಾರೆ. ಮದುವೆಯ ಉತ್ಸವದಲ್ಲಿಯೂ ಮನಸ್ಸಾಕ್ಷಿ ನಂಬಿಕೆ, ಸತ್ಯಕ್ಕೆ ಬದಲಾಗಿ ಪ್ರಾಪಂಚಿಕತೆ ಅಂದರೆ ಲೋಕದ ಮೇಲಣ ಆಸೆಯೇ ಪ್ರಾಮುಖ್ಯವಾಗಿರುತ್ತದೆ. ಕ್ರೈಸ್ತವಿಶ್ವಾಸಿಯು ಕ್ರೈಸ್ತರಲ್ಲದವರನ್ನು ಮದುವೆಯಾದಾಗ, ಹೊಸ ಕುಟುಂಬದಲ್ಲಿ ಪ್ರಾರ್ಥನೆಗೆ ಗೌರವವಿರುವುದಿಲ್ಲ. ವಧು-ವರರಿಬ್ಬರೂ ಪರಸ್ಪರ ತಾವೇ ತಮ್ಮನ್ನು ಆರಿಸಿಕೊಂಡಿದ್ದಾರೆ ಮತ್ತು ಯೇಸುಸ್ವಾಮಿಯನ್ನು ತಿರಸ್ಕರಿಸಿದ್ದಾರೆ.KanCCh 131.2

    ಅವಿಶ್ವಾಸಿಯು ಹೊಸದಾದ ವೈವಾಹಿಕ ಜೀವನದಲ್ಲಿ ಮೊದಲು ಯಾವ ವಿರೋಧತೆ ಸೇರಿಸುವುದಿಲ್ಲ. ಆದರೆ ಬೈಬಲ್ಲಿನ ಸತ್ಯದ ವಿಷಯಕ್ಕೆ ಗಮನ ಕೊಡಬೇಕೆಂದು ತಿಳಿಸಿದಾಗ, ಅವರ ಮನಸ್ಸಿನ ಭಾವನೆಯು ಆಗ ಹೊರಬರುವುದು. ಆಗ ಅವಿಶ್ವಾಸಿಯು ವಿಶ್ವಾಸಿಯಾದತನ್ನ ಹೆಂಡತಿ/ಗಂಡನಿಗೆ “ನಾನು ಯಾರೆಂದು ನಿನಗೆ ಮೊದಲೇ ತಿಳಿದಿತ್ತು. ಆದರೂ ನನ್ನನ್ನು ಮದುವೆಯಾಗಿದ್ದೀ. ಈ ವಿಷಯದಲ್ಲಿ ನನಗೆ ತೊಂದರೆ ಕೊಡಬೇಡ. ಇಂದಿನಿಂದ ನಮ್ಮಿಬ್ಬರ ನಡುವಿನ ಮಾತುಕತೆಯಲ್ಲಿ ನಿನ್ನ ಕ್ರೈಸ್ತಧರ್ಮದ ವಿಷಯ ಬರಬಾರದು” ಎಂದು ಹೇಳುವರು. ವಿಶ್ವಾಸಿಯು ತನ್ನ ನಂಬಿಕೆಯ ಬಗ್ಗೆ ವಿಶೇಷ ಶ್ರದ್ಧೆಯನ್ನು ಮನಃಪೂರ್ವಕವಾಗಿ ತೋರಿಸಿದಾಗ, ಕ್ರೈಸ್ತ ಧರ್ಮದ ಬಗ್ಗೆ ಆಸಕ್ತಿಯಿಲ್ಲದ ಅವಿಶ್ವಾಸಿಗೆ ನಿಷ್ಕರುಣೆ ಎನಿಸುವುದು.KanCCh 131.3

