Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಸೆವೆಂತ್ ಡೇ ಅಡ್ವೆಂಟಿಸ್ಟರು ಲೋಕಕ್ಕೆ ಮಾದರಿಯಾಗಿರಬೇಕು

    ಸುಧಾರಕರೆಂದು ಹೇಳಿಕೊಳ್ಳುವ ಸೆವೆಂತ್ ಡೇ ಅಡ್ವೆಂಟಿಸ್ಪರಾದ ನಾವು, ಲೋಕಕ್ಕೆ ಬೆಳಕಾಗಿಯೂ, ದೇವರಿಗೆ ನಂಬಿಗಸ್ತರಾದ ಕಾವಲುಗಾರರಾಗಿಯೂ ಇದ್ದು, ಸೈತಾನನು ನಮ್ಮ ಆಹಾರ ಅಥವಾ ಲೈಂಗಿಕ ಕಾಮನೆಗಳನ್ನು ತೀರಿಸಿಕೊಳ್ಳುವಂತ ಅಪೇಕ್ಷೆ ತರುವ ಎಲ್ಲಾ ವಿಧವಾದ ಶೋಧನೆಗಳನ್ನು ಎದುರಿಸಲು ಶಕ್ತರಾಗಿರಬೇಕು. ನಮ್ಮ ಮನಸ್ಸಾಕ್ಷಿಯನ್ನು ಜಡಗೊಳಿಸುವ ಅಥವಾ ಶೋಧನೆಗೆ ಪ್ರಚೋದಿಸುವ ಎಲ್ಲಾ ಅಭ್ಯಾಸಗಳಿಂದ ನಾವು ದೂರವಾಗಿರಬೇಕು. ದೇವರ ಸ್ವರೂಪದಲ್ಲಿ ಉಂಟುಮಾಡಲ್ಪಟ್ಟ ನಾವು ಸೈತಾನನು ನಮ್ಮನ್ನು ಹತೋಟಿಗೆ ತೆಗೆದುಕೊಳ್ಳಲಿಕ್ಕೆ ಯಾವ ವಿಧದಲ್ಲಿಯೂ ಅವಕಾಶ ಕೊಡಬಾರದು.KanCCh 106.1

    ಸೈತಾನನ ಶೋಧನೆಗಳಿಗೆ ಒಳಗಾಗದಂತೆ ತಪ್ಪಿಸಿಕೊಳ್ಳುವ ಸುರಕ್ಷಿತವಾದ ಏಕೈಕ ಮಾರ್ಗವೆಂದರೆ ಕಾಫಿ, ಚಹಾ, ತಂಬಾಕು, ಮದ್ಯಪಾನ, ಅಫೀಮು, ಚರಸ್, ಗಾಂಜಾ ಮುಂತಾದ ಮಾದಕ ಪದಾರ್ಥಗಳಿಂದ ದೂರವಿರಬೇಕು. ಈ ಕಾಲದಲ್ಲಿ ಜೀವಿಸುವವರು ಬಲವಾದ ಇಚ್ಚಾಶಕ್ತಿ ಹೊಂದಿ, ದೇವರ ಸಹಾಯದಿಂದ ಇಂತಹ ದುಶ್ಚಟಗಳಿಗೆ ದಾಸರಾಗದೆ ಸೈತಾನನ ಶೋಧನೆಗಳಿಂದ ತಪ್ಪಿಸಿಕೊಳ್ಳಲು, ಹಿಂದಿನ ಕಾಲದಲ್ಲಿ ಜೀವಿಸಿದ್ದವರಿಗಿಂತ ಎರಡರಷ್ಟು ಪ್ರಯತ್ನಿಸಬೇಕು. ಯಾಕೆಂದರೆ ಈಗ ಜೀವಿಸಿರುವವರು ಹಿಂದಿನ ತಲೆಮಾರಿನವರಿಗಿಂತ ಕಡಿಮೆಯಾದ ಇಚ್ಛಾಶಕ್ತಿ (Willpower) ಹೊಂದಿದ್ದಾರೆ. ಇಂತಹ ದುರಭ್ಯಾಸ ಇರುವವರು ತಮ್ಮ ಮಕ್ಕಳಿಗೆ ಇದನ್ನು ವರ್ಗಾಯಿಸುವರು. ಎಲ್ಲಾ ವಿಧವಾದ ಶೋಧನೆಗಳು ಮತ್ತು ಅತಿಯಾದ ಭೋಗಗಳ ಆಸೆಯನ್ನು ಎದುರಿಸಲು ಹೆಚ್ಚಿನ ನೈತಿಕ ಶಕ್ತಿಯ ಅಗತ್ಯವಿದೆ. ಎಲ್ಲಾ ವಿಷಯಗಳಲ್ಲಿಯೂ ಮಿತಸಂಯಮದಿಂದಿರುವುದು ಇವುಗಳನ್ನು ಜಯಿಸಲು ಅಗತ್ಯವಾದ ಏಕೈಕ ಸುರಕ್ಷತೆಯಾಗಿದೆ.KanCCh 106.2

