Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಆರೋಗ್ಯ ಸುಧಾರಣೆ

    ನಮ್ಮ ಕೆಲಸಕಾರ್ಯಗಳಲ್ಲಿ ಆರೋಗ್ಯ ಸುಧಾರಣೆಗೆ ಹೆಚ್ಚಿನಗಮನ ನೀಡಬೇಕು.ಸುಧಾರಣೆಗೆ ಮೊದಲು ಇಲ್ಲಿ ಪಶ್ಚಾತ್ತಾಪ, ನಂಬಿಕೆ ಹಾಗೂ ವಿಧೇಯತೆ ಕಂಡುಬರಬೇಕು.ಯಥಾರ್ಥವಾದ ಪ್ರತಿಯೊಂದು ಸುಧಾರಣೆಗಳು ಮೂರನೇದೂತನ ಸಂದೇಶದಕಾರ್ಯವಾಗಿದೆ. ಎಲ್ಲದರಲ್ಲಿಯೂ ಹಿತಮಿತವಾಗಿದ್ದು, ಸಂಯಮದಿಂದಿರುವ ಸುಧಾರಣೆಗೆಹೆಚ್ಚು ಗಮನ ನಾವು ನೀಡಬೇಕು. ನಿಜವಾದ ಮಿತಸಂಯಮದ ಸಿದ್ಧಾಂತಗಳ ಬಗ್ಗೆ ಆಟ್ವೆಂಟಿಸ್ಟರು ಎಲ್ಲಾ ಕೂಟಗಳಲ್ಲಿಯೂ ತಿಳಿಸಿ ಹೇಳಬೇಕು. ಕೆಟ್ಟ ಅಭ್ಯಾಸಗಳಿಗೆದಾಸರಾಗಿರುವವರ ವಿಷಯದಲ್ಲಿ ಹೆಚ್ಚಿನ ಗಮನಕೊಡಬೇಕು. ಅವರನ್ನು ಕ್ರಿಸ್ತನ ಶಿಲುಬೆಯಬಳಿಗೆ ನಡೆಸಬೇಕು.KanCCh 267.3

    ಲೋಕದ ಅಂತ್ಯಕಾಲವು ಸಮೀಪಿಸುತ್ತಿರುವ ಈ ಸಮಯದಲ್ಲಿ ನಾವು ಆರೋಗ್ಯದಲ್ಲಿಸುಧಾರಣೆ ಹಾಗೂ ಎಲ್ಲಾ ವಿಷಯದಲ್ಲಿಯೂ ಮಿತಸಂಯಮ ಸಾಧಿಸಬೇಕಾಗಿದೆ.ಜನರಿಗೆ ಈ ವಿಷಯವಾಗಿ ಹೆಚ್ಚಿನ ತಿಳುವಳಿಕೆ ಕೊಡಬೇಕು. ಬರೀ ಮಾತಿನಿಂದಲ್ಲ,ಬದಲಾಗಿ ಆಚರಣೆಯಲ್ಲಿ ನಾವು ಅದನ್ನು ಪಾಲಿಸಬೇಕು. ಇದು ಇತರರ ಮೇಲೆಗಮನಾರ್ಹ ಪ್ರಭಾವ ಬೀರುತ್ತದೆ.KanCCh 268.1

    *****