    ಹೊಸದಾಗಿ ಮದುವೆಯಾಗಿದ್ದೇನೆ. ಆದುದರಿಂದ ನನ್ನ ಸಂಗಾತಿಗೆ ಅವನು/ ಅವಳು ಹೇಳಿದ್ದನ್ನು ಸ್ವಲ್ಪ ಮಟ್ಟಿಗೆ ಆರಂಭದಲ್ಲಿ ಒಪ್ಪಿಕೊಳ್ಳುವೆನು ಎಂದು ಕ್ರೈಸ್ತ ವಿಶ್ವಾಸಿಯು ತನ್ನಲ್ಲಿ ವಿಚಾರ ಮಾಡಬಹುದು. ಈ ಕಾರಣದಿಂದ ಸಾಮಾಜಿಕ ಮತ್ತು ಲೌಕಿಕವಾದ ಮನರಂಜನೆಗೆ ಅವರು ಅಡ್ಡಿಪಡಿಸುವುದಿಲ್ಲ. ಆರಂಭದಲ್ಲಿ ಇದನ್ನು ಮಾಡುವಾಗ ವಿಶ್ವಾಸಿಯ ಭಾವನೆಗೆ ನೋವುಂಟಾಗುವುದು. ಆದರೆ ಯಾವಾಗ ಕ್ರೈಸ್ತ ಧರ್ಮದ ಸತ್ಯದಲ್ಲಿ ಆಸಕ್ತಿಯು ಕ್ರಮೇಣವಾಗಿ ಕಡಿಮೆಯಾಗುತ್ತಾ ಬಂದಂತೆ, ನಂಬಿಕೆಗೆ ಬದಲಾಗಿ ಸಂಶಯ ಹಾಗೂ ಅಪನಂಬಿಕೆ ಉಂಟಾಗುತ್ತದೆ. ಒಂದು ಕಾಲದಲ್ಲಿ ದೃಢವಾದ ನಂಬಿಕೆಯುಳ್ಳವನೂ, ಕ್ರಿಸ್ತನ ಪ್ರಾಮಾಣಿಕ ಅನುಯಾಯಿಯೂ ಆಗಿದ್ದವನು ಅವಿಶ್ವಾಸಿಯೊಂದಿಗೆ ಮದುವೆಯಾದ ನಂತರ ಈ ರೀತಿಯಲ್ಲಿ ನಂಬಿಕೆಯಲ್ಲಿ ಚ೦ಚಲನೂ, ಸಂಶಯಪಡುವನೂ ಆಗುವನೆಂದು ಮೊದಲು ಯಾರೂ ಯೋಚಿಸಿರಲಿಲ್ಲ.KanCCh 132.1

    ಲೋಕದೊಂದಿಗೆ ಒಡನಾಟ ಹೊಂದಿರುವುದು ಅಪಾಯಕರ. ವಿಶ್ವಾಸಿಯು ಅವಿಶ್ವಾಸಿಯೊಂದಿಗೆ ಮದುವೆಯಾದಾಗ ಅವನ ಧಾರ್ಮಿಕ ನಂಬಿಕೆಯು ಮುಕ್ತಾಯವಾಗುತ್ತದೆಂದು ಸೈತಾನನಿಗೆ ಚೆನ್ನಾಗಿ ತಿಳಿದಿದೆ. ಅವನು ಕ್ರಿಸ್ತನನ್ನು ಬಿಟ್ಟು ದೂರ ಹೋದನು. ವಿಶ್ವಾಸಿಗಳು ಕ್ರೈಸ್ತರಲ್ಲದವರನ್ನು ಮದುವೆಯಾದಾಗ ಆರಂಭದಲ್ಲಿ ಕ್ರಿಸ್ತರಂತೆ ಜೀವಿಸಲು ಪ್ರಯತ್ನಿಸಬಹುದು. ಆದರೆ ಅವರ ಎಲ್ಲಾ ಪ್ರಯತ್ನಗಳೂ ಪ್ರವಾಹಕ್ಕೆ ವಿರುದ್ಧವಾಗಿ ಈಜಿದಂತಾಗುವುದು. ಒಂದು ಕಾಲದಲ್ಲಿ ತಮ್ಮ ಕ್ರೈಸ್ತನಂಬಿಕೆ ಹಾಗೂ ನಿರೀಕ್ಷೆಯ ವಿಷಯವಾಗಿ ಮಾತನಾಡುವುದು ಅವರಿಗೆ ಸಂತೋಷ ತರುತ್ತಿತ್ತು. ಆದರೆ ಈಗ ಈ ವಿಷಯವಾಗಿ ಮಾತಾಡಿದರೆ ಅವಿಶ್ವಾಸಿಯಾದ ತನ್ನ ಸಂಗಾತಿಯು ಅದರಲ್ಲಿ ಆಸಕ್ತಿ ತೋರಿಸುವುದಿಲ್ಲವೆಂದು ತಿಳಿದು ಅದರ ಬಗ್ಗೆ ಮಾತಾಡುವುದಿಲ್ಲ. ಇದರ ಪರಿಣಾಮವಾಗಿ ಅಮೂಲ್ಯವಾದ ಸತ್ಯದ ಮೇಲಣ ನಂಬಿಕೆ ಕುಂದಿಹೋಗುತ್ತದೆ ಮತ್ತು ಸೈತಾನನು ಅವರ ಹೃದಯದಲ್ಲಿ ಕ್ರೈಸ್ತಧರ್ಮದ ಸಿದ್ಧಾಂತಗಳ ಬಗ್ಗೆ ಸಂದೇಹವುಂಟಾಗುವಂತೆ ಮಾಡುವನು.KanCCh 132.2