    ಕ್ರೈಸ್ತರು ಎಲ್ಲಾ ವಿಷಯಗಳಲ್ಲಿಯೂ ಮಿತ ಸಂಯಮ ಹೊಂದಿರಬೇಕು. ಈ ಮಿತ ಸಂಯಮವು ಮೊದಲು ನಿಮ್ಮ ಆಹಾರದಿಂದಲೇ ಪ್ರಾರಂಭವಾಗಬೇಕು. ಆಗ ಅವರು ಸ್ವನಿಯಂತ್ರಿಸಿಕೊಳ್ಳಲು ಸಾಧ್ಯವಾಗದ ಬಲಹೀನರಿಗೆ ಮಾದರಿಯಾಗುವರು. ಈ ಜೀವನದಲ್ಲಿ ರೂಢಿಸಿಕೊಂಡ ಅಭ್ಯಾಸಗಳು ಹಾಗೂ ನಿತ್ಯಜೀವವು ನಮ್ಮ ಮಿತಸಂಯಮದ ಮೇಲೆ ಆಧಾರಗೊಂಡಿವೆ ಎಂದು ತಿಳಿದುಕೊಂಡಲ್ಲಿ, ಅವರು ಉಣ್ಣುವುದರಲ್ಲಿ, ಕುಡಿಯುವುದರಲ್ಲಿ ಶಿಸ್ತು ಪಾಲಿಸುವರು ಹಾಗೂ ದೇವರ ಆರೋಗ್ಯಕರ ನಿಯಮಗಳನ್ನು ಅನುಸರಿಸುವರು. ನಮ್ಮ ಉದಾಹರಣೆ ಮತ್ತು ವೈಯಕ್ತಿಕ ಪ್ರಯತ್ನಗಳ ಮೂಲಕ ನಾವು ಅನೇಕರನ್ನು ಇಂತಹ ದುರಭ್ಯಾಸಗಳು, ಅಪರಾಧ ಮತ್ತು ಮರಣದಿಂದ ತಪ್ಪಿಸಬಹುದು. ಆರೋಗ್ಯಕರವಾದ ಹಾಗೂ ಪೋಷಕಾಂಶವುಳ್ಳ ಆಹಾರಗಳನ್ನು ಮಾತ್ರ ತಯಾರಿಸುವುದರ ಮೂಲಕ ನಮ್ಮ ಸಹೋದರಿಯರು ಅನೇಕರಿಗೆ ರಕ್ಷಣಾ ಮಾರ್ಗಕ್ಕೆ ತರುವ ಮಹಾಕಾರ್ಯ ಮಾಡಬಹುದು, ಸಹೋದರಿಯರು ತಮ್ಮ ಅಮೂಲ್ಯ ಸಮಯವನ್ನು ಉಪಯೋಗಿಸಿ ತಮ್ಮ ಮಕ್ಕಳ ಆಹಾರದ ರುಚಿ ಮತ್ತು ಆಪೇಕ್ಷೆಯನ್ನು ರೂಪಿಸಬಹುದು. ಅಲ್ಲದೆ ಎಲ್ಲಾ ವಿಷಯಗಳಲ್ಲಿಯೂ ಹಿತಮಿತವಾಗಿರಬೇಕೆಂದು ಮಕ್ಕಳಿಗೆ ತಿಳಿಸಿ, ಸ್ವಾರ್ಥವನ್ನು ಬಿಟ್ಟು ಇತರರ ಒಳಿತಿಗಾಗಿ ಜೀವಿಸಬೇಕೆಂದು ಉತ್ತೇಜನ ನೀಡಬೇಕು.KanCCh 106.3

    *****

    Larger font
    Smaller font
    Copy
    Print
    Contents