    “ಗೊತ್ತುಮಾಡಿಕೊಳ್ಳದೆಇಬ್ಬರುಜೊತೆಯಾಗಿನಡೆಯುವರೇ?” (ಆಮೋಸ 3:3). “ಇದಲ್ಲದೇ ನಿಮ್ಮಲ್ಲಿ ಇಬ್ಬರು ಬೇಡಿಕೊಳ್ಳತಕ್ಕೆ ಯಾವುದಾದರೂ ಒಂದು ಕಾರ್ಯದವಿಷಯದಲ್ಲಿ, ಭೂಲೋಕದಲ್ಲಿ ಒಂದೇ ಮನಸ್ಸುಳ್ಳವರಾಗಿದ್ದರೆ, ಅದು ಪರಲೋಕದಲ್ಲಿರುವ ನನ್ನ ತಂದೆಯಿಂದ ಅವರಿಗೆ ಆಗುವುದೆಂದು ನಿಮಗೆ ಹೇಳುತ್ತೇನೆ” ಎಂದು ಯೇಸುಸ್ವಾಮಿ ಹೇಳಿದ್ದಾನೆ (ಮಾರ್ಕ 18:20). ಆದರೆ ಇಲ್ಲಿನ ದೃಶ್ಯವು ಎಷ್ಟೊಂದು ವಿಚಿತ್ರವಾಗಿದೆಯಲ್ಲವೇ! ಒಬ್ಬರು ಕ್ರೈಸ್ತ ಭಕ್ತಿಯಲ್ಲಿ ಬಹಳಷ್ಟು ಆಸಕ್ತಿ ಹೊಂದಿದ್ದಾರೆ. ಮತ್ತೊಬ್ಬರು ಅಷ್ಟೇ ನಿರ್ಲಕ್ಷ್ಯದಿಂದ ದೇವರಲ್ಲಿ ಅಸಡ್ಡೆ ತೋರುತ್ತಾರೆ. ಒಬ್ಬರು ನಿತ್ಯಜೀವದ ದಾರಿ ಹುಡುಕುತ್ತಿದ್ದರೆ, ಮತ್ತೊಬ್ಬರು ಮರಣಕ್ಕೆ ನಡೆಸುವ ಅಗಲವಾದ ಮಾರ್ಗದಲ್ಲಿ ನಡೆಯುತ್ತಿದ್ದಾರೆ.KanCCh 132.3

    ಕ್ರೈಸ್ತರಲ್ಲದವರೊಂದಿಗೆ ಮದುವೆಯಾದ ಕಾರಣದಿಂದ ಸಾವಿರಾರು ಜನರು ಕ್ರಿಸ್ತನನ್ನು ಹಾಗೂ ಪರಲೋಕವನ್ನು ತ್ಯಜಿಸಿದ್ದಾರೆ. ಮರಣಕ್ಕೆ ಒಳಗಾಗಿರುವ ತಮ್ಮ ಪತಿ/ ಪತ್ನಿಯ ಒಡನಾಟವನ್ನು ಬಯಸುವ ಅವರಿಗೆ ಕ್ರಿಸ್ತನ ಪ್ರೀತಿ, ಅನ್ನೋನ್ಯತೆಯು ಬೆಲೆಯಿಲ್ಲದ್ದೆಂದು ಅನಿಸುವುದೇ? ಅಮೂಲ್ಯವಾದ ರಕ್ಷಕನ ಬಗ್ಗೆ ಯಾವುದೇ ಪ್ರೀತಿಯಿಲ್ಲದವರಿಗಾಗಿ ಯುಗಯುಗಾಂತರಗಳವರೆಗೆ ನಿತ್ಯ ಜೀವನದ ಸೌಭಾಗ್ಯವನ್ನು ಕಳೆದುಕೊಳ್ಳಲು ಇಚ್ಚಿಸುವುದು, ಅವರ ದೃಷ್ಟಿಯಲ್ಲಿ ಪರಲೋಕವು ಅಲ್ಪವೆಂದು ಎಣಿಸಲ್ಪಟ್ಟಿದೆಯೇ?KanCCh 133.1